Last Updated:
ಕೊಲಂಬಿಯಾದ ಪಶ್ಚಿಮ ಕೊಲಂಬಿಯಾದಲ್ಲಿ ಸಂಭವಿಸಿದ 7.4 ತೀವ್ರತೆಯ ಭಾರಿ ಭೂಕಂಪದಿಂದ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವು ಕಟ್ಟಡಗಳು ಕುಸಿದುಬಿದ್ದಿವೆ.
ಬೊಗೋಟಾ: ದಕ್ಷಿಣ ಅಮೆರಿಕಾದ ಕೊಲಂಬಿಯಾ (Colombia) ದೇಶದ ಪಶ್ಚಿಮ ಭಾಗದಲ್ಲಿ ಸೋಮವಾರ 7.4 ತೀವ್ರತೆಯ ಭೂಕಂಪ (7.4-magnitude earthquake) ಸಂಭವಿಸಿ ಕನಿಷ್ಠ 20 ಜನರು ಸಾವನ್ನಪ್ಪಿರುವ ಘಟನೆ ಸೋಮವಾರ ಬೆಳಿಗ್ಗೆ (ಸ್ಥಳೀಯ ಸಮಯ) ನೆಡೆದಿದೆ. ಭೂಕಂಪವು ಚೋಕೋ ಪ್ರಾಂತ್ಯದ ( Choco province) ಸ್ಯಾನ್ ಜೋಸ್ ಡೆಲ್ ಪಾಲ್ಮರ್ (San José del Palmar) ಬಳಿ ಸಂಭವಿಸಿದೆ. ಇದು ರಾಜಧಾನಿ ಬೊಗೊಟಾದಿಂದ ಸುಮಾರು 400 ಕಿಮೀ ಪಶ್ಚಿಮಕ್ಕಿದೆ. ಜನರು ತಮ್ಮ ದಿನವನ್ನು ಪ್ರಾರಂಭಿಸುತ್ತಿದ್ದಂತೆ, ನೆಲ ಇದ್ದಕ್ಕಿದ್ದಂತೆ ತೀವ್ರವಾಗಿ ಕಂಪಿಸಿದ್ದು, ಇಡೀ ದೇಶವೇ ನಡುಗಿದೆ. ಕಂಪನಗಳು ತೀವ್ರತೆ ಬೆಚ್ಚಿದ ಜನರು ತಮ್ಮ ಮನೆಗಳು, ಕಚೇರಿಗಳು ಮತ್ತು ಎತ್ತರದ ಕಟ್ಟಡಗಳನ್ನು ಬಿಟ್ಟು ಜೀವ ಉಳಿಸಿಕೊಳ್ಳುವುದಕ್ಕಾಗಿ ಬೀದಿಗೆ ಮತ್ತು ತೆರೆದ ಮೈದಾನಗಳಿಗೆ ಓಡಿ ಬಂದಿದ್ದಾರೆ.














