CM Vijay: ರಾಹುಲ್ ಗಾಂಧಿ ವಶಕ್ಕೆ ಪಡೆದಿದ್ದನ್ನು ಖಂಡಿಸಿದ ತಮಿಳುನಾಡು ಸಿಎಂ! ನೀಟ್ ಪರೀಕ್ಷೆ ಬಗ್ಗೆ ವಿಜಯ್ ಆ ಮಾತು ಹೇಳಿದ್ಯಾಕೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ರಾಹುಲ್​ ಗಾಂಧಿ - ಸಿಎಂ ವಿಜಯ್​


Last Updated:

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ರು. ಸದ್ಯ, ಈ ಘಟನೆ ಕುರಿತು ತಮಿಳುನಾಡು ಸಿಎಂ ವಿಜಯ್ ರಿಯಾಕ್ಟ್ ಮಾಡಿದ್ದಾರೆ.

ರಾಹುಲ್​ ಗಾಂಧಿ - ಸಿಎಂ ವಿಜಯ್​
ರಾಹುಲ್​ ಗಾಂಧಿ – ಸಿಎಂ ವಿಜಯ್​

ತಮಿಳುನಾಡು: ದೇಶಾದ್ಯಂತ ನೀಟ್​ ದಂಗಲ್​ ಜೋರಾಗಿದೆ. ದೆಹಲಿಯಲ್ಲಿ ಶುರುವಾದ ಹೋರಾಟದ ಕಿಚ್ಚು ಇಡೀ ದೇಶವ್ಯಾಪಿ ಆವರಿಸಿದೆ. ಬೆಂಗಳೂರು, ಹೈದರಾಬಾದ್​, ಕೇರಳ ಸೇರಿದಂತೆ ದೇಶದ ಹಲವು ಕಡೆ ಪ್ರತಿಭಟನೆ ನಡೆಯುತ್ತಿದೆ. ನೀಟ್ ಪರೀಕ್ಷೆ (NEET Exam) ಅಕ್ರಮ ಖಂಡಿಸಿ ನಿನ್ನೆ ದೆಹಲಿಯಲ್ಲಿ ಕಾಂಗ್ರೆಸ್ (Congress) ನಾಯಕರು ಮೋದಿ ನಿವಾಸದ (PM House) ಬಳಿ ಪ್ರತಿಭಟನೆ ನಡೆಸಿದ್ರು. ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ (Rahul Gandhi) ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ರು. ಸದ್ಯ, ಈ ಘಟನೆ ಕುರಿತು ತಮಿಳುನಾಡು ಸಿಎಂ ವಿಜಯ್​ (CM Vijay) ರಿಯಾಕ್ಟ್​ ಮಾಡಿದ್ದಾರೆ. ರಾಹುಲ್​ ಗಾಂಧಿ ಅವರನ್ನು ವಶಕ್ಕೆ ಪಡೆದಿದ್ದನ್ನು ಸಿಎಂ ವಿಜಯ್​ ಖಂಡಿಸಿದ್ದಾರೆ.

‘ಕೇಂದ್ರ ಸರ್ಕಾರದ ನಡೆ ಖಂಡನೀಯ’

ಈ ಬಗ್ಗೆ ತಮ್ಮ ಎಕ್ಸ್​​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಸಿಎಂ ವಿಜಯ್, ‘ನೀಟ್ ಪರೀಕ್ಷೆಯ ಅಕ್ರಮಗಳ ವಿರುದ್ಧ ದೆಹಲಿಯಲ್ಲಿ ನಡೆದ ಯುವಕರ ಪ್ರತಿಭಟನೆಯನ್ನು ಬೆಂಬಲಿಸಿ ಹೋರಾಟಕ್ಕಿಳಿದಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವಾರು ನಾಯಕರನ್ನು ವಶಕ್ಕೆ ಪಡೆದಿರುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಕೇಂದ್ರ ಸರ್ಕಾರದ ಈ ಕ್ರಮಗಳು ಖಂಡನೀಯ’ ಎಂದು ಬರೆದುಕೊಂಡಿದ್ದಾರೆ. ನಿನ್ನೆ ನಡೆದ ಅಹಿತಕರ ಘಟನೆಯನ್ನು ಖಂಡಿಸಿ, ವಿರೋಧ ಪಕ್ಷಗಳ ಪರವಾಗಿ ಸಂಸತ್ತಿನ ಸಂಕೀರ್ಣದಲ್ಲಿ ಇಂದು ನಡೆಯಲಿರುವ ಪ್ರತಿಭಟನೆಗೆ ಟಿವಿಕೆ ಪಕ್ಷವು ಸಂಪೂರ್ಣ ಬೆಂಬಲವನ್ನು ಸೂಚಿಸುತ್ತದೆ.
ನೀಟ್​ ಪರೀಕ್ಷೆ ರದ್ದುಗೊಳಿಸಬೇಕು

ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ  ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಸಿಎಂ ವಿಜಯ್​, ನೀಟ್ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ವಿದ್ಯಾರ್ಥಿಗಳ ಮೇಲೆ ಮಾತ್ರವಲ್ಲದೆ ಅವರ ಕುಟುಂಬಗಳ ಮೇಲೂ ಹೆಚ್ಚು ಪರಿಣಾಮ ಬೀರುತ್ತಿದೆ. ನೀಟ್ ಪರೀಕ್ಷೆ ಇತ್ಯಾದಿಗಳನ್ನು ರದ್ದುಗೊಳಿಸಬೇಕಾದರೆ, ಮೊದಲು ಶಿಕ್ಷಣವನ್ನು ರಾಜ್ಯದ ಆಡಳಿತಕ್ಕೆ ವರ್ಗಾಯಿಸಬೇಕು. ಅದೊಂದೇ ಶಾಶ್ವತ ಪರಿಹಾರ. ಅದರಲ್ಲಿ ಯಾವುದೇ ಕಾನೂನು ಮತ್ತು ಕಾರ್ಯವಿಧಾನದ ಸಮಸ್ಯೆಗಳಿದ್ದರೆ, ಮಧ್ಯಂತರ ಪರಿಹಾರವಾಗಿ, ವಿಶೇಷ ಸಮಕಾಲೀನ ಪಟ್ಟಿಯನ್ನು ರಚಿಸಬೇಕು ಮತ್ತು ಆ ಮೂಲಕ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಮೂಲಕ, ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣ ಸೇರಿದಂತೆ ವಿಷಯಗಳಲ್ಲಿ ರಾಜ್ಯಗಳಿಗೆ ಸಂಪೂರ್ಣ ಅಧಿಕಾರ ನೀಡಬೇಕು. ಶಾಶ್ವತ ಪರಿಹಾರ ಮತ್ತು ಮಧ್ಯಂತರ ಪರಿಹಾರಕ್ಕಾಗಿ ಇದು ನಮ್ಮ ದೃಷ್ಟಿಕೋನವಾಗಿದೆ. ಪಕ್ಷ ಸ್ಥಾಪನೆಯಾದಾಗಿನಿಂದ ನಮ್ಮ ಪಕ್ಷದ ಪರವಾಗಿ ನಡೆದ ಶಿಕ್ಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾವು ಇದನ್ನು ಆಳವಾಗಿ ಒತ್ತಿ ಹೇಳಿದ್ದೇವೆ.

ಜೊತೆಗೆ, ಕೇಂದ್ರ ಸರ್ಕಾರವು ನಮ್ಮ ಜನರ ಭಾವನೆಗಳನ್ನು ಮತ್ತು ವಿದ್ಯಾರ್ಥಿಗಳ ಭಾವನೆಗಳನ್ನು ಗೌರವಿಸಬೇಕು. ಇದರ ಅಭಿವ್ಯಕ್ತಿಯಾಗಿ, ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಈ ಸಮಸ್ಯೆಗೆ ಇದೊಂದೇ ಪರಿಹಾರ ಎಂದು ನಾವು ಪುನರುಚ್ಚರಿಸುತ್ತೇವೆ ಎಂದು ಸಿಎಂ ವಿಜಯ್ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮತ್ತೊಂದು ಸುತ್ತಿನ ಮಾತುಕತೆಗೆ ಕೇಂದ್ರ ಸಜ್ಜು

ಕೇಂದ್ರ ಸರ್ಕಾರ ಬುಧವಾರ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದ ಪ್ರತಿಭಟನೆಯ ಪ್ರತಿನಿಧಿಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ. ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರೊಂದಿಗಿನ ತಡರಾತ್ರಿಯ ಸಭೆಯ ನಂತರ ಪರಿಹಾರದ ಭರವಸೆ ಇದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಬುಧವಾರ ಶೀಘ್ರದಲ್ಲೇ ಸಿಜೆಪಿ ಪ್ರತಿನಿಧಿಗಳನ್ನು ಭೇಟಿಯಾಗಬಹುದು ಎಂದು ಮೂಲಗಳು ಸೂಚಿಸುತ್ತವೆ. ಅವರು ಮತ್ತು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮಂಗಳವಾರ ರಾತ್ರಿ ಮೇದಾಂತ ಆಸ್ಪತ್ರೆಯಲ್ಲಿ ಸೋನಮ್ ವಾಂಗ್ಚುಕ್ ಅವರನ್ನು ಭೇಟಿಯಾದ ನಂತರ ಈ ಸಭೆ ನಡೆದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed