CJP Protest: ‘ಕಾಕ್ರೋಚ್‌’ಗಳಿಗೆ ಬಿಗ್ ಶಾಕ್! ಸಿಜೆಪಿ ಮುಖಂಡರ ವಿರುದ್ಧ ದೆಹಲಿ ಪೊಲೀಸರಿಂದ ಮಹತ್ವದ ಕ್ರಮ! ಏನದು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಿಜೆಪಿ ಮುಖಂಡರು


Last Updated:

ಸಿಇಸಿ ಜ್ಞಾನೇಂದ್ರ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗೆ ಕರೆ ಕೊಟ್ಟಿದ್ದ ಸಿಜೆಪಿ ಮುಖಂಡರಿಗೆ ಬಿಗ್ ಶಾಕ್ ಎದುರಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಿಜೆಪಿ ಮುಖಂಡರು
ಸಿಜೆಪಿ ಮುಖಂಡರು

ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಸ್‌ಐಆರ್‌ (SIR) ವಿಚಾರಕ್ಕೆ ಶುರುವಾಗಿರೋ ಕಿಚ್ಚು ಇವತ್ತು ರಾಷ್ಟ್ರ ರಾಜಧಾನಿಯಲ್ಲಿ ಸ್ಫೋಟಗೊಂಡಿತ್ತು. ಆಯೋಗದ ಅಧ್ಯಕ್ಷ ಜ್ಞಾನೇಂದ್ರ ಕುಮಾರ್ (Gyanendra Kumar) ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ (CJP) ಸಂಸ್ಥಾಪಕ ಅಭಿಷೇಕ್ ದೀಪ್ಕೆ (Abhijeet Dipke) ಕರೆ ಕೊಟ್ಟಿದ್ರು. ಜಂತರ್ ಮಂತರ್‌ನಲ್ಲಿ ಒಟ್ಟಾಗಿ ಸೇರಿ ಈ ಹಿಂದೆ ನೀಟ್ ಹೋರಾಟದ ಮಾದರಿಯಲ್ಲೇ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನಗಳೂ ನಡೆದಿದ್ವು. ಆದ್ರೆ, ಇವತ್ತು ದಿಲ್ಲಿ ಪೊಲೀಸರ ಮುಂದೆ ಕಾಕ್ರೋಚ್‌ಗಳ ಆಟ ನಡೆಯಲೇ ಇಲ್ಲ.

ಯಾರು ಎಲ್ಲೆಲ್ಲಿ ಇದ್ರೋ ಅಲ್ಲಿಂದಲೇ ಪೊಲೀಸರು ಅವ್ರನ್ನೆಲ್ಲ ಎತ್ತಾಕ್ಕೊಂಡು ಹೋದ್ರು. ಕೆಲವರು ಹೋರಾಟಕ್ಕೆ ಮುಂದಾದ್ರೂ ಕೂಡ ಅದರಲ್ಲಿ ಯಶಸ್ಸು ಸಿಗಲಿಲ್ಲ. ಕಾಕ್ರೋಚ್‌ಗಳ ಪ್ರತಿಭಟನೆ ತಡೆ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವ ಉದ್ದೇಶದಿಂದಾಗಿ, 30 ಸಾವಿರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿತ್ತು. ದೆಹಲಿಯ ಮೆಟ್ರೋದ 45 ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನ ಬಂದ್ ಮಾಡಲಾಗಿತ್ತು. ಅಲ್ಲದೆ ರೈಲ್ವೆ ಇಲಾಖೆಯು 75 ರೈಲುಗಳನ್ನು ರದ್ದುಗೊಳಿಸಲಾಗಿತ್ತು.
ಇದನ್ನೂ ಓದಿ: Nana Patekar: ನಾನಾ ಪಾಟೇಕರ್ ಸಾವಿನ ಕಾರಣ ಬಹಿರಂಗ! ಮರಣೋತ್ತರ ಪರೀಕ್ಷಾ ವರದಿಯಲ್ಲಿದೆ ಆ ಸಮಸ್ಯೆ ಬಗ್ಗೆ ಸುಳಿವು!

ಅಲ್ಲದೆ ಜನಪಥ್‌, ಕರ್ತವ್ಯ ಪಥ್‌ ಕ್ರಾಸಿಂಗ್ ಸುತ್ತಮುತ್ತ ಸುಮಾರು ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ಇಂಟರ್ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿತ್ತು. ನವದೆಹಲಿ ಜಿಲ್ಲೆಯನ್ನ 20 ವಲಯಗಳಾಗಿ ವಿಂಗಡಿಸಿ, ಪ್ರಮುಖ ಸ್ಥಳಗಳಲ್ಲಿ ಬಹುಹಂತದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಮಧ್ಯ ದೆಹಲಿಯಲ್ಲಿ ಸೆಕ್ಷನ್ 163 ಜಾರಿಗೊಳಿಸಲಾಗಿತ್ತು. ಹೀಗಿದ್ರೂ ಪ್ರತಿಭಟನೆಗೆ ಮುಂದಾಗಿದ್ದ ನಾಯಕರನ್ನ ಎಲ್ಲೆಲ್ಲಿ ಇದ್ರೋ ಅಲ್ಲಲ್ಲೇ ವಶಕ್ಕೆ ಪಡೆಯಲಾಯ್ತು.

ವಿಮಾನದಲ್ಲಿದ್ದಾಗಲೇ ಕಾಕ್ರೋಚ್​ಗಳು ವಶಕ್ಕೆ!

ಸಿಜೆಪಿ ಪ್ರತಿಭಟನೆ ಹತ್ತಿಕ್ಕುವ ಸಲುವಾಗಿ ರಾತ್ರಿಯಿಂದ್ಲೇ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ರು. ಸಾಮಾಜಿಕ ಜಾಲತಾಣದ ಇನ್‌ಫ್ಲುಯೆನ್ಸರ್ ಧ್ರುವ್ ರಾಠಿ ಅವರನ್ನ ಗುರುಗ್ರಾಮದ ಸೆಕ್ಟರ್ 56ರಲ್ಲಿರುವ ನಿವಾಸದಿಂದ ಪೊಲೀಸರು ಬೆಳಗ್ಗೆಯೇ ವಶಕ್ಕೆ ಪಡೆದುಕೊಂಡ್ರು. ಮತ್ತೊಂದೆಡೆ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ನೇರ ವಿಮಾನದೊಳಗೇ ಪ್ರವೇಶಿಸಿದ ಪೊಲೀಸರು, ಅವ್ರನ್ನ ವಶಕ್ಕೆ ಪಡೆದುಕೊಂಡ್ರು. ಈ ವೇಳೆ ವಿಮಾನದಲ್ಲಿ ಹೈಡ್ರಾಮವೇ ನಡೆದೋಯ್ತು. ತಮ್ಮನ್ನ ಪೊಲೀಸರು ವಶಕ್ಕೆ ಪಡೆಯುವ ಮುನ್ಸೂಚನೆಯನ್ನ ಮೊದಲೇ ಅರಿತಿದಿದ್ದ ಅಭಿಜಿತ್ ದೀಪ್ಕೆ, ಜಂತರ್ ಮಂತರ್‌ನಲ್ಲಿ ಕರೆ ನೀಡಲಾಗಿದ್ದ ಪ್ರತಿಭಟನೆಯ ಹೊಣೆಯನ್ನ ಅಜಿಂಕ್ಯ ಶಿಂಧೆಗೆ ವಹಿಸಿದ್ರು.

ಕಾಕ್ರೋಚ್​ ಮುಖಂಡರು ಹೊರತುಪಡಿಸಿ ಎಲ್ಲರೂ ರಿಲೀಸ್​!

ಇನ್ನು, ಬೆಳಗ್ಗೆ ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ರಾತ್ರಿಯಾಗುತ್ತಿದ್ದಂತೆ ದೆಹಲಿ ಪೊಲೀಸರು, ಅಭಿಜಿತ್​ ದೀಪ್ಕೆ, ಅಶುತೋಷ್​ ರಾಂಕಾ, ಸೌರವ್​ ದಾಸ್​ ಅವರನ್ನು ಹೊರತುಪಡಿಸಿ ಉಳಿದ ಎಲ್ಲರನ್ನೂ ಬಿಡುಗಡೆಗೊಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸರು, ಸಿಜೆಪಿ ನಾಯಕರನ್ನು ಹೊರತುಪಡಿಸಿ ಉಳಿದೆಲ್ಲ ಬಂಧಿತರನ್ನು ಬಿಡುಗಡೆ ಮಾಡಲಾಗಿದೆ. ಆದ್ರೆ, ಸಿಜೆಪಿ ನಾಯಕರಿಗೆ ಸೂಕ್ತ ಕಾನೂನು ಪ್ರಕ್ರಿಯನ್ನು ಅನುಸರಿಸಲಾಗುವುದು ಎಂದು ಎಎನ್​ಐ ವರದಿ ಮಾಡಿದೆ.

ಬೃಹತ್ ಪ್ರತಿಭಟನೆಗೆ ಮುಂದಾದ ಇಂಡಿಯಾ ಕೂಟ

ಕಾಕ್ರೋಚ್​​ ಹೈಡ್ರಾಮಾದ ಬೆನ್ನಲ್ಲೇ, ಇಂಡಿಯಾ ಕೂಟ ಕೂಡ ಜ್ಞಾನೇಂದ್ರ ಕುಮಾರ್ ರಾಜೀನಾಮೆಗಾಗಿ ರಣಕಹಳೆ ಮೊಳಗಿಸಿದೆ. ಸೋಮವಾರ ದಿಲ್ಲಿಯಲ್ಲಿ ಬೃಹತ್ ಪ್ರತಿಭಟನೆಗೆ ಮುಂದಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಾಳೆ ಭಾನುವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳ ಪ್ರಮುಖ ಸಭೆಯನ್ನು ಕರೆದಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports