Last Updated:
ಕಲರ್ಸ್ ಕನ್ನಡ ಚಿತ್ತಾರ ಅವಾರ್ಡ್ಸ್ ಪ್ರಸಾರದ ಡೇಟ್ ರಿವೀಲ್ ಆಗಿದೆ. 4 ಗಂಟೆಯ ಈ ಸುದೀರ್ಘ ಕಾರ್ಯಕ್ರಮದಲ್ಲಿ ಸ್ಟಾರ್‌ಗಳ ಸಮಾಗಮ ಆಗಿದೆ. ತಾರೆಯರ ಮನರಂಜನಾ ಕಾರ್ಯಕ್ರಮವೂ ಇದೆ. ಈ ಭಾನುವಾರ ಜೂನ್-21 ರಂದು ಸಂಜೆ 5 ಗಂಟೆ ಇದು ಪ್ರಸಾರ ಆಗುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕಾಂತಾರ ಚಿತ್ರದ (Kantara Movie) ಗೆಲುವು ನಮ್ಮ ಹೆಮ್ಮೆ ಅಷ್ಟೆ ಅಲ್ಲ. ಕನ್ನಡಿಗರ ಹೆಮ್ಮೆ ಆಗಿದೆ ಅಂತ ಅಷ್ಟೆ ಹೆಮ್ಮೆಯಿಂದಲೇ ರಿಷಬ್ ಶೆಟ್ರು (Rishab Shetty) ಹೇಳಿಕೊಂಡಿದ್ದಾರೆ. ನಿಮ್ಮಿಂದಲೆ ನಾನು ಅನ್ನೋದನ್ನ ಶ್ರೀಲೀಲಾ (Sreeleela) ಹೇಳಿದ್ದಾರೆ. ರುಕ್ಮಿಣಿ ವಸಂತ್, (Rukmini Vasanth) ಶನೀಲ್ ಗೌತಮ್, ಜೆ.ಪಿ.ತುಮ್ಮಿನಾಡ್ ಹೀಗೆ ದೊಡ್ಡ ಲಿಸ್ಟ್ ಆಗುತ್ತದೆ. ಇವರೆಲ್ಲ ಇತ್ತೀಚಿಗೆ ಕಲರ್ಸ್ ಕನ್ನಡದ ಚಿತ್ತಾರ ಸ್ಟಾರ್ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಪ್ರಶಸ್ತಿಗಳನ್ನ ಪಡೆದು ಮೇಲೆ ಹೇಳಿದಂತೆ ತಮ್ಮ ಮನದ ಮಾತುಗಳನ್ನ ಹೇಳಿಕೊಂಡಿದ್ದಾರೆ. ಆದರೆ, ಇವರ ಮಾತುಗಳು ಸೇರಿದಂತೆ ಇಡೀ ಸಂಭ್ರಮವನ್ನ 3 ಗಂಟೆಗೂ ಹೆಚ್ಚು ಸಮಯದ ಕಾರ್ಯಕ್ರಮದಲ್ಲಿ ನೋಡಬಹುದು. ಅದು ಇದೇ ತಿಂಗಳು ಜೂನ್-21 ರಂದು ಪ್ರಸಾರ ಆಗುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಚಿತ್ತಾರ ಸ್ಟಾರ್ ಅವಾರ್ಡ್ಸ್ 4 ಗಂಟೆ ಸುದೀರ್ಘ ಸಂಭ್ರಮ
ಈ ಸಲವು ತಾರೆಯರು ಧರೆಗೆ ಇಳಿದಿದ್ದರು. ಇಡೀ ದೇಶವೇ ಮೆಚ್ಚುವಂತ ಕೆಲಸ ಮಾಡಿರೋ ರಿಷಬ್ ಶೆಟ್ರು ಆಗಮಿಸಿದ್ದರು. ಪತ್ನಿ ಪ್ರಗತಿ ಶೆಟ್ಟಿ ಜೊತೆ ಆಗಿದ್ದರು. ಪಕ್ಕದ ಟಾಲಿವುಡ್ ಅಲ್ಲಿ ಹೆಸರು ಮಾಡ್ತಿರೋ ಡಾಕ್ಟರ್ ಶ್ರೀಲೀಲಾ ಸಹ ಆಗಮಿಸಿದ್ದರು.
ಚಿತ್ತಾರ ಸ್ಟಾರ್ ಅವಾರ್ಡ್ಸ್ ಅಲ್ಲಿ ಸು ಫ್ರಮ್ ಸೋ ಚಿತ್ರ ಡೈರೆಕ್ಟರ್ ಜೆ.ಪಿ.ತುಮ್ಮಿನಾಡ್ ಪ್ರಶಸ್ತಿ ಪಡೆದಿದ್ದಾರೆ. ಇದೇ ಚಿತ್ರದ ರವಿ ಅಣ್ಣ ಖ್ಯಾತಿಯ ನಟ ಶನೀಲ್ ಗೌತಮ್ ಅವರಿಗೂ ಇಲ್ಲಿ ಪ್ರಶಸ್ತಿ ಬಂದಿದೆ.
ಈ ರೀತಿ ಪ್ರಶಸ್ತಿಗಳು ಬಂದಾಗ ಜವಾಬ್ದಾರಿ ಜಾಸ್ತಿ ಆಗುತ್ತದೆ ಅಂತ ಶನೀಲ್ ಗೌತಮ್ ಹೇಳಿಕೊಂಡಿದ್ದಾರೆ. ಶ್ರೀಲೀಲಾ ಅವರಿಗೂ ಇಲ್ಲಿ ಪ್ರಶಸ್ತಿ ಬಂದಿದೆ.
ಇಲ್ಲಿ ಅವಾರ್ಡ್ ಸ್ವೀಕರಿಸಿದ ಶ್ರೀಲೀಲಾ ತಮ್ಮ ಮನದ ಮಾತುಗಳನ್ನ ಹೇಳಿಕೊಂಡಿದ್ದಾರೆ. ನಾನು ಏನೆ ಇದ್ದರು ಅದು ನಿಮ್ಮಿಂದಲೇ ಆಗಿದೆ. ಇದು ನಿನ್ನ ಕನಸ ಅಂತ ತೋರಿಸಿಕೊಟ್ಟವರೇ ನೀವು ಅಂತಲೇ ಜನರ ಪ್ರೀತಿಯ ಕುರಿತು ಹೇಳಿಕೊಂಡಿದ್ದಾರೆ.
ಚಂದನವನದ ತಾರೆಯರ ಮಹಾ ಸಮಾಗಮ
ಕಾಂತಾರದ ನಾಯಕಿ ನಟಿ ರುಕ್ಮಿಣಿ ವಸಂತ್ ಅವರೂ ಮನದುಂಬಿ ಮಾತನಾಡಿದ್ದಾರೆ. ನೀವು ಕೊಟ್ಟ ಪ್ರೋತ್ಸಾಹ, ಬೆಂಬಲ, ಆಶೀರ್ವಾದಕ್ಕೆ ನಾನು ಸದಾ ಚಿರಋಣಿ ಅಂತಲೇ ರುಕ್ಮಿಣಿ ಹೇಳಿಕೊಂಡಿದ್ದಾರೆ.
ರಿಷಬ್ ಶೆಟ್ಟು ತುಂಬಾನೆ ಹೆಮ್ಮೆಯಿಂದಲೇ ಮಾತನಾಡಿದ್ದಾರೆ. ಕಾಂತಾರ ಚಿತ್ರದ ಗೆಲುವು ನಮ್ದಷ್ಟೆ ಅಲ್ಲ. ಇದು ಕನ್ನಡಿಗರ ಸ್ವತ್ತು ಅಂತಲೇ ಹೇಳಿಕೊಂಡಿದ್ದಾರೆ.
ಕಲರ್ಸ್ ಕನ್ನಡದ ಈ ಕಾರ್ಯಕ್ರಮ ಜೂನ್-21 ರಂದು ಪ್ರಸಾರ ಆಗತ್ತಿದೆ. ಭಾನುವಾರ ಸಂಜೆ -5 ಗಂಟೆ ಇದು ಟೆಲಿಕಾಸ್ಟ್ ಆಗುತ್ತಿದೆ.
ಈ ಕಾರ್ಯಕ್ರಮದ ಪ್ರೋಮೋ ಈಗಾಗಲೇ ರಿಲೀಸ್ ಆಗಿದೆ. ಕಲರ್ಸ್ ಕನ್ನಡದ ಇನ್‌ಸ್ಟಾಗ್ರಾಮ್ ಅಲ್ಲಿಯೇ ಇದು ಶೇರ್ ಆಗಿದೆ. ಈ ಕಾರ್ಯಕ್ರಮದ ಅಧಿಕೃತ ಮಾಹಿತಿಯನ್ನ ಚಾನೆಲ್ ಮಾಧ್ಯಮಗಳಿಗೂ ಹಂಚಿಕೊಂಡಿದೆ. ಕೆಲವು ಫೋಟೋಗಳು ಶೇರ್ ಆಗಿವೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jun 20, 2026 11:02 PM IST













