Chittara Awards: ಚಿತ್ತಾರ ಸ್ಟಾರ್ ಅವಾರ್ಡ್ಸ್ ಸಂಭ್ರಮ; ಕಾಂತಾರ ಗೆಲುವು ಕನ್ನಡಿಗರ ಹೆಮ್ಮೆ ಎಂದ ರಿಷಬ್ ಶೆಟ್ಟಿ! | | ACTPnews

Colors Kannada Chittara Star Awards Telecast Date Promo Latest Updates


ಜೂನ್-21 ರಂದು ಪ್ರಸಾರ

ಚಿತ್ತಾರ ಸ್ಟಾರ್ ಅವಾರ್ಡ್ಸ್ ಕಾರ್ಯಕ್ರಮ ಪ್ರಸಾರದ ಡೇಟ್ ಮತ್ತು ಟೈಮ್ ಫಿಕ್ಸ್ ಆಗಿದೆ. ಜೂನ್-21 ರಂದು ಈ ಕಾರ್ಯಕ್ರಮ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ.

ಕಾಂತಾರ ಶೆಟ್ರು ಏನಂದ್ರು

ಸಂಜೆ 5 ಗಂಟೆಗೆ ಈ ಕಾರ್ಯಕ್ರಮ ಟೆಲಿಕಾಸ್ಟ್ ಆಗುತ್ತಿದೆ. ಆದರೆ, ಇದು ಸಣ್ಣ ಪುಟ್ಟ ಕಾರ್ಯಕ್ರಮ ಅಲ್ವೆ ಅಲ್ಲ. ರಾತ್ರಿ 9 ಗಂಟೆವರೆಗೂ ಈ ಕಾರ್ಯಕ್ರಮ ಪ್ರಸಾರ ಆಗುತ್ತದೆ.

4 ಗಂಟೆ ಸುದೀರ್ಘ ಮನರಂಜನೆ

ಚಿತ್ತಾರ ಸ್ಟಾರ್ ಅವಾರ್ಡ್ಸ್ ಬರೋಬ್ಬರಿ 4 ಗಂಟೆ ಪ್ರಸಾರ ಆಗುತ್ತಿದೆ. ಅಷ್ಟು ಸುದೀರ್ಘವಾದ ಕಾರ್ಯಕ್ರಮ ಇದಾಗಿದೆ. ಇದರಲ್ಲಿ ಮನರಂಜನೆಗೂ ಹೆಚ್ಚಿನ ಒತ್ತು ಕೊಡಲಾಗಿದೆ.

ಯಾರೆಲ್ಲ ಇದ್ದರು ಗೊತ್ತಾ

ಚಿತ್ತಾರ ಅವಾರ್ಡ್ಸ್ ಅಲ್ಲಿ ಕಾಂತಾರ ಚಿತ್ರ ಖ್ಯಾತಿಯ ರಿಷಬ್ ಶೆಟ್ರು ಆಗಮಿಸಿದ್ದರು. ಪತ್ನಿ ಪ್ರಗತಿ ಶೆಟ್ಟಿ ಸಾಥ್ ಕೊಟ್ಟಿದ್ದರು. ಕಾಂತಾರ ಚಾಪ್ಟರ್ ಒನ್ ಚಿತ್ರದ ನಾಯಕಿ ರುಕ್ಮಿಣಿ ವಸಂತ್ ಸಹ ಆಗಮಿಸಿ ಅವಾರ್ಡ್ ಪಡೆದುಕೊಂಡಿದ್ದಾರೆ.

ಸು ಫ್ರಮ್ ಸೋ ಚಿತ್ರದ ರವಿ ಅಣ್ಣ ಖ್ಯಾತಿಯ ಶನೀಲ್ ಗೌತಮ್, ಜೆ.ಪಿ.ತುಮ್ಮಿನಾಡ್, ನವೀನ್ ಶಂಕರ್, ಸೋನಲ್ ಮೊಂಥೆರೋ, ಶ್ರೀಲೀಲಾ ಇನ್ನು ಅನೇಕರು ಇಲ್ಲಿ ಅವಾರ್ಡ್ ಪಡೆದಿದ್ದಾರೆ. ತಮ್ಮ ಮನದ ಮಾತುಗಳನ್ನು ಹೇಳಿಕೊಂಡಿದ್ದಾರೆ.

Colors Kannada Chittara Star Awards Telecast Date Promo Latest Updates

4 ಗಂಟೆ ಸುದೀರ್ಘ ಮನರಂಜನೆ
ಗಿಲ್ಲಿ ನಟ ಏನಂದ್ರು ಗೊತ್ತಾ

ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಇಲ್ಲಿ ಅವಾರ್ಡ್ ಪಡೆದರು. ಫಸ್ಟ್ ಟೈಮ್ ಇಷ್ಟು ಜನರ ಎದುರು ಅವಾರ್ಡ್ ಪಡೆದುಕೊಂಡಿದ್ದೇನೆ. ಇದು ತುಂಬಾನೆ ಖುಷಿ ಕೊಟ್ಟಿದೆ ಅಂತಲೂ ಹೇಳಿದ್ದಾರೆ.
ಕಾಂತಾರ ಶೆಟ್ರು ಏನಂದ್ರು

ಕಾಂತಾರ ಚಿತ್ರದ ಯಶಸ್ಸು ನಮಗೆ ಮಾತ್ರ ಹೆಮ್ಮೆ ಅಲ್ಲ, ಇದು ಕನ್ನಡಿಗರ ಸ್ವತ್ತು ಅಂತ ರಿಷಬ್ ಶೆಟ್ರು ವೇದಿಕೆ ಮೇಲೆ ಹೇಳಿದ್ದಾರೆ.

Colors Kannada Chittara Star Awards Telecast Date Promo Latest Updates

ಗಿಲ್ಲಿ ನಟ ಏನಂದ್ರು ಗೊತ್ತಾ

ರುಕ್ಮಿಣಿ ವಸಂತ್ ಏನು ಹೇಳಿದ್ರು; ನಿಮ್ಮ ಪ್ರೋತ್ಸಾಹ, ಬೆಂಬಲ, ಆಶೀರ್ವಾದಕ್ಕೆ ನಾನು ಸದಾ ಚಿರಋಣಿ ಅಂತಲೂ ರುಕ್ಮಿಣಿ ವಸಂತ್ ಹೇಳಿದ್ದಾರೆ.

ಶನೀಲ್ ಗೌತಮ್ ಹೇಳಿದ್ದೇನು

ಶನೀಲ್ ಗೌತಮ್ ಅವರಿಗೂ ಇಲ್ಲಿ ಅವಾರ್ಡ್ಸ್ ಬಂದಿದೆ. ಇದನ್ನ ಸ್ವೀಕರಿಸಿದ ಶನೀಲ್ ಗೌತಮ್ ಮಾತನಾಡಿದ್ದಾರೆ. ನಮ್ಮಂತಹ ಹೊಸಬರಿಗೆ ಅವಾರ್ಡ್ ಬಂದ್ರೆ ಜವಾಬ್ದಾರಿ ಜಾಸ್ತಿ ಆದಂತೆ ಅಂತಲೇ ಹೇಳಿದ್ದಾರೆ.

ಇಲ್ಲಿ ನವೀನ್ ಶಂಕರ್, ಜೆ.ಪಿ.ತುಮ್ಮಿನಾಡ್ ಸೇರಿದಂತೆ ಇನ್ನು ಹಲವರಿಗೆ ಅವಾರ್ಡ್ ಕೊಡಲಾಗಿದೆ. ರಮೇಶ್ ಅರವಿಂದ್, ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಾ, ತೆಲುಗು ಹೆಸರಾಂತ ನಟ ಜಗಪತಿ ಬಾಬು ಸೇರಿದಂತೆ ಇನ್ನು ಅನೇಕರು ಇಲ್ಲಿ ಆಗಮಿಸಿ ಈ ಒಂದು ಸಂಭ್ರಮಕ್ಕೆ ಸಾಕ್ಷಿ ಆಗಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed