Chikkanna Birthday: ಕಾಮಿಡಿ ಹೀರೋ ಚಿಕ್ಕಣ್ಣನಿಗೆ ಹುಟ್ಟುಹಬ್ಬದ ಸಂಭ್ರಮ! ಜೋಡೆತ್ತು ಮಸ್ತ್ ಪೋಸ್ಟರ್ ರಿಲೀಸ್! | | ACTPnews

ಕಾಮಿಡಿ ಹೀರೋ ಚಿಕಣ್ಣನ ಜನ್ಮ ದಿನ; ಜೋಡೆತ್ತು ಮಸ್ತ್ ಪೋಸ್ಟರ್ ರಿಲೀಸ್!


Last Updated:

ಹಾಸ್ಯ ನಾಯಕ ನಟ ಚಿಕ್ಕಣ್ಣ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಜೋಡೆತ್ತು ಚಿತ್ರದ ಮಸ್ತ್ ಪೋಸ್ಟರ್ ರಿಲೀಸ್ ಆಗಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕಾಮಿಡಿ ಹೀರೋ ಚಿಕಣ್ಣನ ಜನ್ಮ ದಿನ; ಜೋಡೆತ್ತು ಮಸ್ತ್ ಪೋಸ್ಟರ್ ರಿಲೀಸ್!
ಕಾಮಿಡಿ ಹೀರೋ ಚಿಕಣ್ಣನ ಜನ್ಮ ದಿನ; ಜೋಡೆತ್ತು ಮಸ್ತ್ ಪೋಸ್ಟರ್ ರಿಲೀಸ್!

ಹಾಸ್ಯ ನಾಯಕ ನಟ ಚಿಕ್ಕಣ್ಣ (Chikkanna) ಮೊದಲು ಏನು ಅಲ್ಲ. ಕುರಿ ಪ್ರತಾಪ್ ಜೊತೆಗೆ ಹಾಸ್ಯ ಮಾಡಿರೋದು ಗೊತ್ತೇ ಇದೆ. ಗಾರೆ ಕೆಲಸ ಮಾಡ್ತಿರೋದು ತಿಳಿದಿದೆ. ಆದರೆ, ಈಗ ಹಾಗಲ್ಲ ಬಿಡಿ. ಚಿಕ್ಕಣ್ಣ (Chikkanna) ನಾಯಕರಾಗಿದ್ದಾರೆ. ಉಪಾಧ್ಯಕ್ಷ ಆದ್ಮೇಲೆ ಮತ್ತೊಂದು ಚಿತ್ರ ಮಾಡಿದ್ದಾರೆ ಇದರಲ್ಲೂ ಇವರು ಹೀರೋ ಆಗಿದ್ದಾರೆ. ಈ ಚಿತ್ರಕ್ಕೆ ಲಕ್ಷ್ಮಿಪುತ್ರ (lakshmiputhra) ಅನ್ನುವ ಹೆಸರಿಟ್ಟಿದ್ದಾರೆ. ತಾರಾ ಅನುರಾಧಾ ಅವರು ಈ ಚಿತ್ರದಲ್ಲಿದ್ದಾರೆ. ಈ ಚಿತ್ರದ ವಿಚಾರ ಒಂದು ಕಡೆ ಆದರೆ, ಇದೇ ಚಿಕ್ಕಣ್ಣನ ಇನ್ನೊಂದು ಸಿನಿಮಾ ಪೋಸ್ಟರ್ ಗಮನ ಸೆಳೆಯುತ್ತಿದೆ. ಜೋಡೆತ್ತು (Jodettu) ಅನ್ನುವ ಈ ಚಿತ್ರದ ಪೋಸ್ಟರ್ ಇದೀಗ ರಿಲೀಸ್ ಆಗಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಚಿಕ್ಕಣ್ಣನ ಜೋಡೆತ್ತು ಸಿನಿಮಾ

ಚಿಕ್ಕಣ್ಣನಿಗೆ 42 ಆಯಿತು ನೋಡಿ. ಈ ಜೂನ್‌-22 ಕ್ಕೆ 42 ನೇ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದಾರೆ. ಹಾಗೆ ಹೀರೋ ಆದ ಮೂರನೇ ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದೆ.
chikkanna birthday celebration jodettu poster release

ಜೋಡೆತ್ತು ಪೋಸ್ಟರ್ ರಿಲೀಸ್

(ಚಿತ್ರ ಕೃಪೆ: ಚಿಕ್ಕಣ್ಣ ಇನ್‌ಸ್ಟಾಗ್ರಾಮ್)

ಈ ಜೋಡೆತ್ತು ಚಿತ್ರವನ್ನ ಅಯೋಗ್ಯ ಚಿತ್ರ ಖ್ಯಾತಿಯ ಮಹೇಶ್ ಕುಮಾರ್ ಡೈರೆಕ್ಷನ್ ಮಾಡ್ಬೇಕಿತ್ತು. ಆದರೆ, ತದನಂತರ ಈ ಚಿತ್ರವನ್ನ ಕ್ಯಾಮರಾಮನ್ ಸುಧಾಕರ್ ಎಸ್.ರಾಜ್ ಡೈರೆಕ್ಷನ್ ಮಾಡುತ್ತಿದ್ದಾರೆ. ಕ್ಯಾಮರಾವರ್ಕ್ ಕೂಡ ಇವರೇ ಮಾಡುತ್ತಿದ್ದಾರೆ.

ಜೋಡೆತ್ತು ಪೋಸ್ಟರ್ ರಿಲೀಸ್

ಚಿಕ್ಕಣ್ಣನ ಜನ್ಮ ದಿನದಂದು ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಸಖತ್ ಬೈಕ್ ಅಲ್ಲಿ ಚಿಕ್ಕಣ್ಣ ಸ್ಟೈಲಿಶ್ ಆಗಿಯೇ ಬರ್ತಿದ್ದಾರೆ. ಈ ಪೋಸ್ಟರ್‌ನೊಂದಿಗೆ ಸಿನಿಮಾ ತಂಡ ಚಿಕ್ಕಣ್ಣನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಈ ಪೋಸ್ಟರ್ ಅನ್ನ ಚಿಕ್ಕಣ್ಣ ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲೂ ಶೇರ್ ಮಾಡಿದ್ದಾರೆ.

ಈ ಚಿತ್ರಕ್ಕೆ ಜೋಡೆತ್ತು ಅಂತ ಶೀರ್ಷಿಕೆ ಇಟ್ಟಿದ್ದಾರೆ. ಆದರೆ, ಆ ಮತ್ತೊಬ್ಬ ನಾಯಕ ಯಾರು ಅನ್ನುವ ಪ್ರಶ್ನೆನೂ ಇದೆ. ಅದಕ್ಕೂ ಉತ್ತರ ಸಿಕ್ಕಿದೆ. ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ಸುನಿಲ್ ಈ ಚಿತ್ರದಲ್ಲಿದ್ದಾರೆ.

chikkanna birthday celebration jodettu poster release

ಲಕ್ಷ್ಮಿಪುತ್ರ ಸಿನಿಮಾ

(ಚಿತ್ರ ಕೃಪೆ: ಚಿಕ್ಕಣ್ಣ ಇನ್‌ಸ್ಟಾಗ್ರಾಮ್)

ಚಿಕ್ಕಣ್ಣ ಮತ್ತು ಸುನಿಲ್ ಕಾಂಬಿನೇಷನ್ ಇಲ್ಲಿದೆ. ಈ ಮೂಲಕ ಸುನಿಲ್ ಕನ್ನಡಕ್ಕೂ ಕಾಲಿಟ್ಟಿದ್ದಾರೆ. ಹಾಗೆ ಇದು ದೊಡ್ಡ ಬಜೆಟ್‌ನ ಚಿತ್ರವೇ ಆಗಿದೆ.

ಲಕ್ಷ್ಮಿಪುತ್ರ ಸಿನಿಮಾ

ಈ ಚಿತ್ರದಲ್ಲಿ ತಾರಾ ಅನುರಾಧಾ ಅಭಿನಯಿಸಿದ್ದಾರೆ. ಚಿಕ್ಕಣ್ಣನ ಅಮ್ಮನ ಪಾತ್ರವನ್ನೆ ಮಾಡಿದ್ದಾರೆ. ಚಿತ್ರದಲ್ಲಿ ಅಮ್ಮ ಮತ್ತು ಮಗನ ಕತೆ ಇದೆ. ಕೌಟುಂಬಿಕ ಡ್ರಾಮಾ ಈ ಸಿನಿಮಾದಲ್ಲಿದೆ.

ರವಿ ವರ್ಮ ಸಾಹಸ

ಈ ಚಿತ್ರಕ್ಕೆ ರವಿ ವರ್ಮ ಅವರ ಸಾಹಸ ನಿರ್ದೇಶನ ಇದೆ. ಗಿರೀಶ್ ಆರ್.ಗೌಡ ಕ್ಯಾಮರಾವರ್ಕ್ ಮಾಡಿದ್ದಾರೆ. ಇದು ಹಾರ್ಟ್ ಟಚಿಂಗ್ ಕತೆಯುಳ್ಳ ಚಿತ್ರವೇ ಆಗಿದೆ.

ಲಕ್ಷ್ಮಿಪುತ್ರ ಹಾಗೂ ಜೋಡೆತ್ತು ಚಿತ್ರದಲ್ಲಿ ಚಿಕ್ಕಣ್ಣನ ನಾಯಕರಾಗಿದ್ದಾರೆ. ಜೋಡೆತ್ತು ಚಿತ್ರದ ಅನೌನ್ಸ್‌ಮೆಂಟ್ ಆಗಿದೆ. ಲಕ್ಷ್ಮಿಪುತ್ರ ಚಿತ್ರದ ಶೂಟಿಂಗ್ ನಡೀತಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports