Kichcha Sudeepa: ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರಾ ಕಿಚ್ಚ ಸುದೀಪ್? ಇಲ್ಲಿದೆ ಬಿಗ್ ಅಪ್ಡೇಟ್ಸ್ | | ACTPnews

ಮಾಲಿವುಡ್‌ಗೆ ಕಾಲಿಟ್ಟರೇ ಕಿಚ್ಚ ಸುದೀಪ್;ಉಯಿರ್ ಸಿನಿಮಾ ಟೀಸರ್ ಏನ್ ಹೇಳ್ತಿದೆ ಗೊತ್ತಾ?


Last Updated:

ಕಿಚ್ಚ ಸುದೀಪ್ ಮಾಲಿವುಡ್‌ಗೆ ಕಾಲಿಟ್ಟರೇ? ಉಯಿರ್ ಚಿತ್ರದಲ್ಲಿ ಸುದೀಪ್ ಅಭಿನಯಿಸಿದ್ದಾರಾ? ಟೀಸರ್ ಅಲ್ಲಿ ಸುದೀಪ್ ಫೋಟೋ ಬಳಕೆ ಆಗಿದೆ. ಇದರ ಅಸಲಿ ಮ್ಯಾಟರ್ ಏನು? ಉತ್ತರ ಇಲ್ಲಿದೆ ಓದಿ.

ಮಾಲಿವುಡ್‌ಗೆ ಕಾಲಿಟ್ಟರೇ ಕಿಚ್ಚ ಸುದೀಪ್;ಉಯಿರ್ ಸಿನಿಮಾ ಟೀಸರ್ ಏನ್ ಹೇಳ್ತಿದೆ ಗೊತ್ತಾ?
ಮಾಲಿವುಡ್‌ಗೆ ಕಾಲಿಟ್ಟರೇ ಕಿಚ್ಚ ಸುದೀಪ್;ಉಯಿರ್ ಸಿನಿಮಾ ಟೀಸರ್ ಏನ್ ಹೇಳ್ತಿದೆ ಗೊತ್ತಾ?

ಕಿಚ್ಚ ಸುದೀಪ್ (Kichcha Sudeepa) ಮಲೆಯಾಳಂ ಚಿತ್ರ (Malayalam Movie) ಮಾಡಿದರೇ? ಈ ಒಂದು ಪ್ರಶ್ನೆ ಹುಟ್ಟುವುದಕ್ಕೆ ಕಾರಣ ಇದೆ. ಮಲೆಯಾಳಂ ಭಾಷೆಯ ಉಯಿರ್ (Uyir) ಅನ್ನುವ ಚಿತ್ರದಲ್ಲಿ ಸುದೀಪ್ ಫೋಟೋ (Sudeep Photo) ಇದೆ. ಚಿತ್ರದ ಕತೆಯಲ್ಲಿ ಬರುವ ಒಂದು ಫ್ಯಾಮಿಲಿ ಸುದೀಪ್ (Sudeepa) ಜೊತೆಗೆ ಒಂದು ಫೋಟೋ ತೆಗೆಸಿಕೊಂಡಿರುತ್ತದೆ. ತನಿಖೆಯ ಸಮಯದಲ್ಲಿ ಈ ಒಂದು ವಿಷಯ ಬಹಿರಂಗಗೊಳ್ಳುತ್ತದೆ. ಟೀಸರ್ ಅಲ್ಲಿ ಈ ಎಲ್ಲ ವಿಚಾರ ಇದೆ. ಈ ಚಿತ್ರದಲ್ಲಿ ಕ್ರೈಮ್ ಸಸ್ಪೆನ್ಸ್ ಸ್ಟೋರಿ ಇದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸುದೀಪ್ ಮಲೆಯಾಳಂ ಸಿನಿಮಾ

ಸುದೀಪ್ ತೆಲುಗು ಚಿತ್ರ ಮಾಡಿದ್ದಾರೆ. ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ. ಮಲೆಯಾಳಂ ಸಿನಿಮಾಗಳು ಇಲ್ವೆ ಇಲ್ಲ ಬಿಡಿ. ಆದರೆ, ಉಯಿರ್ ಹೆಸರಿನ ಚಿತ್ರದಲ್ಲಿ ಸುದೀಪ್ ಫೋಟೋ ಇದೆ.
Kichcha sudeepa Reference Used in Malayalam Uyir Film Teaser Released

ಜೂನ್-26 ರಂದು ರಿಲೀಸ್

ಆದರೆ, ಈ ಫೋಟೋ ನೋಡಿದ್ರೆ ಕತೆ ಒಳಗೆ ಬರೋ ಒಂದು ದೃಶ್ಯವೇ ಆಗಿದೆ. ಫ್ಯಾಮಿಲಿ ಒಂದು ಸುದೀಪ್ ಜೊತೆಗೆ ಫೋಟೋ ತೆಗೆಸಿಕೊಂಡಿರುತ್ತದೆ. ಅಭಿಮಾನಿ ಆಗಿಯೇ ಇಲ್ಲಿ ಆ ಫ್ಯಾಮಿಲಿ ಸುದೀಪ್ ಜೊತೆಗೆ ಫೋಟೋ ತೆಗೆಸಿಕೊಂಡಿರುತ್ತದೆ.

ಸಸ್ಪೆನ್ಸ್ ಇನ್ವೆಸ್ಟಿಗೇಷನ್ ಕ್ರೈಮ್ ಥ್ರಿಲರ್

ಉಯಿರ್ ಚಿತ್ರದಲ್ಲಿ ಇನ್ವೆಸ್ಟಿಗೇಷನ್ ಇದೆ. ಸ್ಪೆಷನ್ಸ್ ಇದೆ. ಇದೊಂದು ಕ್ರೈಮ್ ಥ್ರಿಲ್ಲರ್ ಕತೆಯ ಚಿತ್ರವೇ ಆಗಿದೆ. ಆದರೆ, ಈ ಚಿತ್ರಕ್ಕೆ ನೈಜ ಘಟನೆಗಳ ಪ್ರೇರಣೆ ಇದೆ. ಸತ್ಯ ಘಟನೆಯನ್ನ ಆಧರಿಸಿಯೇ ಈ ಚಿತ್ರ ತಯಾರಾಗಿದೆ.

ಬಾಲಿವುಡ್ ನಟಿ ಸಯಾಮಿ ಖೇರ್ ಈ ಚಿತ್ರದಲ್ಲಿ ಪೊಲೀಸ್ ಪಾತ್ರ ಮಾಡಿದ್ದಾರೆ. ತನಿಖೆ ಮುಂಬೈಗೆ ಹೋಗುತ್ತದೆ. ಚಿತ್ರದ ನಾಯಕ ನಟ ಪೊಲೀಸ್ ಆಫೀಸರ್ ಆಗಿದ್ದಾರೆ. ಈ ಕಾರಣಕ್ಕೆ ಮುಂಬೈಗೆ ಹೋಗ್ತಾರೆ. ಆಗಲೇ ಸಯಾಮಿ ಖೇರ್ ಪಾತ್ರ ಬರುತ್ತದೆ. ಇದು ಚಿತ್ರದ ಟೀಸರ್ ಅಲ್ಲೂ ರಿವೀಲ್ ಆಗಿದೆ.

ಕಿಚ್ಚ ಸುದೀಪ್ ಇದರಲ್ಲಿ ನಟಿಸಿಲ್ಲ…

ಕಿಚ್ಚ ಸುದೀಪ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರಾ? ಈ ಪ್ರಶ್ನೆ ಬರುತ್ತದೆ. ಆದರೆ, ಈ ಚಿತ್ರದಲ್ಲಿ ಸುದೀಪ್ ನಟಿಸಿಲ್ಲ. ಬದಲಾಗಿ ಈ ಚಿತ್ರದ ಪಾತ್ರಗಳು ಬೆಂಗಳೂರಿಗೂ ಟ್ರಾವಲ್ ಮಾಡ್ತವೆ.

Kichcha sudeepa Reference Used in Malayalam Uyir Film Teaser Released

ಸುದೀಪ್ ಮಲೆಯಾಳಂ ಸಿನಿಮಾ

ಆಗಲೇ ಸುದೀಪ್ ಅವರ ಜೊತೆಗೆ ಆ ಫ್ಯಾಮಿಲಿ ಫೋಟೋ ತೆಗೆಸಿಕೊಳ್ಳುತ್ತದೆ. ಅಷ್ಟೆ, ಇಲ್ಲಿ ಬೇರೆ ಏನೂ ಇಲ್ಲ. ಆದರೆ, ಸಿನಿಮಾ ತಂಡ ಇದನ್ನ ರೆಫರೆನ್ಸ್ ಆಗಿಯೇ ತೆಗೆದುಕೊಂಡಿದೆ. ಈ ವಿಷಯ ಸುದೀಪ್ ಅವರಿಗೂ ಗೊತ್ತಿದೆ. ಇದನ್ನ ನೋಡಿಯೂ ಇದ್ದಾರೆ.

ಉಯಿರ್ ಚಿತ್ರದ ಇತರ ಮಾಹಿತಿ

ಉಯಿರ್ ಚಿತ್ರವನ್ನ ಎಂ.ಪದ್ಮಕುಮಾರ್ ಡೈರೆಕ್ಷನ್ ಮಾಡಿದ್ದಾರೆ. ಮಣಿಕಂದನ್ ಅಯ್ಯಪ್ಪ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ.

ರೋಷನ್ ಮ್ಯಾಥ್ಯೂ ನಾಯಕರಾಗಿದ್ದಾರೆ. ಅಜೀಬ್ ಹೆಸರಿನ ಪೊಲೀಸ್ ಪಾತ್ರ ಮಾಡಿದ್ದಾರೆ. ಸಂತೋಷ್ ತ್ರಿವಿಕ್ರಮನ್ ಹಾಗೂ ಸಯಾಮಿ ಖೇರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ಜೂನ್-26 ರಂದು ರಿಲೀಸ್

ಉಯಿರ್ ಚಿತ್ರ ಜೂನ್ ತಿಂಗಳ 26 ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಟೀಸರ್ ಇಂಟ್ರಸ್ಟಿಂಗ್ ಆಗಿದೆ. ಎಲ್ಲರ ಗಮನ ಸೆಳೆಯುತ್ತದೆ. ಅದಕ್ಕೂ ಹೆಚ್ಚಾಗಿ ಈ ಚಿತ್ರದಲ್ಲಿ ಸುದೀಪ್ ಫೋಟೋ ರೆಫರೆನ್ಸ್ ಆಗಿಯೇ ತೆಗೆದುಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed