Last Updated:
ಈ ಭೀಕರ ದುರಂತದಲ್ಲಿ ಬಸ್ ಚಾಲಕ ಮತ್ತು ಕಂಡಕ್ಟರ್ ಸೇರಿದಂತೆ 8 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಶನಿವಾರ ಬೆಳಿಗ್ಗೆ 6:30 ರ ಸುಮಾರಿಗೆ ಬೈರಾಗಢದಿಂದ ಚಂಬಾಗೆ ಹೊರಟ ಬಸ್ ಅಪಘಾತಕ್ಕೀಡಾದಾಗ ಕೇವಲ ಮೂರು ಕಿಲೋಮೀಟರ್ ದೂರ ಕ್ರಮಿಸಿತ್ತು.
ಚಂಬಾ: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಮತ್ತೊಂದು ಭೀಕರ ದುರಂತ ಸಂಭವಿಸಿದೆ. ಶನಿವಾರ ಬೆಳಿಗ್ಗೆ ತೀಸಾ-ಬೈರ್ಗಢ ಮುಖ್ಯ ರಸ್ತೆಯಲ್ಲಿ ಖಾಸಗಿ ಬಸ್ ಅಪಘಾತಕ್ಕೀಡಾಗಿದ್ದು, ಬೈರಾಗಢದಿಂದ ಚಂಬಾಗೆ (Bus Accident) ಪ್ರಯಾಣಿಸುತ್ತಿದ್ದ ಶರ್ಮಾ ಬಸ್, ಚಲುಜ್ ತಿರುವಿನ ಬಳಿ ಅಪಘಾತಕ್ಕೀಡಾಗಿದೆ ಎಂದು ತಿಳಿದು ಬಂದಿದೆ.














