Last Updated:
India-China Conflict: ಗಡಿಯಲ್ಲಿ ತಗಾದೆ ತೆಗೆದು 20 ಭಾರತೀಯ ಸೈನಿಕರ ಸಾವಿಗೆ ಕಾರಣವಾಗಿರುವ ಚೀನಾದ ಆ್ಯಪ್ಗಳು, ಉತ್ಪನ್ನಗಳನ್ನು ನಿಷೇಧಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ನಡೆಯುತ್ತಿವೆ.
ನವದೆಹಲಿ (ಜೂ. 25): ಭಾರತದೊಂದಿಗೆ ಲಡಾಖ್ ಗಡಿಯಲ್ಲಿ ಚೀನಾ ಸೈನಿಕರು ಸಂಘರ್ಷ ನಡೆಸಿದ್ದರಿಂದ ಭಾರತೀಯ ಸೈನಿಕರು ಸಾವನ್ನಪ್ಪಿದ್ದರು. ಇದರಿಂದ ಚೀನಾ ಪ್ರಜೆಗಳಿಗೆ ದೆಹಲಿಯ ಹೋಟೆಲ್ಗಳಲ್ಲಿ ರೂಂ ನೀಡದಿರಲು ನಿರ್ಧರಿಸಲಾಗಿದೆ. ಹೀಗಾಗಿ, ಇನ್ನುಮುಂದೆ ದೆಹಲಿಯ ಹೋಟೆಲ್ ಹಾಗೂ ಗೆಸ್ಟ್ ಹೌಸ್ಗಳಲ್ಲಿ ಚೀನಾ ದೇಶದ ಪ್ರಜೆಗಳಿಗೆ ರೂಂ ಸಿಗುವುದಿಲ್ಲ.
ಚೀನಾ ದೇಶದ ಯಾವ ಅತಿಥಿಗಳಿಗೂ ದೆಹಲಿಯ ಹೋಟೆಲ್ ಮತ್ತು ಗೆಸ್ಟ್ ಹೌಸ್ಗಳಲ್ಲಿ ರೂಂ ನೀಡುವುದಿಲ್ಲ ಎಂದು ದೆಹಲಿ ಹೋಟೆಲ್ ಮತ್ತು ಗೆಸ್ಟ್ ಹೌಸ್ ಮಾಲೀಕರ ಸಂಘ ಸ್ಪಷ್ಟಪಡಿಸಿದೆ. ಅಖಿಲ ಭಾರತ ವ್ಯಾಪಾರಿ ಒಕ್ಕೂಟ ಚೀನಾ ದೇಶದ ಉತ್ಪನ್ನಗಳ ಮೇಲೆ ನಿಷೇಧ ಹೇರಲು ನಿರ್ಧರಿಸಿದ್ದರಿಂದ ಪ್ರೇರೇಪಿತಗೊಂಡು ಹೋಟೆಲ್ ಮತ್ತು ಗೆಸ್ಟ್ ಹೌಸ್ ಮಾಲೀಕರ ಸಂಘ ಈ ನಿರ್ಧಾರ ಮಾಡಿದೆ.
ಗಡಿಯಲ್ಲಿ ತಗಾದೆ ತೆಗೆದು 20 ಭಾರತೀಯ ಸೈನಿಕರ ಸಾವಿಗೆ ಕಾರಣವಾಗಿರುವ ಚೀನಾದ ಆ್ಯಪ್ಗಳು, ಉತ್ಪನ್ನಗಳನ್ನು ನಿಷೇಧಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ನಡೆಯುತ್ತಿವೆ. ಇದರ ಭಾಗವಾಗಿ ದೆಹಲಿಯಲ್ಲಿರುವ 3,000ಕ್ಕೂ ಅಧಿಕ ಹೋಟೆಲ್ಗಳು ಮತ್ತು ಗೆಸ್ಟ್ ಹೌಸ್ಗಳು ಕೂಡ ಚೀನೀ ಪ್ರವಾಸಿಗರಿಗೆ ನಿಷೇಧ ಹೇರಿವೆ.













