Last Updated:
ಸೋರೆಕಾಯಿ ಬಳಸಿ ತಯಾರಿಸಿದ ಹೊಸ ಪಕೋಡಾ ರೆಸಿಪಿ ವೈರಲ್, Hindi News 18 ವರದಿ ಪ್ರಕಾರ ಇದು ರುಚಿಕರವಾಗಿದ್ದು ಆರೋಗ್ಯಕರವೂ ಆಗಿದೆ, ಸಂಜೆ ಚಹಾಗೆ ಸೂಕ್ತ ಸ್ನ್ಯಾಕ್ ಎಂದು ಹೇಳಲಾಗಿದೆ
ಬೆಂಗಳೂರು: ನಿಮ್ಮ ಮನೆಯಲ್ಲಿ ಸೋರೆಕಾಯಿ (Bottle Gourd) ಅಂದರೆ ಸಾಕು, ಮಕ್ಕಳು ಅಥವಾ ಮನೆಯವರು ಮುಖ ಸಿಂಡರಿಸುತ್ತಾರೆಯೇ? ಹಾಗಾದರೆ ಇನ್ನು ಮುಂದೆ ನೀವು ಸೋರೆಕಾಯಿ ಕರಿ ಮಾಡುವ ಬದಲು ಈ ರುಚಿಕರವಾದ (Delicious) ಪಕೋಡಾಗಳನ್ನು (Pakoda) ಟ್ರೈ ಮಾಡಿ. ಒಮ್ಮೆ ತಿಂದರೆ ಸಾಕು, ಇದನ್ನು ಹೇಗೆ ತಯಾರಿಸಲಾಗುತ್ತದೆ? ಎಂದು ಎಲ್ಲರೂ ನಿಮ್ಮನ್ನು ಕೇಳುವುದಂತೂ ಖಚಿತ. ಇದರ ರೆಸಿಪಿಯೂ (Recipe) ಸಖತ್ ಈಸಿ.
ನಂತರ ಒಂದು ಬಟ್ಟಲಿನಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು (ಅಥವಾ ರವೆ), ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ, ಅರಿಶಿನ, ಕೆಂಪು ಮೆಣಸಿನ ಪುಡಿ, ಜೀರಿಗೆ, ಸೋಂಪು ಬೀಜಗಳು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಸ್ವಲ್ಪ ನೀರು ಸೇರಿಸಿ ದಪ್ಪನೆಯ ಬ್ಯಾಟರ್ ತಯಾರಿಸಿ. ಸೋರೆಕಾಯಿಯನ್ನು ಈ ಬ್ಯಾಟರ್ ನಲ್ಲಿ ಚೆನ್ನಾಗಿ ಅದ್ದಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಣ್ಣ ಪಕೋಡಗಳನ್ನು ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿಯಿರಿ
ತಯಾರಾದ ಪಕೋಡಗಳನ್ನು ಟಿಶ್ಯೂ ಪೇಪರ್ ಮೇಲೆ ಇರಿಸಿ ಹೆಚ್ಚುವರಿ ಎಣ್ಣೆಯನ್ನು ತೆಗೆಯಿರಿ. ಹೊರಗೆ ಗರಿಗರಿಯಾಗಿ, ಒಳಗೆ ಮೃದುವಾಗಿರುವ ಈ ಪಕೋಡಾಗಳನ್ನು ಹಸಿರು ಚಟ್ನಿ ಅಥವಾ ಟೊಮೆಟೊ ಸಾಸ್‍ನೊಂದಿಗೆ ಬಿಸಿಯಾಗಿ ಸವಿಯಿರಿ.
Bangalore [Bangalore],Bangalore,Karnataka













