Last Updated:
ಬಾಸ್ ಚಿತ್ರ ರಿಲೀಸ್ ತಡೆಗೆ ದರ್ಶನ್ ಮತ್ತು ವಿಜಯಲಕ್ಷ್ಮಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಇದನ್ನ ವಜಾಗೊಳಿಸಿದೆ. ಚಿತ್ರ ರಿಲೀಸ್ಗೆ ಅನುಮತಿ ನೀಡಿದೆ. ಹಾಗಾಗಿಯೇ ಬಾಸ್ ಜುಲೈ-17 ರಂದು ಸಂಜೆ ರಿಲೀಸ್ ಆಗಿದೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಸ್ಯಾಂಡಲ್ವುಡ್ ‘ಬಾಸ್’ ಚಿತ್ರ (Boss Movie) ರಿಲೀಸ್ಗೆ ದರ್ಶನ್ (Darshan) ಹಾಗೂ ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್ ಗೆ (High Court) ಸಲ್ಲಿಸಿದ್ದ ಮೇಲ್ಮನವಿಯನ್ನ ಹೈಕೋರ್ಟ್ ಈಗ ವಜಾಗೊಳಿಸಿದೆ. ಈ ಹಿನ್ನೆಲೆಯಲ್ಲಿಯೇ ಜುಲೈ-17 ರಂದು ಸಂಜೆನೇ ಈ ಬಾಸ್ ಚಿತ್ರ ರಿಲೀಸ್ (Boss Movie Release) ಆಗಿದೆ. ಈ ವಿಷಯವನ್ನ ಚಿತ್ರ ತಂಡ ಅಧಿಕೃತವಾದ ಪ್ರಕಟಣೆ ಮೂಲಕ ಹೇಳಿಕೊಂಡಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಜುಲೈ-17 ರಂದು ಟ್ರೈಲರ್ ರಿಲೀಸ್
(ಚಿತ್ರ ಕೃಪೆ: ತನುಷ್ ಶಿವಣ್ಣಇನ್ಸ್ಟಾಗ್ರಾಮ್)
ಆದರೆ, ಹೈಕೋರ್ಟ್ ಇದೀಗ ಇವರ ಮೇಲ್ಮನವಿಯನ್ನ ವಜಾಗೊಳಿಸಿದೆ. ಚಿತ್ರ ರಿಲೀಸ್ಗೂ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಚಿತ್ರ ತಂಡ ಚಿತ್ರವನ್ನ ಜುಲೈ-17 ರಂದು ರಿಲೀಸ್ ಮಾಡುತ್ತೇವೆ ಅಂತಲೆ ಪ್ರಕಟಣೆ ಮೂಲಕವೇ ತಿಳಿಸಿದೆ.
ಈ ಬಾಸ್ ಚಿತ್ರಕ್ಕೆ ತನುಷ್ ಶಿವಣ್ಣ ನಾಯಕರಾಗಿದ್ದಾರೆ. ಇವರೇ ಈ ಸಿನಿಮಾದ ನಿರ್ಮಾಪಕರೂ ಆಗಿದ್ದಾರೆ. ಲವಾ ವಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ.
“ನಮ್ಮ ಚಿತ್ರದ ಮೇಲೆ ನಂಬಿಕೆ ಇಟ್ಟು ಬೆಂಬಲಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ನ್ಯಾಯದ ಗೆಲುವಿನೊಂದಿಗೆ ‘ಬಾಸ್’ ಇಂದು ಪ್ರೇಕ್ಷಕರ ಮುಂದೆ ಬರುತ್ತಿದೆ. ಪ್ರೇಕ್ಷಕರು ಚಿತ್ರವನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂಬ ವಿಶ್ವಾಸವಿದೆ” ಅಂತ ಇವರು ಹೇಳಿದ್ದಾರೆ.
ಬಾಸ್ ಚಿತ್ರ ರಿಲೀಸ್ ವಿಚಾರದಲ್ಲಿ ಕಾನೂನು ಹೋರಾಟ ಕಳೆದ ಒಂದೂವರೆ ತಿಂಗಳಿನಿಂದಲು ನಡೀತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಡೈರೆಕ್ಟರ್ ಲವ ಮಾತನಾಡಿದ್ದಾರೆ. ಅವರ ಮಾತು ಈ ರೀತಿ ಇವೆ.
ನಾಯಕ ನಿರ್ಮಾಪಕ ಹೇಳೋದೇನು
(ಚಿತ್ರ ಕೃಪೆ: ತನುಷ್ ಶಿವಣ್ಣಇನ್ಸ್ಟಾಗ್ರಾಮ್)
“ಸುಮಾರು ಒಂದೂವರೆ ತಿಂಗಳಿನಿಂದ ನ್ಯಾಯಾಲಯದಲ್ಲಿ ನಿರಂತರ ಕಾನೂನು ಹೋರಾಟ ನಡೆಸಿದ್ದೇವೆ. ಇಂದು ಸತ್ಯ ಮತ್ತು ನ್ಯಾಯಕ್ಕೆ ಜಯ ದೊರೆತಿದೆ. ಭಾರತದ ಸಂವಿಧಾನ ನೀಡಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಮಗೆ ಅಚಲ ನಂಬಿಕೆ ಇದೆ.
ನ್ಯಾಯ ಎಲ್ಲರಿಗೂ ಒಂದೇ., ನ್ಯಾಯಾಂಗದ ಮೇಲೆ ನಮ್ಮ ಗೌರವ ಮತ್ತು ವಿಶ್ವಾಸ ಇನ್ನಷ್ಟು ಗಟ್ಟಿಯಾಗಿದೆ. ಭಾರತದ ಕಾನೂನನ್ನು ಗೌರವಿಸೋಣ ಹಾಗೂ ಪ್ರೀತಿಸೋಣ” ಎಂದು ಹೇಳಿದ್ದಾರೆ.
“ಈ ಕಾನೂನು ಹೋರಾಟದಿಂದ ನಮಗೆ ಸಾಕಷ್ಟು ಸಮಯ ವ್ಯರ್ಥವಾಗಿದ್ದು, ಕೋಟ್ಯಂತರ ರೂಪಾಯಿಗಳ ಆರ್ಥಿಕ ನಷ್ಟವೂ ಉಂಟಾಗಿದೆ. ಆದರೂ ಯಾರ ಮೇಲೂ ದ್ವೇಷವಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಶೀಘ್ರವೇ ಎಲ್ಲ ಸಂಕಷ್ಟಗಳಿಂದ ಹೊರಬಂದು, ಅವರಿಗೆ ದೇವರು ಇನ್ನಷ್ಟು ಒಳ್ಳೆಯದನ್ನು ಮಾಡಲಿ ಎಂದು ಹಾರೈಸುತ್ತೇವೆ. ಯಾರಿಗೂ ಕೆಟ್ಟದನ್ನು ನಾವು ಬಯಸುವುದಿಲ್ಲ” ಎಂದು ಡೈರೆಕ್ಟರ್ ಲವಾ ವಿ ತಿಳಿಸಿದ್ದಾರೆ.
ಈ ಬಾಸ್ ಚಿತ್ರದ ಟ್ರೈಲರ್ ಜುಲೈ-17 ರಂದು ಸಂಜೆ 6 ಗಂಟೆ ಹೊತ್ತಿಗೆ ರಿಲೀಸ್ ಆಗಿದೆ. ಟ್ರೈಲರ್ ಆರಂಭದಲ್ಲಿಯೇ ಒಂದು ವಿವರಣೆಯನ್ನು ಚಿತ್ರ ತಂಡ ಕೊಟ್ಟಿದೆ. ಅದು ಈ ರೀತಿ ಇದೆ.
“ಈ ಟ್ರೈಲರ್ನಲ್ಲಿರುವ ಎಲ್ಲಾ ಪಾತ್ರಗಳು ಮತ್ತು ಘಟನೆಗಳು ಕಾಲ್ಪನಿಕವಾಗಿವೆ.ಯಾವುದೇ ನಿಜವಾದ ವ್ಯಕ್ತಿಗಳು ಅಥವಾ ಘಟನೆಗಳಿಗೆ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಕಾಕತಾಳೀಯ ಮಾತ್ರ.” ಆದರೆ, ಟ್ರೈಲರ್ ನೋಡಿದಾಗ ಆಗುವ ಅನುಭವ ಬೇರೇನೆ ಇದೆ. ಅದೇನು ಅನ್ನೋದನ್ನ ಟ್ರೈಲರ್ ನೋಡಿಯೇ ತಿಳಿಯಬೇಕು ಅಂತಲೇ ಹೇಳಬಹುದು.
Bangalore [Bangalore],Bangalore,Karnataka














