Last Updated:
Boss Movie: ಬಾಸ್ ಸಿನಿಮಾದ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ವಿಜಯಲಕ್ಷ್ಮಿ! ಇಂದಿನ ವಿಚಾರಣೆ ಏನಾಯ್ತು? ಇಲ್ಲಿದೆ ಅಪ್ಡೇಟ್.
ಸ್ಯಾಂಡಲ್ವುಡ್ (Sandalwood) ನಟ ದರ್ಶನ್ (Darshan) ಅವರು ಜೈಲಿನಲ್ಲಿದ್ದಾರೆ. ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi) ಗಂಡನನ್ನು ಬಿಡಿಸೋ ಪ್ರಯತ್ನದಲ್ಲಿದ್ದರೆ ಇತ್ತ ಬಾಸ್ ಸಿನಿಮಾ (Boss Movie) ತಡೆಯೋ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಬಾಸ್ ಸಿನಿಮಾ ತಡೆಯೋಕೆ ವಿಜಯಲಕ್ಷ್ಮಿ ದರ್ಶನ್ ಅರ್ಜಿ ಸಲ್ಲಿಸಿದ್ದು ಇಂದು ವಿಚಾರಣೆ ನಡೆದಿದೆ.
ಬಾಸ್ ಸಿನಿಮಾಗೆ ತಡೆ ಕೋರಿ ದರ್ಶನ್ ವಿಜಯಲಕ್ಷ್ಮಿ ಅರ್ಜಿ ಸಲ್ಲಿಸಿದ್ದು ಹೈಕೋರ್ಟ್ ನ್ಯಾ. ಪ್ರದೀಪ್ ಸಿಂಗ್ ಯರೂರು ಪೀಠದಲ್ಲಿ ವಿಚಾರಣೆ ನಡೆದಿದೆ. ದರ್ಶನ್ ಪರ ವಕೀಲ ವಿವೇಕ್ ಸುಬ್ಬಾರೆಡ್ಡಿ ಹಾಜರಾಗಿದ್ದಾರೆ.
ನ್ಯಾಯಾಧೀಶರು ಯಾವುದೇ ಬಾಹ್ಯ ಪ್ರಭಾವಗಳಿಗೆ ಒಳಗಾಗುವುದಿಲ್ಲ ಎಂದು ಜಡ್ಜ್ ಹೇಳಿದ್ದಾರೆ. ಕಾನೂನು ವ್ಯವಸ್ಥೆಯಲ್ಲಿ ನ್ಯಾಯಾಧೀಶರು ಮಾಧ್ಯಮಗಳ ಚರ್ಚೆ, ಸಾರ್ವಜನಿಕ ಅಭಿಪ್ರಾಯ, ಸಿನಿಮಾಗಳಿಂದ ದೂರವಿದ್ದಾರೆ ಎಂದಿದ್ದಾರೆ.
ನ್ಯಾಯಾಲಯದ ಮುಂದೆ ಬರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ತೀರ್ಪು ನೀಡಲು ತರಬೇತಿ ಪಡೆದಿರುತ್ತಾರೆ. ಕೋರ್ಟ್ ಸಿನಿಮಾ, ಡ್ರಾಮಾಗಳ ಆಧಾರದ ಮೇಲೆ ನಡೆಯುವುದಿಲ್ಲ. ಕಠಿಣ ಕಾನೂನು ತರ್ಕದ ಮೇಲೆ ನಡೆಯುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಚಿತ್ರತಂಡವು ಹೆಸರುಗಳು ಮತ್ತು ಕೆಲವು ಘಟನೆಗಳನ್ನು ಬದಲಾಯಿಸಿದೆ. ಇದು ನೈಜ ಘಟನೆ ಪ್ರೇರಣೆಯಿಂದ ನಿರ್ಮಿತವಾದ ಕಾಲ್ಪನಿಕ ಕೃತಿ ಎಂದು ಚಿತ್ರತಂಡದ ಪರ ವಕೀಲರು ವಾದಿಸಿದ್ದಾರೆ.
ವರದಿ: ಮುನಿರಾಜು ಕೆಜಿ. ನ್ಯೂಸ್18 ಕನ್ನಡ ಪ್ರತಿನಿಧಿ, ಬೆಂಗಳೂರು
Bangalore,Karnataka













