Bollywood: ಐದು ವರ್ಷದ ದಾಂಪತ್ಯಕ್ಕೆ ಬ್ರೇಕ್! ಡಿವೋರ್ಸ್ ಘೋಷಿಸಿದ ಖ್ಯಾತ ಕಿರುತೆರೆ ನಟಿ | | ACTPnews

ತನ್ವಿ ಠಕ್ಕರ್ ಮತ್ತು ಪತಿ ಆದಿತ್ಯ ಕಪಾಡಿಯಾ


Last Updated:

ಇತ್ತೀಚಿನ ದಿನಗಳಲ್ಲಿ ಮನರಂಜನಾ ಕ್ಷೇತ್ರದಲ್ಲಿ ಹಲವು ಪ್ರಸಿದ್ಧ ಜೋಡಿಗಳು ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಿರುವ ಘಟನೆ ಹೆಚ್ಚಾಗಿ ಕೇಳಿಬರುತ್ತಿದೆ. ಇದೀಗ ಮತ್ತೊಂದು ಜನಪ್ರಿಯ ಜೋಡಿ ಸೇರ್ಪಡೆಯಾಗಿದೆ.

ತನ್ವಿ ಠಕ್ಕರ್ ಮತ್ತು ಪತಿ ಆದಿತ್ಯ ಕಪಾಡಿಯಾ
ತನ್ವಿ ಠಕ್ಕರ್ ಮತ್ತು ಪತಿ ಆದಿತ್ಯ ಕಪಾಡಿಯಾ

ಇತ್ತೀಚಿನ ದಿನಗಳಲ್ಲಿ ಮನರಂಜನಾ ಕ್ಷೇತ್ರದಲ್ಲಿ ಹಲವು ಪ್ರಸಿದ್ಧ ಜೋಡಿಗಳು ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಿರುವ ಘಟನೆ ಹೆಚ್ಚಾಗಿ ಕೇಳಿಬರುತ್ತಿದೆ. ಇದೀಗ ಮತ್ತೊಂದು ಜನಪ್ರಿಯ ಜೋಡಿ ಸೇರ್ಪಡೆಯಾಗಿದೆ. ಜನಪ್ರಿಯ ಧಾರಾವಾಹಿ ‘ಘುಮ್ ಹೈ ಕಿಸಿಕೇ ಪ್ಯಾರ್ ಮೇಯಿನ್’ (Ghum Hai Kisikey Pyaar Meiin) ಮೂಲಕ ಮನೆಮಾತಾಗಿದ್ದ ನಟಿ ತನ್ವಿ ಠಕ್ಕರ್ (Actress Tanvi Thakkar) ತಮ್ಮ ಪತಿ ಆದಿತ್ಯ ಕಪಾಡಿಯಾ (Aditya Kapadia) ಅವರಿಂದ ಬೇರ್ಪಡುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಐದು ವರ್ಷಗಳ ದಾಂಪತ್ಯ ಜೀವನದ ಬಳಿಕ ಈ ನಿರ್ಧಾರ ಕೈಗೊಂಡಿರುವ ವಿಷಯವನ್ನು ನಟಿ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಹಲವು ವರ್ಷಗಳ ಪ್ರೀತಿಯ ನಂತರ ವಿವಾಹವಾಗಿದ್ದ ನಟಿ ತನ್ವಿ ಠಕ್ಕರ್ ಮತ್ತು ನಟ ಆದಿತ್ಯ ಕಪಾಡಿಯಾ ಜೋಡಿ ಇದೀಗ ವಿಚ್ಛೇದನದ ನಿರ್ಧಾರ ಕೈಗೊಂಡಿರುವುದು ಅಭಿಮಾನಿಗಳಿಗೆ ಅಚ್ಚರಿಯನ್ನುಂಟು ಮಾಡಿದೆ. ಕಳೆದ ಕೆಲವು ತಿಂಗಳುಗಳಿಂದ ಅವರ ವೈಯಕ್ತಿಕ ಜೀವನದ ಬಗ್ಗೆ ಹಲವು ರೀತಿಯ ಊಹಾಪೋಹಗಳು ಹರಿದಾಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಸ್ವತಃ ತನ್ವಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಸ್ಪಷ್ಟನೆ ನೀಡಿ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ತಮ್ಮ ವೈಯಕ್ತಿಕ ಜೀವನದ ಕುರಿತು ಅನೇಕ ಪ್ರಶ್ನೆಗಳು ಕೇಳಲಾಗುತ್ತಿತ್ತು . ಇದೀಗ ನಾವು ಒಂದು ನಿರ್ಧಾರಕ್ಕೆ ಬಂದಿದ್ದೇವೆ. ಸಾಕಷ್ಟು ಆಲೋಚನೆ ಮತ್ತು ಚರ್ಚೆಗಳ ನಂತರ ತಾವಿಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ಬೇರ್ಪಡುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೇಳಿದ್ದಾರೆ. ಇದು ತಮ್ಮ ಜೀವನದಲ್ಲಿ ತೆಗೆದುಕೊಂಡ ಅತ್ಯಂತ ಕಠಿಣ ನಿರ್ಧಾರಗಳಲ್ಲಿ ಒಂದಾಗಿದೆ ಎಂದು ನಟಿ ತನ್ವಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಅಭಿಮಾನಿಗಳು ತಮ್ಮ ಖಾಸಗಿತನವನ್ನು ಗೌರವಿಸಬೇಕು ಎಂದು ತನ್ವಿ ವಿನಂತಿಸಿಕೊಂಡಿದ್ದಾರೆ. ಈ ವಿಚಾರವಾಗಿ ಅನಗತ್ಯ ಪ್ರಶ್ನೆಗಳು ಅಥವಾ ಊಹಾಪೋಹಗಳಿಗೆ ಅವಕಾಶ ನೀಡಬಾರದು ಎಂದು ಅವರು ಮನವಿ ಮಾಡಿದ್ದಾರೆ. ತಮ್ಮ ಕುಟುಂಬದ ಒಳಿತಿಗಾಗಿ ಮತ್ತು ಎಲ್ಲರ ಮನಶಾಂತಿಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತನ್ವಿ ಠಕ್ಕರ್ ಮತ್ತು ಆದಿತ್ಯ ಕಪಾಡಿಯಾ ಅವರ ಪರಿಚಯ ‘ಏಕ್ ದೂಸ್ರೆ ಸೆ ಕರ್ತೆ ಹೈ ಪ್ಯಾರ್ ಹಮ್’ ಧಾರಾವಾಹಿಯ ಚಿತ್ರೀಕರಣದ ವೇಳೆ ಆರಂಭವಾಗಿತ್ತು. ವೃತ್ತಿಪರ ಪರಿಚಯ ಕ್ರಮೇಣ ಸ್ನೇಹವಾಗಿ, ನಂತರ ಪ್ರೀತಿಯಾಗಿ ಬೆಳೆಯಿತು. 2013ರಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ದೀರ್ಘಕಾಲದ ಸಂಬಂಧದ ಬಳಿಕ 2021ರ ಫೆಬ್ರವರಿ 16ರಂದು ಇಬ್ಬರೂ ಸರಳವಾಗಿ ರಿಜಿಸ್ಟರ್ ಮದುವೆಯಾಗಿದ್ದರು. ನಂತರ ಕುಟುಂಬದವರ ಸಮ್ಮುಖದಲ್ಲಿ ಮನೆಯಲ್ಲೇ ಸರಳ ಸಂಭ್ರಮವನ್ನು ಆಚರಿಸಿದ್ದರು.

ಈ ಸುದ್ದಿ ಮತ್ತಷ್ಟು ಅಚ್ಚರಿ ಮೂಡಿಸಿರುವ ಮತ್ತೊಂದು ಕಾರಣವೆಂದರೆ, ಇತ್ತೀಚೆಗಷ್ಟೇ ಜೂನ್ 19ರಂದು ತಮ್ಮ ಮಗನ ಮೂರನೇ ವರ್ಷದ ಹುಟ್ಟುಹಬ್ಬವನ್ನು ಇಬ್ಬರೂ ಕುಟುಂಬದವರೊಂದಿಗೆ ಆಚರಿಸಿದ್ದರು. ಆ ಸಂಭ್ರಮದ ಬಳಿಕ ಕೆಲವೇ ದಿನಗಳಲ್ಲಿ ವಿಚ್ಛೇದನದ ಘೋಷಣೆ ಹೊರಬಂದಿರುವುದು ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed