Last Updated:
ಈ ಸೇವೆಯು NICE ರಸ್ತೆ ಮಾರ್ಗದ ಮೂಲಕ ತುಮಕೂರು ಮತ್ತು ಎಲೆಕ್ಟ್ರಾನಿಕ್ ಸಿಟಿ ನಡುವೆ ನೇರ ಸಂಪರ್ಕ ಒದಗಿಸುತ್ತದೆ. ಬಸ್ ಬದಲಾಯಿಸುವ ಅಗತ್ಯವನ್ನು ಕಡಿಮೆ ಮಾಡುವ ಮೂಲಕ ದೈನಂದಿನ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗುವ ನಿರೀಕ್ಷೆಯಿದೆ.
ಬೆಂಗಳೂರು: ಮೊದಲಿಗೆ ಇದು ಸಾಮಾನ್ಯ ಸುದ್ದಿ ಅನ್ನಿಸಬಹುದು ಆದರೆ ಪ್ರತಿದಿನ ಬೆಂಗಳೂರಿನ ಟ್ರಾಫಿಕ್ನಲ್ಲಿ ಗಂಟೆಗಟ್ಟಲೆ ಒದ್ದಾಡುವ ಸಾವಿರಾರು ಜನರಿಗೆ (People) ಇದೊಂದು ದೊಡ್ಡ ರಿಲೀಫ್! ತುಮಕೂರಿನಿಂದ ಬೆಂಗಳೂರಿನ ಐಟಿ ಕಾರಿಡಾರ್ಗೆ (IT Corridor) ಪ್ರತಿದಿನ ಹೋಗಿ ಬರೋದು ಅಂದ್ರೆ ಸುಲಭದ ಮಾತಲ್ಲ. ಮೂರ್ನಾಲ್ಕು ಬಸ್ ಬದಲಾಯಿಸಿ, ಟ್ರಾಫಿಕ್ನಲ್ಲಿ ಹೈರಾಣಾಗಿ ಆಫೀಸ್ ಸೇರುವಷ್ಟರಲ್ಲಿ ಅರ್ಧ ಜೀವ ಹೋಗಿರುತ್ತದೆ. ನೀವು ಕೂಡ ಇದೇ ಪರಿಸ್ಥಿತಿಯಲ್ಲಿ ಇದ್ದರೆ, ಈ ಸುದ್ದಿ ಖಂಡಿತ ನಿಮ್ಮ ಮುಖದಲ್ಲಿ ನಗು ತರುತ್ತೆ.
ಹೌದು, ಬಿಎಂಟಿಸಿ ಈಗ ತುಮಕೂರಿನಿಂದ ನೇರವಾಗಿ ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್ಗೆ ಐಷಾರಾಮಿ ‘ವಾಯು ವಜ್ರ’ ಎಸಿ ಬಸ್ ಸೇವೆಯನ್ನು ಶುರು ಮಾಡಿದೆ. ಜುಲೈ 6, 2026 ರಿಂದಲೇ ಈ ಸೇವೆ ಅಧಿಕೃತವಾಗಿ ಆರಂಭವಾಗಿದೆ. ಅಷ್ಟಕ್ಕೂ ಇದರ ಸ್ಪೆಷಾಲಿಟಿಯಲ್ಲೇ ಇರೋದು ಅಸಲಿ ಮಜಾ. ಈ ಬಸ್ ಸಿಟಿಯ ಟ್ರಾಫಿಕ್ ಒಳಗೆ ಬರೋದೇ ಇಲ್ಲ!
ರೂಟ್ ಮತ್ತು ಟೈಮಿಂಗ್ಸ್ ಹೇಗಿದೆ?
- ರೂಟ್ ಮ್ಯಾಪ್: ತುಮಕೂರಿನಿಂದ ಹೊರಟು ಮಾದಾವರ, ಮೈಸೂರು ನೈಸ್ ರಸ್ತೆ, ಕನಕಪುರ ನೈಸ್ ರಸ್ತೆ, ಬನ್ನೇರುಘಟ್ಟ ನೈಸ್ ರಸ್ತೆ ಮೂಲಕ ನೇರವಾಗಿ ಎಲೆಕ್ಟ್ರಾನಿಕ್ ಸಿಟಿ ತಲುಪುತ್ತದೆ.
- ಮಾರ್ಗ ಸಂಖ್ಯೆ: ಈ ಹೊಸ ಸೇವೆಗೆ EX-V-TMK-1A ಎಂದು ಹೆಸರಿಸಲಾಗಿದೆ.
- ಬಸ್ಗಳ ಸಂಖ್ಯೆ: ಈ ಮಾರ್ಗದಲ್ಲಿ 2 ಹವಾನಿಯಂತ್ರಿತ ವಾಯು ವಜ್ರ ಬಸ್ಗಳು ಸಂಚರಿಸಲಿವೆ.
- ಟೈಮಿಂಗ್ಸ್: ಆಫೀಸ್ಗೆ ಹೋಗುವವರ ಅನುಕೂಲಕ್ಕಾಗಿ ಬೆಳಗ್ಗೆ 7:45ಕ್ಕೆ ತುಮಕೂರಿನಿಂದ ಬಸ್ ಹೊರಡಲಿದೆ. ವಾಪಸ್ ಸಂಜೆ 5:45ಕ್ಕೆ ವಿಪ್ರೋ ಗೇಟ್ನಿಂದ ತುಮಕೂರಿಗೆ ಹೊರಡುತ್ತದೆ.
- ಟಿಕೆಟ್ ದರ: ಟೋಲ್ ಮತ್ತು ಜಿಎಸ್ಟಿ ಎಲ್ಲವೂ ಸೇರಿ ಕೇವಲ ₹200 (ಒಬ್ಬರಿಗೆ) ನಿಗದಿಪಡಿಸಲಾಗಿದೆ.
ಕ್ಯಾಬ್ಗಳಿಗೆ ಸಾವಿರಾರು ರೂಪಾಯಿ ಸುರಿಯುವ ಬದಲು, ಎಸಿ ಬಸ್ನಲ್ಲಿ ಆರಾಮಾಗಿ ನಿದ್ದೆ ಮಾಡುತ್ತಾ ಆಫೀಸ್ ಸೇರಬಹುದು!
ಎಲೆಕ್ಟ್ರಾನಿಕ್ ಸಿಟಿಗೆ ಬರುವವರಿಗೆ ಮಾತ್ರವಲ್ಲ, ಅಲ್ಲಿಂದ ಬೇರೆ ಕಡೆ ಹೋಗುವವರಿಗೂ ಬಿಎಂಟಿಸಿ ಇನ್ನೊಂದು ಗುಡ್ ನ್ಯೂಸ್ ಕೊಟ್ಟಿದೆ. ಈ ಬೆಳವಣಿಗೆ ಬಗ್ಗೆ ಹಲವರು ಊಹಿಸಿಯೂ ಇರಲಿಲ್ಲ. ಜುಲೈ 1, 2026 ರಿಂದಲೇ ಜಾರಿಗೆ ಬರುವಂತೆ, ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್ನಿಂದ ಟಿನ್ ಫ್ಯಾಕ್ಟರಿಗೆ ಹೊಸ ಮೆಟ್ರೋ ಫೀಡರ್ ಮಾರ್ಗವನ್ನು ಬಿಎಂಟಿಸಿ ಪರಿಚಯಿಸಿದೆ.
ಈ ಫೀಡರ್ ಬಸ್ನ ಹೈಲೈಟ್ಸ್ ಇಲ್ಲಿದೆ
- ಮಾರ್ಗ ಸಂಖ್ಯೆ: ಈ ನೂತನ ಮಾರ್ಗಕ್ಕೆ MF-22ET ಎಂದು ನಂಬರ್ ನೀಡಲಾಗಿದೆ.
- ಬಸ್ಗಳ ಪ್ರಕಾರ: ಸಾರ್ವಜನಿಕರ ಅನುಕೂಲಕ್ಕಾಗಿ ಒಟ್ಟು 6 ಹವಾನಿಯಂತ್ರಣರಹಿತ (ಸಾಮಾನ್ಯ) ಬಸ್ಗಳನ್ನು ಈ ರೂಟ್ನಲ್ಲಿ ಬಿಡಲಾಗಿದೆ.
- ಸಂಪರ್ಕಿಸುವ ಪ್ರಮುಖ ಸ್ಥಳಗಳು: ಹೊಸರೋಡ್, ಹರಳೂರು, ಜಂಕ್ಷನ್ ಆಫ್ ಸರ್ಜಾಪುರ, ಕಾಡುಬೀಸನಹಳ್ಳಿ, ಹಾಗೂ ಮಾರತ್ ಹಳ್ಳಿ ಬ್ರಿಡ್ಜ್ ಮೂಲಕ ಈ ಬಸ್ ಟಿನ್ ಫ್ಯಾಕ್ಟರಿ ತಲುಪುತ್ತದೆ.
- ವೇಳಾಪಟ್ಟಿ: ಬೆಳಗ್ಗೆ 5:30 ರಿಂದ ರಾತ್ರಿ 9:10 ರವರೆಗೆ ಎರಡೂ ಕಡೆಯಿಂದ ಬಸ್ಗಳು ಲಭ್ಯವಿರಲಿವೆ.
ಸಾವಿರಾರು ಜನರಿಗೆ ಇದು ಉಪಯುಕ್ತ ಮಾಹಿತಿ!
ಒಂದು ನಿರ್ಧಾರ ಸಾವಿರಾರು ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ. ತುಮಕೂರಿನಿಂದ ಬರುವವರು ಸುಲಭವಾಗಿ ಎಲೆಕ್ಟ್ರಾನಿಕ್ ಸಿಟಿ ತಲುಪಬಹುದು. ಇತ್ತ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲಿನ ಐಟಿ ಉದ್ಯೋಗಿಗಳು ಟಿನ್ ಫ್ಯಾಕ್ಟರಿ ಅಥವಾ ಮಾರತ್ಹಳ್ಳಿ ಕಡೆಗೆ ಹೋಗಲು ಯಾವುದೇ ಪರದಾಟವಿಲ್ಲದೆ, ಕಡಿಮೆ ಖರ್ಚಿನಲ್ಲಿ ಸಾಮಾನ್ಯ ಬಸ್ ಬಳಸಬಹುದು. ಟ್ರಾಫಿಕ್ನಲ್ಲಿ ಸಿಲುಕಿ ಸಮಯ ಹಾಳು ಮಾಡಿಕೊಳ್ಳುವ ಬದಲು, ಈ ಹೊಸ ಸಾರಿಗೆ ವ್ಯವಸ್ಥೆಯನ್ನು ಬಳಸಿಕೊಳ್ಳಿ. ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸ್ಪಂದನೆ ನೋಡಿಕೊಂಡು ಇಂತಹ ಇನ್ನಷ್ಟು ಮಾರ್ಗಗಳು ಶುರುವಾದರೂ ಅಚ್ಚರಿಯಿಲ್ಲ.
ತುಮಕೂರು-ಎಲೆಕ್ಟ್ರಾನಿಕ್ ಸಿಟಿ ನಡುವಿನ ಸುಮಾರು 80-90 ಕಿ.ಮೀ. (NICE ರಸ್ತೆ ಮಾರ್ಗದಲ್ಲಿ) ಪ್ರಯಾಣವನ್ನು ಈ AC ಎಕ್ಸ್ಪ್ರೆಸ್ ಬಸ್ ಸುಮಾರು 1.5-2 ಗಂಟೆಗಳಲ್ಲಿ ಪೂರೈಸುವ ಸಾಧ್ಯತೆಯಿದೆ . ಇದು ತುಮಕೂರು, ಮಾದಾವರ, ಮೈಸೂರು/ಕನಕಪುರ/ಬನ್ನೇರುಘಟ್ಟ NICE ರಸ್ತೆ ಪ್ರದೇಶಗಳಿಗೆ ಸಂಬಂಧಿಸಿದ ಸಾವಿರಾರು IT ಉದ್ಯೋಗಿಗಳಿಗೆ ಪ್ರತಿದಿನದ ಟ್ರಾಫಿಕ್ ಒದ್ದಾಟವನ್ನು ಕಡಿಮೆ ಮಾಡುತ್ತದೆ. ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್ನಿಂದ ಟಿನ್ ಫ್ಯಾಕ್ಟರಿ (ಸುಮಾರು 20-35 ಕಿ.ಮೀ.) MF-22ET ಫೀಡರ್ ಬಸ್ ಸುಮಾರು 40-60 ನಿಮಿಷಗಳಲ್ಲಿ ಸಂಪರ್ಕಿಸುತ್ತದೆ (ಹೊಸರೋಡ್, ಹರಳೂರು, ಸರ್ಜಾಪುರ ಜಂಕ್ಷನ್, ಕಾಡುಬೀಸನಹಳ್ಳಿ, ಮಾರತ್ಹಳ್ಳಿ ಬ್ರಿಡ್ಜ್ ಮೂಲಕ), ಇದು ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ, ಹೊಸರೋಡ್, ಮಾರತ್ಹಳ್ಳಿ, ಕಾರ್ಪೊರೇಟ್ ಹಬ್ಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಮೆಟ್ರೋ/ಇತರ ಸಾರಿಗೆಯೊಂದಿಗೆ ಸುಗಮ ಸಂಪರ್ಕ ನೀಡುತ್ತದೆ.
ಒಟ್ಟಾರೆಯಾಗಿ, ಈ ಸೇವೆಗಳು ಬೆಂಗಳೂರು-ತುಮಕೂರು ಕಾರಿಡಾರ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲಿನ ದಕ್ಷಿಣ/ಪೂರ್ವ ಐಟಿ ಪ್ರದೇಶಗಳಿಗೆ ದೈನಂದಿನ ಸಾವಿರಾರು ಜನರ ಪ್ರಯಾಣ ಸಮಯವನ್ನು 1-2 ಗಂಟೆಗಳಷ್ಟು ಉಳಿಸುತ್ತವೆ, ಟ್ರಾಫಿಕ್ ತಪ್ಪಿಸಿ ಆರಾಮದಾಯಕ ಮತ್ತು ಕೈಗೆಟುಕುವ ಪ್ರಯಾಣವನ್ನು ಸಾಧ್ಯವಾಗಿಸುತ್ತವೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸ್ಪಂದನೆಯಂತೆ ಹೆಚ್ಚಿನ ಟ್ರಿಪ್ಗಳು ಸೇರಬಹುದು.
Bangalore [Bangalore],Bangalore,Karnataka













