BJP MLA: ಬಿಜೆಪಿ ಶಾಸಕನಿಗೆ 4 ವರ್ಷ ಜೈಲು! 2018ರಲ್ಲಿ ಕೇಸ್, ಈಗ ಬಂತು ತೀರ್ಪು! ಏನಿದು ಪ್ರಕರಣ ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಶಾಸಕ ರಾಜು ಕುಮಾರ್​ ಸಿಂಗ್​


Last Updated:

ಬಿಜೆಪಿ ಶಾಸಕ ರಾಜು ಕುಮಾರ್ ಸಿಂಗ್ ಅವರಿಗೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಶಾಸಕ ರಾಜು ಕುಮಾರ್​ ಸಿಂಗ್​
ಶಾಸಕ ರಾಜು ಕುಮಾರ್​ ಸಿಂಗ್​

ದೆಹಲಿ: ಬಿಜೆಪಿ ಶಾಸಕನಿಗೆ (BJP MLA) ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸೆಲೆಬ್ರೇಟರಿ ಫೈರಿಂಗ್ ಪ್ರಕರಣಕ್ಕೆ (Celebratory Firing Case) ಸಂಬಂಧಪಟ್ಟಂತೆ ಬಿಹಾರದ (Bihar) ಸಾಹೇಬ್‌ಗಂಜ್ ಕ್ಷೇತ್ರದ ಬಿಜೆಪಿ ಶಾಸಕ ರಾಜು ಕುಮಾರ್ ಸಿಂಗ್ (Raju Kumar Singh) ಅವರಿಗೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್​ (Rouse Avenue District Court Complex) ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಜೈಲು ಶಿಕ್ಷೆಯ ಜೊತೆಗೆ 25 ಲಕ್ಷ ರೂಪಾಯಿ ದಂಡ ಕೂಡ ವಿಧಿಸಲಾಗಿದೆ.

ಏನಿದು ಫೈರಿಂಗ್​ ಪ್ರಕರಣ?  

2018ರ ಡಿಸೆಂಬರ್ 31ರಂದು ದೆಹಲಿಯ ಫಾರ್ಮ್‌ಹೌಸ್‌ನಲ್ಲಿ ನಡೆದ ಹೊಸ ವರ್ಷದ ಪಾರ್ಟಿ ಸಂದರ್ಭದಲ್ಲಿ ಬಿಜೆಪಿ ಶಾಸಕ ರಾಜು ಕುಮಾರ್ ಸಿಂಗ್ ತಮ್ಮ ಗನ್​ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಗಾಳಿಯಲ್ಲಿ ಹಾರಿದ ಗುಂಡು ತಗುಲಿ ಡಾ. ಅರ್ಚನಾ ಗುಪ್ತಾ ಎಂಬ 45 ವರ್ಷದ ಮಹಿಳೆ ಗಾಯಗೊಂಡು, ನಂತರ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಅಂದು ಈ ಘಟನೆ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು.

ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಬಿಜೆಪಿ ಶಾಸಕ ರಾಜು ಕುಮಾರ್​ ಸಿಂಗ್​ ಅವರ ಪತ್ನಿ ರೇಣು ಸಿಂಗ್, ರಾಣಾ ರಾಜೇಶ್ ಸಿಂಗ್ ಮತ್ತು ರಾಮೇಂದ್ರ ಸಿಂಗ್ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಲಾಗಿದೆ. ರಾಜು ಕುಮಾರ್ ಸಿಂಗ್ ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರಾಗಿರುವುದರಿಂದ ರೂಸ್ ಅವೆನ್ಯೂ ನ್ಯಾಯಾಲಯದ ಈ ನಿರ್ಧಾರವನ್ನು ರಾಜಕೀಯವಾಗಿ ಮಹತ್ವದ್ದಾಗಿ ಪರಿಗಣಿಸಲಾಗಿದೆ. ಈಗ, ಅವರು ಈ ಪ್ರಕರಣವನ್ನು ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ.
ಶಾಸಕ ಸ್ಥಾನಕ್ಕೆ ಕುತ್ತು

ಭಾರತೀಯ ಚುನಾವಣಾ ಕಾಯ್ದೆಯ ಪ್ರಕಾರ, ಜನಪ್ರತಿನಿಧಿಗಳು 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ಜೈಲು ಶಿಕ್ಷೆಗೆ ಒಳಗಾದರೆ ಅವರು ತಕ್ಷಣವೇ ತಮ್ಮ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಮುಜಾಫರ್‌ಪುರ ಜಿಲ್ಲೆಯ ಸಾಹೇಬ್‌ಗಂಜ್ ಕ್ಷೇತ್ರದ ಶಾಸಕರಾಗಿರುವ ರಾಜು ಕುಮಾರ್ ಸಿಂಗ್ ತಮ್ಮ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವ ಸಾಧ್ಯತೆ ಹೆಚ್ಚಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports