Bihar Shocker: ನಡುರಸ್ತೆಯಲ್ಲಿ ಯುವತಿಯನ್ನು ಎಳೆದಾಡಿದ ಕಾಮುಕರಿಗೆ ಗುಂಡೇಟು, ಬಿಹಾರದ ಭೀಭತ್ಸ ಘಟನೆಗೆ ಖಾಕಿಯ ಖಡಕ್ ಉತ್ತರ | Jamui Bihar shocker Main Accused Nandan | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಪ್ರಾತಿನಿಧಿಕ ಚಿತ್ರ (ಎಐ ಕ್ಯಾನ್ವ)


Last Updated:

Bihar Shocker: ಬೆಚ್ಚಿ ಬೀಳಿಸಿದ ಬಿಹಾರದ ಘಟನೆಯ ವಿಡಿಯೋ ವೈರಲ್ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿ ಆರೋಪಿಗಳನ್ನು ಬೆನ್ನಟ್ಟಿದ್ದಾರೆ.

ಪ್ರಾತಿನಿಧಿಕ ಚಿತ್ರ (ಎಐ ಕ್ಯಾನ್ವ)
ಪ್ರಾತಿನಿಧಿಕ ಚಿತ್ರ (ಎಐ ಕ್ಯಾನ್ವ)

ಬಿಹಾರದ (Bihar) ಜಮುಯಿ (Jamui) ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿ ಮತ್ತು ಬಾಲಕನಿಗೆ ಪುರುಷರ ಗುಂಪೊಂದು ಕಿರುಕುಳ ನೀಡಿದ ವಿಡಿಯೋ (Video) ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಅಪ್ರಾಪ್ತರ ಮೇಲೆ ಕಿರುಕುಳ ನಡೆಸಿ ದೌರ್ಜನ್ಯ ನಡೆಸಿದ ಆರೋಪದ ಒಂದು ದಿನದ ನಂತರ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿ ನಂದನ್ ಯಾದವ್‌ಗೆ (Nandan Yadav) ಪೊಲೀಸರು (Police) ಗುಂಡು ಹಾರಿಸಿದ್ದು ಸದ್ಯ ಆರೋಪಿಯ ಕಾಲಿಗೆ ಗಾಯವಾಗಿದೆ ಎಂದು ವರದಿಯಾಗಿದೆ.

ನ್ಯೂಸ್ 18 ಮಾಹಿತಿಯ ಪ್ರಕಾರ , ಆಪಾದಿತ ಎನ್‌ಕೌಂಟರ್‌ನಲ್ಲಿ ನಂದನ್ ಯಾದವ್ ಅವರ ಕಾಲಿಗೆ ಗುಂಡೇಟಿನ ಗಾಯವಾಗಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಹರೇರಾಮ್ ಯಾದವ್ ಅವರ ಕಾಲಿಗೂ ಗಾಯವಾಗಿದೆ. ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ.

ಪ್ರಕರಣವೇನು?

ಸೆಪ್ಟೆಂಬರ್ 19, ಶನಿವಾರ ಸಂಜೆ ಕೋಚಿಂಗ್ ತರಗತಿಯಿಂದ ಹಿಂತಿರುಗುತ್ತಿದ್ದಾಗ ಜಮುಯಿಯಲ್ಲಿ ಅಪ್ರಾಪ್ತ ಬಾಲಕ ಮತ್ತು ಬಾಲಕಿಯ ಮೇಲೆ ಪುರುಷರ ಗುಂಪೊಂದು ಲೈಂಗಿಕ ದೌರ್ಜನ್ಯ ನಡೆಸಿ ಕಿರುಕುಳ ನೀಡಿದೆ. ಆರೋಪಿಗಳು ಅವರ ಸ್ಕೂಟರ್ ಅನ್ನು ನಿಲ್ಲಿಸಿ, ಬಲವಂತವಾಗಿ ಕೆಳಗಿಳಿಸಿ, ಓಡಿಹೋಗಲು ಪ್ರಯತ್ನಿಸಿದಾಗ ಬೆನ್ನಟ್ಟಿದ್ದಾರೆ.

ಘಟನೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ವಿಷಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed