Last Updated:
ಕನ್ನಡ ಬಿಗ್ ಬಾಸ್-13 ಶುರು ಆಗಿದೆ. 16 ಸ್ಪರ್ಧಿಗಳು ಒಳಗೆ ಹೋಗಿದ್ದಾರೆ. ಆದರೆ, ಇವರು ಇನ್ನು ವಿಮಾನದಲ್ಲಿಯೇ ಇದ್ದಾರೆ. ಇಲ್ಲಿ ಇವರಿಗೆ ಸಿಕ್ಕಾಪಟ್ಟೆ ಕಿರಿಕಿರಿ ಆಗಿದೆ. ಇದರಿಂದ ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ.
ಬಿಗ್ ಬಾಸ್ ಸೀಸನ್ 13 ಶುರು ಆಗಿದೆ. ಮೊದಲ ದಿನದ ಪ್ರೋಮೋ (Promo) ಕೂಡ ಹೊರ ಬಂದಿದೆ. ಆದರೆ, ಸ್ಪರ್ಧಿಗಳ ವಿಮಾನ ಪಯಣದ ಹೊಸ ಅನುಭವದ ಪರದಾಟವು ಚಾಲು ಆಗಿದೆ. ಬಸ್ ಅಲ್ಲಿ ಪ್ರಯಾಣದಲ್ಲಿ ಮಲಗುವ ತರವೇ ವಿಮಾನದ ಸೀಟ್ಗಳ (Plane Seats) ಮೇಲೆ ಮಲಗಿ ಕೊಂಡಿದ್ದಾರೆ. ಎಲ್ಲಿ ಮಲಗಿಲಿದ್ದಾರೋ ಅಲ್ಲಿಯೇ ಇವರಿಗೆ ಕಿರಿಕಿರಿ ಶುರು ಆಗಿದೆ. ಇದರಿಂದ ದೊಡ್ಮನೆಯ ವಿಮಾನದಲ್ಲಿ ಹಲ್ಚಲ್ ಎದ್ದಿದೆ. ಓಂ ಪ್ರಕಾಶ್ ರಾವ್ (OM Prakash Rao) ತಲೆ ಕೆರೆದುಕೊಳಿತಿದ್ದಾರೆ. ಸ್ಪರ್ಧಿಗಳಿಗೆ ಕಿರಿಕಿರಿ ಹೆಚ್ಚಾಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.














