ಕಿರಣ್ ಶಾಸ್ತ್ರಿಗೆ ಚಪ್ಪಾಳೆ?
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ಆದರೆ, ಇದರಿಂದ ಮನೆಯ ಸದಸ್ಯರಿಗೆ ಕಿರಿಕಿರಿ ಆಗಿರೋದು ಅಷ್ಟೆ ಸತ್ಯ ಬಿಡಿ. ಹಾಗೆ ಸುದೀಪ್ ಹೇಳಿದ್ಮೇಲೆ ಒಂಚೂರು ಬದಲಾಗಿರೋದು ಕಾಣಿಸುತ್ತದೆ. ಸಂಗೀತ ಭಟ್ ಈ ವಿಷಯನ್ನ ಹೇಳಿದ್ದಾರೆ.
ಆದರೆ, ಕಿರಣ್ ಶಾಸ್ತ್ರಿ ಈ ವಾರ ಕಳಪೆ ಪಡೆದಿದ್ದಾರೆ. ಮನೆಯ ಬಹುತೇಕ ಸದಸ್ಯರು ಕಳಪೆ ಕೊಟ್ಟಿದ್ದಾರೆ. ಇದರಿಂದ ಕಿರಣ್ ಶಾಸ್ತ್ರಿ ಜೈಲು ಸೇರಿದ್ದಾರೆ.
ಧನುಷ್ ಮಂಜುನಾಥ್ ತರಕಾರಿ ತಂದುಕೊಟ್ಟಿದ್ದಾರೆ. ಆದರೆ, ಹಾಗೆ ಮಾಡು, ಹೀಗೆ ಮಾಡು ಅಂದ್ದಿದ್ದೇ ಬಂತು. ಕಿರಣ್ ಶಾಸ್ತ್ರಿ ಮಾಡೋದಿಲ್ಲ ಅಂತ ಹೇಳ್ತಾರೆ. ಇರೋದು ಇದೊಂದೇ ಕೆಲಸ ನಿನಗೆ, ಮಾಡಲೋ ಅಂತ ಮಾಡರ್ನ್ ಕವಿ ಮಂಜ್ಯಾ ಹೇಳ್ತಾರೆ.
ಜೈಲಿನಲ್ಲೂ ಕಿರಣ್ ಕಿರಿಕ್
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ನೀನು ಯಾರು ನನಗೆ ಹೇಳೋಕೆ ಅಂತಲೇ ಕಿರಣ್ ಹೇಳ್ತಾರೆ. ನಾನು ಮಾಡೋದಿಲ್ಲ ಅಂತಲೂ ಹೇಳ್ತಾರೆ. ಕೊನೆಗೆ ಕಿರಣ್ ಶಾಸ್ತ್ರಿಗೆ ಮಂಜ್ಯಾ ತಮ್ಮದೇ ರೀತಿ ಕ್ಷಮೆ ಕೇಳುವುದು ಇದೆ.
ಕಿರಣ್ ಶಾಸ್ತ್ರಿಗೆ ಕಿಚ್ಚನ ಚಪ್ಪಾಳೆ ಸಿಕ್ತೇ. ಈ ಒಂದು ಕುತೂಹಲ ಹೆಚ್ಚಾಗಿದೆ. ಕಾರಣ, ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಹರಿದಾಡುತ್ತಿದೆ.
ಈ ದೊಡ್ಮನೆಯಿಂದ ಈಗಾಗಲೇ ಇಬ್ಬರು ಮನೆಗೆ ಹೋಗಿದ್ದಾರೆ. ಮೊದಲು ಪ್ರಥಮ ಪ್ರಸಾದ್ ಎಲಿಮಿನೇಟ್ ಆಗಿದ್ದಾರೆ. ಇವರು ಹೋದ್ಮೇಲೆ ಡೈರೆಕ್ಟರ್ ಓಂ ಪ್ರಕಾಶ್ ರಾವ್ ಮನೆಯಿಂದ ಹೊರಗೆ ಹೋಗಿದ್ದಾರೆ.
ಆದರೆ, ಇವರು ಎಲಿಮಿನೇಟ್ ಆಗಿಲ್ಲ. ಬದಲಾಗಿ ಅನಾರೋಗ್ಯಯದಿಂದ ಆಟವನ್ನ ಅರ್ಧಕ್ಕೆ ನಿಲ್ಲಿಸಿ ಹೋಗಿದ್ದಾರೆ. ಈಗಾಗಲೇ ಹೇಳಿದಂತೆ ತಾಂಡವ್ ರಾವ್ ಮನೆಗೆ ಹೋಗಿದ್ದಾರೆ ಅಂತಲೇ ಹೇಳಬಹುದು.













