Last Updated:
ಈ ವರದಿಯಲ್ಲಿ ಮಹಾರಾಜರ ಶಿಷ್ಯ ರಸಿಕ್ ದುಲಾರಿ ಅಲಿಯಾಸ್ ದೀಪಕ್ ಬಿದ್ದು ಸಾವನ್ನಪ್ಪಿದ ನಾಲ್ಕು ಅಂತಸ್ತಿನ ಕಟ್ಟಡವನ್ನು ತೋರಿಸಲಾಗಿತ್ತು. ಈ ಕಟ್ಟಡದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇದರ ದೃಶ್ಯಗಳನ್ನು ವೃಂದಾವನ ಪೊಲೀಸರು ಪಡೆದುಕೊಂಡಿದ್ದಾರೆ. ರಸಿಕ್ ದುಲಾರಿ ಬೀಳುತ್ತಿರುವಾಗ ಒಳಗೆ ಯಾರಿದ್ದರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಬಹುದು.
ಲಕ್ನೋ(ಸೆ.26): ಉತ್ತರ ಪ್ರದೇಶದ ಮಥುರಾ-ವೃಂದಾವನದಲ್ಲಿರುವ ಸಂತ ಪ್ರೇಮಾನಂದ ಮಹಾರಾಜರ ಕೆಲ್ಲಿ ಕುಂಜ್ ಆಶ್ರಮದಲ್ಲಿ ನ್ಯೂಸ್ 18 ಇಂಡಿಯಾ ಗ್ರೌಂಡ್ ರಿಪೋರ್ಟ್ ನಡೆಸಿತು. ಈ ವರದಿಯಲ್ಲಿ ಮಹಾರಾಜರ ಶಿಷ್ಯ ರಸಿಕ್ ದುಲಾರಿ ಅಲಿಯಾಸ್ ದೀಪಕ್ ಬಿದ್ದು ಸಾವನ್ನಪ್ಪಿದ ನಾಲ್ಕು ಅಂತಸ್ತಿನ ಕಟ್ಟಡವನ್ನು ತೋರಿಸಲಾಗಿತ್ತು. ಈ ಕಟ್ಟಡದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇದರ ದೃಶ್ಯಗಳನ್ನು ವೃಂದಾವನ ಪೊಲೀಸರು ಪಡೆದುಕೊಂಡಿದ್ದಾರೆ. ರಸಿಕ್ ದುಲಾರಿ ಬೀಳುತ್ತಿರುವಾಗ ಒಳಗೆ ಯಾರಿದ್ದರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಬಹುದು.
ಮಹಾರಾಜರ ಹಲವಾರು ಶಿಷ್ಯರೊಂದಿಗೆ ಮಾತನಾಡಲು ಪ್ರಯತ್ನಿಸಲಾಯಿತು, ಆದರೆ ಯಾರೂ ಮಾತನಾಡಲು ಸಿದ್ಧರಿರಲಿಲ್ಲ. ಎಲ್ಲರೂ “ನಮಗೆ ಗೊತ್ತಿಲ್ಲ, ನಾವು ಹೊರಗೆ ವಾಸಿಸುತ್ತೇವೆ” ಎಂದಷ್ಟೇ ಉತ್ತರಿಸಿದ್ದಾರೆ. ಇನ್ನು ಇಲ್ಲಿನ ಎದುರು ಕಟ್ಟಡದಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ಮಾತನಾಡಿ ಬೆಳಿಗ್ಗೆ 10:30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ನಾವ್ಯಾರೂ ಅಲ್ಲಿಗೆ ಹೋಗಿರಲಿಲ್ಲ, ಅವರ ಜನರೇ ಬಿದ್ದ ಶಿಷ್ಯನನ್ನು ಆಸ್ಪತ್ರೆಗೆ ಕರೆದೊಯ್ದರು,. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದಿದ್ದಾರೆ.
ಶುಕ್ರವಾರ ಬೆಳಿಗ್ಗೆ, ವೃಂದಾವನದ ಗುರುಕೃಪಾ ಕುಂಜ್ನಲ್ಲಿರುವ ಕಟ್ಟಡದಿಂದ ಬಿದ್ದು ಸಂತ ಪ್ರೇಮಾನಂದ ಮಹಾರಾಜರ ಶಿಷ್ಯರೊಬ್ಬರು ಅನುಮಾನಾಸ್ಪವಾಗಿ ಸಾವನ್ನಪ್ಪಿದ್ದಾರೆ. ಅನೇಕ ಶಿಷ್ಯರು ಶಿಕ್ಷಣ ಮತ್ತು ದೀಕ್ಷೆಗಾಗಿ ಅಲ್ಲಿ ವಾಸಿಸುತ್ತಿದ್ದರು. ಅಪಘಾತದ ಸಮಯದಲ್ಲಿ, ಅನೇಕ ಶಿಷ್ಯರು ಕಟ್ಟಡದಲ್ಲಿ ಹಾಜರಿದ್ದರು. ಮಾಹಿತಿ ಪಡೆದ ತಕ್ಷಣ, ತಕ್ಷಣ ಕೆಳಗಡೆಗೆ ಧಾವಿಸಿ ಗಾಯಗೊಂಡ ರಸಿಕ್ ದುಲಾರಿಯನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಆರಂಭದಲ್ಲಿ, ಪೊಲೀಸರು ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಿದ್ದಾರಾದರೂ ಆದರೆ ಹಲವಾರು ಪ್ರಶ್ನೆಗಳು ಕೊಲೆಯ ಸಾಧ್ಯತೆಯನ್ನು ಹುಟ್ಟುಹಾಕುತ್ತವೆ. ರಸಿಕ್ ದುಲಾರಿ ವಾಸಿಸುತ್ತಿದ್ದ ಕೋಣೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು. ವಿಧಿವಿಜ್ಞಾನ ತಜ್ಞರ ಮೂಲಕ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಕೋಣೆಯಲ್ಲಿ ರಕ್ತದ ಕಲೆಗಳಿರುವ ಗ್ರೈಂಡರ್ ಅನ್ನು ಪೊಲೀಸರು ಕಂಡುಕೊಂಡಿದ್ದಾರೆ. ಅಲ್ಲದೇ ರಸಿಕ್ ದುಲಾರಿಯ ಖಾಸಗಿ ಭಾಗಗಳಲ್ಲಿಯೂ ಕಡಿತ ಮತ್ತು ರಕ್ತದ ಕಲೆಗಳಿವೆ ಎನ್ನಲಾಗಿದೆ. ಇವೆಲ್ಲವೂ ಈ ಪ್ರಕರಣವು ಆತ್ಮಹತ್ಯೆಯೋ ಅಥವಾ ಮುಚ್ಚಿಹಾಕುವಿಕುವ ಯತ್ನವೋ ಎಂಬ ಪ್ರಶ್ನೆ ಹುಟ್ಟು ಹಾಕಿದೆ.
ಪೊಲೀಸರಿಗೆ ಸದ್ಯ ದುಲಾರಿ ಬಿದ್ದ ಸಿಸಿಟಿವಿ ದೃಶ್ಯಗಳಷ್ಟೇ ಸಿಕ್ಕಿದೆ. ಆದರೆ ಆಶ್ರಮ ಕಟ್ಟಡದೊಳಗೆ ಎಷ್ಟು ಶಿಷ್ಯರು ಇದ್ದರು ಮತ್ತು ಮೃತ ರಸಿಕ್ ದುಲಾರಿಯೊಂದಿಗೆ ಯಾರು ವಾಸಿಸುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಅವರ ಬಳಿ ಗ್ರೈಂಡರ್ ಎಷ್ಟು ದಿನಗಳಿಂದ ಇತ್ತು ಅಥವಾ ಅದು ಇದ್ದಕ್ಕಿದ್ದಂತೆ ಸಿಕ್ಕಿದೆಯೇ ಎಂಬ ಪ್ರಶ್ನೆಗಳೂ ಎದ್ದಿವೆ.
ಶಿಷ್ಯ ರಸಿಕ್ ದುಲಾರಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ಖಾಸಗಿ ಭಾಗಗಳಿಗೆ ಏಕೆ ಗಾಯ ಮಾಡಿಕೊಂಡರು ಎಂಬ ಬಗ್ಗೆ ಪೊಲೀಸರು ಗೊಂದಲಕ್ಕೊಳಗಾಗಿದ್ದಾರೆ. ಗ್ರೈಂಡರ್ ನಿಂದ ಗಾಯಗೊಂಡ ನಂತರ ಅವರ ನರಳಾಟವನ್ನು ಯಾರಾದರೂ ಕೇಳಿದ್ದಾರೆಯೇ ಎಂದು ಅವರು ತನಿಖೆ ನಡೆಸುತ್ತಿದ್ದಾರೆ. ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗದ ಕಾರಣ, ಆತ್ಮಹತ್ಯೆಗೆ ಕಾರಣ ಸೇರಿದಂತೆ ಹಲವಾರು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯಲು ವೃಂದಾವನ ಪೊಲೀಸರು ಯತ್ನಿಸುತ್ತಿದ್ದಾರೆ.
ಮಥುರಾದ ಸರ್ವೋದಯ ಆಸ್ಪತ್ರೆಗೆ ಗಾಯಗೊಂಡ ವ್ಯಕ್ತಿಯನ್ನು ಕರೆತರಲಾಗಿದೆ ಎಂಬ ಮಾಹಿತಿ ತಮಗೆ ಬಂದಿದೆ ಎಂದು ತನಿಖಾಧಿಕಾರಿ ಸಂದೀಪ್ ಕುಮಾರ್ ಸಿಂಗ್ ನ್ಯೂಸ್ 18 ಇಂಡಿಯಾಗೆ ತಿಳಿಸಿದ್ದಾರೆ. ಈ ಮಾಹಿತಿ ಪಡೆದ ಪೊಲೀಸ್ ತಂಡ ತಕ್ಷಣ ಆಗಮಿಸಿ ಜಬಲ್ಪುರದ ನಿವಾಸಿ ರಸಿಕ್ ದುಲಾರಿ ಶರಣ್ ಆಶ್ರಮದ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಕಂಡುಕೊಂಡಿದ್ದಾರೆ.
ಪ್ರಾಥಮಿಕ ತನಿಖೆಗಳು ಇದು ಆತ್ಮಹತ್ಯೆ ಎಂದು ಸೂಚಿಸಿವೆ. ತನಿಖೆಗಾಗಿ ವಿಧಿವಿಜ್ಞಾನ ತಂಡವನ್ನು ಕಳುಹಿಸಲಾಗಿದೆ. ಕಂಡುಬಂದ ಎಲ್ಲಾ ವಸ್ತುಗಳನ್ನು ನಾವು ಸ್ವಾಧೀನಪಡಿಸಿಕೊಂಡಿದ್ದೇವೆ. ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಟೈಲ್ಸ್ ಕತ್ತರಿಸಲು ಬಳಸುವ ಗ್ರೈಂಡರ್ ತನಿಖೆಯ ವಿಷಯವಾಗಿದೆ. ವಿದ್ಯುತ್ ಮತ್ತು ಟೈಲ್ ಕತ್ತರಿಸುವ ಉಪಕರಣಗಳನ್ನು ಅಲ್ಲಿಯೇ ಇರಿಸಲಾಗಿತ್ತು. ಅಲ್ಲಿ ವಾಸವಾಗಿದ್ದ ಇಬ್ಬರನ್ನು ನಾವು ಪ್ರಶ್ನಿಸಿದ್ದೇವೆ. ಛಾವಣಿಯ ಮೇಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ನಾವು ಪಡೆದುಕೊಂಡಿದ್ದೇವೆ ಮತ್ತು ಅಲ್ಲಿಂದ ಬಿದ್ದ ಸಂದರ್ಭಗಳನ್ನು ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯ ಸುತ್ತಲಿನ ಸಂದರ್ಭಗಳನ್ನು ತನಿಖೆ ಮಾಡಲಾಗುತ್ತಿದೆ. ಘಟನಾ ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಕಂಡುಬಂದಿಲ್ಲ, ಆದರೆ ಆಶ್ರಮದಲ್ಲಿ ಅವರೊಂದಿಗೆ ವಾಸಿಸುತ್ತಿದ್ದ ಇಬ್ಬರನ್ನು ವಿಚಾರಣೆ ಮಾಡಲಾಗುತ್ತಿದೆ. ಅವರ ಮೊಬೈಲ್ ಫೋನ್ಗಳನ್ನು ಪರಿಶೀಲಿಸಲಾಗುತ್ತಿದೆ. ನಾವು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ. ಕುಟುಂಬ ಸದಸ್ಯರು ಸಹ ಬಂದಿದ್ದಾರೆ ಮತ್ತು ನಾವು ಅವರೊಂದಿಗೆ ಮಾತನಾಡುತ್ತೇವೆ ಎಂದೂ ಪೊಲೀಸರು ತಿಳಿಸಿದ್ದಾರೆ.














