Bigg Boss 13: ಬಿಗ್ ಬಾಸ್‌ನಲ್ಲಿ ಬಿಗ್ ಟ್ವಿಸ್ಟ್! ದೊಡ್ಮನೆಗೆ ಗುಡ್‌ಬೈ ಹೇಳಿದ್ರಾ ಈ ಕಾಮನ್ ಮ್ಯಾನ್? | | ACTPnews

News18


Last Updated:

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಈ ವಾರ ಲಿಖಿತ್ ಬಿಗ್ ಬಾಸ್ ಮನೆಯಿಂದ ಹೊರಬೀಳಬಹುದು ಎಂಬ ಚರ್ಚೆ ನಡೆಯುತ್ತಿದೆ.

News18
News18

ಬಿಗ್ ಬಾಸ್ ಕನ್ನಡ ಸೀಸನ್ 13 (Bigg Boss Kannada Season 13) ದಿನದಿಂದ ದಿನಕ್ಕೆ ಮತ್ತಷ್ಟು ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಾಲ್ಕು ವಾರಗಳಿಗೂ ಹೆಚ್ಚು ಕಾಲ ದೊಡ್ಮನೆ ಆಟ ಮುಂದುವರಿದಿದ್ದು, ಸ್ಪರ್ಧಿಗಳ ನಡುವಿನ ಸ್ನೇಹ, ಭಿನ್ನಾಭಿಪ್ರಾಯ, ವಾಗ್ವಾದ ಮತ್ತು ಎಲಿಮಿನೇಷನ್ ಪ್ರಕ್ರಿಯೆ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಈ ನಡುವೆ ಈ ವಾರ ಯಾರು ದೊಡ್ಮನೆಯಿಂದ ಹೊರಬೀಳಲಿದ್ದಾರೆ ಎಂಬ ಚರ್ಚೆ ಜೋರಾಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭವಾಗಿ ನಾಲ್ಕು ವಾರಗಳು ಕಳೆದಿವೆ. ಆರಂಭದ ದಿನಗಳಲ್ಲಿ ಮನೆಯೊಳಗೆ ಕಾಲಿಟ್ಟ ಸ್ಪರ್ಧಿಗಳು ಇದೀಗ ಆಟದ ನಿಜವಾದ ಆಟವನ್ನು ಆಡಲು ಆರಂಭಿಸಿದ್ದಾರೆ. ಕೆಲವರು ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆಯುತ್ತಿದ್ದರೆ, ಇನ್ನೂ ಕೆಲವರು ತಮ್ಮ ವರ್ತನೆ, ಮತ್ತು ವೈಯಕ್ತಿಕ ವಿಚಾರಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ.

ಪ್ರತಿ ವಾರದಂತೆ ಈ ವಾರವೂ ಎಲಿಮಿನೇಷನ್ ಪ್ರಕ್ರಿಯೆ ಮುಂದುವರಿದಿದೆ. ಸ್ಪರ್ಧಿಗಳು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದರೆ, ವೀಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ಪ್ರತಿ ವಾರದ ನಾಮಿನೇಷನ್ ಮತ್ತು ಎಲಿಮಿನೇಷನ್ ಮೇಲೆ ಸಾಕಷ್ಟು ಕುತೂಹಲ ಮೂಡುತ್ತಿದೆ.

ಇದನ್ನೂ ಓದಿ: Premada Ooralli Movie: ಉತ್ತರ ಭಾರತದಲ್ಲೂ ಪ್ರೇಮದ ಊರಲಿ ಮೂವಿ ರಿಲೀಸ್, ಯಾವಾಗ? ಇಲ್ಲಿದೆ ಮಾಹಿತಿ!

ಬಿಗ್ ಬಾಸ್ ಮನೆಯೊಳಗಿನ ಬೆಳವಣಿಗೆಗಳಿಗೆ ವಾರಾಂತ್ಯದ ಪಂಚಾಯಿತಿ ವಿಶೇಷ ಮಹತ್ವ ಪಡೆದುಕೊಂಡಿದೆ. ಕಿಚ್ಚ ಸುದೀಪ್ ಪ್ರತಿ ವಾರ ದೊಡ್ಮನೆಗೆ ಬಂದು ಸ್ಪರ್ಧಿಗಳ ಆಟವನ್ನು ಪರಿಶೀಲಿಸುತ್ತಿದ್ದಾರೆ. ಯಾರು ಸರಿಯಾಗಿ ಆಡುತ್ತಿದ್ದಾರೆ, ಯಾರು ನಿಯಮ ಉಲ್ಲಂಘಿಸುತ್ತಿದ್ದಾರೆ ಮತ್ತು ಯಾರ ವರ್ತನೆ ಸರಿಯಿಲ್ಲ ಎಂಬುದರ ಕುರಿತು ಸ್ಪರ್ಧಿಗಳಿಗೆ ನೇರವಾಗಿ ತಿಳಿಸುತ್ತಿದ್ದಾರೆ.

ಕಳೆದ ವಾರವೂ ಮನೆಯೊಳಗಿನ ಹಲವು ವಿಚಾರಗಳ ಕುರಿತು ಚರ್ಚೆ ನಡೆದಿತ್ತು. ಅವಿನಾಶ್ ಮತ್ತು ವೈಷ್ಣವಿ ಎಲಿಮಿನೇಷನ್ ಬಳಿಕ ಈ ವಾರದ ಫಲಿತಾಂಶದ ಕುರಿತು ಪ್ರೇಕ್ಷಕರ ಗಮನ ಮತ್ತಷ್ಟು ಹೆಚ್ಚಾಗಿದೆ. ಇದೀಗ ಮತ್ತೊಬ್ಬ ಸ್ಪರ್ಧಿ ದೊಡ್ಮನೆಗೆ ವಿದಾಯ ಹೇಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ವಾರ ಒಟ್ಟು ಆರು ಮಂದಿ ಸ್ಪರ್ಧಿಗಳು ಎಲಿಮಿನೇಷನ್‌ಗೆ ನಾಮಿನೇಟ್ ಆಗಿದ್ದಾರೆ ಎನ್ನಲಾಗಿದೆ. ವಿಶೇಷವೆಂದರೆ ಈ ಪಟ್ಟಿಯಲ್ಲಿ ನಾಲ್ವರು ಕಾಮನ್ ಮ್ಯಾನ್ ಸ್ಪರ್ಧಿಗಳಿದ್ದಾರೆ. ಇವರ ಜೊತೆಗೆ ಯಶಸ್ ಮತ್ತು ಸಂಗೀತಾ ಕೂಡಾ ನಾಮಿನೇಷನ್ ಪಟ್ಟಿಯಲ್ಲಿದ್ದಾರೆ.

ಇದನ್ನೂ ಓದಿ: Lalithamma: ದರ್ಶನ್ ಜೊತೆ ನಟಿಸಿದ್ದ ಕನ್ನಡದ ಹಿರಿಯ ನಟಿ ಲಲಿತಮ್ಮ ಇನ್ನಿಲ್ಲ

ನಾಮಿನೇಷನ್ ಬಳಿಕ ಪ್ರತಿಯೊಬ್ಬ ಸ್ಪರ್ಧಿಯ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಿಕೊಳ್ಳಲು ಮತ ಹಾಕುತ್ತಿದ್ದಾರೆ. ಯಾರು ಹೆಚ್ಚು ಮತಗಳನ್ನು ಪಡೆಯುತ್ತಾರೆ ಮತ್ತು ಯಾರಿಗೆ ಕಡಿಮೆ ಬೆಂಬಲ ಸಿಗುತ್ತದೆ ಎನ್ನುವುದು ಎಲಿಮಿನೇಷನ್ ಫಲಿತಾಂಶದ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶವಾಗಿದೆ.

ಲಿಖಿತ್ ಔಟ್ ಆಗಲಿದ್ದಾರೆ ಎಂಬ ಚರ್ಚೆ

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಈ ವಾರ ಲಿಖಿತ್ ಬಿಗ್ ಬಾಸ್ ಮನೆಯಿಂದ ಹೊರಬೀಳಬಹುದು ಎಂಬ ಚರ್ಚೆ ನಡೆಯುತ್ತಿದೆ. ಆದರೆ ಈ ಮಾಹಿತಿ ಅಧಿಕೃತವಾಗಿ ದೃಢಪಟ್ಟಿಲ್ಲ.

ಲಿಖಿತ್ ಸೋಶಿಯಲ್ ಮೀಡಿಯಾದಲ್ಲಿ ಫನ್ನಿ ವಿಡಿಯೋಗಳನ್ನು ಮಾಡುವ ಮೂಲಕ ಜನಪ್ರಿಯತೆ ಗಳಿಸಿದ್ದರು. ನಂತರ ಕಾಮನ್ ಮ್ಯಾನ್ ಆಗಿ ಅಗ್ನಿಪರೀಕ್ಷೆ ಗೆದ್ದು ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಪ್ರವೇಶ ಪಡೆದಿದ್ದರು. ದೊಡ್ಮನೆಗೆ ಬಂದ ಬಳಿಕವೂ ತಮ್ಮದೇ ಆದ ರೀತಿಯಲ್ಲಿ ಆಟವಾಡುತ್ತಾ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಅಂತಿಮ ಕ್ಷಣದವರೆಗೂ ಏನು ಬೇಕಾದರೂ ಬದಲಾಗಬಹುದು. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಎಲಿಮಿನೇಷನ್ ಮಾಹಿತಿಗೂ ಅಧಿಕೃತ ಘೋಷಣೆಗೂ ಕೆಲವೊಮ್ಮೆ ವ್ಯತ್ಯಾಸ ಕಂಡುಬರುವ ಸಾಧ್ಯತೆ ಇದೆ. ಹೀಗಾಗಿ ಲಿಖಿತ್ ನಿಜವಾಗಿಯೂ ದೊಡ್ಮನೆಯಿಂದ ಹೊರಬೀಳುತ್ತಾರೆಯೇ ಅಥವಾ ಮತ್ತೊಮ್ಮೆ ತಮ್ಮ ಆಟ ಮುಂದುವರಿಸುತ್ತಾರೆಯೇ ಎಂಬುದನ್ನು ಕಿಚ್ಚ ಸುದೀಪ್ ವಾರಾಂತ್ಯದ ಎಪಿಸೋಡ್‌ನಲ್ಲಿ ತಿಳಿಯಬೇಕಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed