Last Updated:
ಮೊದಲ ಸ್ಪರ್ಧಿಯಾಗಿ ಜಗ್ಗಾ ಮಮ್ಮಿ ಅಲಿಯಾಸ್ ಜಗದೀಶ್ ಎಂಟ್ರಿ ನೀಡಿದ ಬಳಿಕ ಇದೀಗ ಎರಡನೇ ಸ್ಪರ್ಧಿಯಾಗಿ ಸೌಂದರ್ಯ ಶೆಟ್ಟಿ ದೊಡ್ಮನೆಗೆ ಕಾಲಿಟ್ಟಿದ್ದಾರೆ.
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ (Bigg Boss Kannada Season 13) ಅದ್ಧೂರಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್ (Kiccha Sudeep) ಸಾರಥ್ಯದಲ್ಲಿ ಆರಂಭವಾಗಿರುವ ಈ ಬಾರಿಯ ಸೀಸನ್ ಮೊದಲ ದಿನವೇ ಹಲವು ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ. ವಿಭಿನ್ನ ಥೀಮ್ ಮತ್ತು ಕುತೂಹಲ ಮೂಡಿಸುವ ಸ್ಪರ್ಧಿಗಳ ಎಂಟ್ರಿಯೊಂದಿಗೆ ಸೀಸನ್ 13ಕ್ಕೆ ಭರ್ಜರಿ ಆರಂಭ ಸಿಕ್ಕಿದೆ. ಮೊದಲ ಸ್ಪರ್ಧಿಯಾಗಿ ಜಗ್ಗಾ ಮಮ್ಮಿ ಅಲಿಯಾಸ್ ಜಗದೀಶ್ ಎಂಟ್ರಿ ನೀಡಿದ ಬಳಿಕ ಇದೀಗ ಎರಡನೇ ಸ್ಪರ್ಧಿಯಾಗಿ ಸೌಂದರ್ಯ ಶೆಟ್ಟಿ ದೊಡ್ಮನೆಗೆ ಕಾಲಿಟ್ಟಿದ್ದಾರೆ.














