Last Updated:
ಬಿಗ್ ಬಾಸ್ ಮನೆ ಒಳಗೆ ಕೇವಲ 8 ಜನ ಮಾತ್ರ ಹೋಗಿದ್ದಾರೆ. ಉಳಿದ 8 ಜನ ವಿಮಾನದಲ್ಲಿಯೇ ಇದ್ದಾರೆ. ಇವರ ಕತೆ ಏನು ಅನ್ನುವ ಕುತೂಹಲ ಹೆಚ್ಚಾಗಿದೆ. ಇದರ ವಿವರ ಮುಂದೆ ಇದೆ ಓದಿ.
ಬಿಗ್ ಬಾಸ್ (Bigg Boss) ವಿಮಾನದಲ್ಲಿ 16 ಜನ ಪ್ರಯಾಣಿಸಿದ್ದಾರೆ. ಕಿಚ್ಚ ಸುದೀಪ್ ಈ ವಿಮಾನದ ಪೈಲಟ್ ಅಂತ ಗೊತ್ತೇ ಇದೆ. ಆದರೆ, ಇಲ್ಲಿ ಬಿಗ್ ಬಾಸ್ (Bigg Boss) ಒಬ್ಬರು ಇದ್ದಾರೆ ಅಲ್ವೇ? ಅವರು ಎಲ್ಲ ಪ್ರಯಾಣಿಕರನ್ನ ಸರಿಯಾಗಿಯೇ ನೋಡಿಕೊಳ್ಳುತ್ತಾರೆ. 16 ಪ್ರಯಾಣಿಕರಿಗೆ ಒಂದು ಟಾಸ್ಕ್ (Task) ಕೊಟ್ಟಿದ್ದರು. ಈ ಟಾಸ್ಕ್ ಅಲ್ಲಿ 8 ಸ್ಪರ್ಧಿಗಳು ವಿಮಾನ ಇಳಿದಿದ್ದಾರೆ. ದೊಡ್ಮೆನೆ ಒಳಗೂ ಕಾಲಿಟ್ಟಿದ್ದಾರೆ. ಹೀಗೆ ಮನೆಗೆ ಹೋದ ಸ್ಪರ್ಧಿಗಳಲ್ಲಿ ಓಂ ಪ್ರಕಾಶ್ ರಾವ್ (OM Prakash Rao) ಇದ್ದಾರೆ. ಆಸಿಯಾ ಫಿರ್ದೋಸ್ ಕೂಡ ಇದ್ದಾರೆ. ಆದರೆ, ಉಳಿದವರ ಕತೆ ಏನು ಅನ್ನೊದು ಮುಂದೆ ಇದೆ ಓದಿ.














