Last Updated:
ಇರಾನ್ ಮತ್ತು ಅಮೆರಿಕ ನಡುವೆ ಭಿನ್ನಾಭಿಪ್ರಾಯವಿದೆ. ಆದರೂ ಭಾರತದ ಅಚಲ ನೀತಿಯಿಂದಾಗಿ, ಇರಾನ್-ಭಾರತ ಸಂಬಂಧಗಳು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ಬ್ರಿಕ್ಸ್ ಶೃಂಗಸಭೆಯ ಮೊದಲು, ಇರಾನ್ ವಕ್ತಾರ ಎಸ್ಮಾಯಿಲ್ ಬಘೇಯ್, ಎರಡೂ ದೇಶಗಳ ನಡುವಿನ ಐತಿಹಾಸಿಕ ಸಂಬಂಧಗಳನ್ನು ಉಲ್ಲೇಖಿಸಿ, ಸ್ನೇಹಿತ ಎಂದು ಕರೆದಿದ್ದಾರೆ.
ಕಳೆದ ಎಂಟು ತಿಂಗಳಿನಿಂದ ಯುದ್ಧದ ಸ್ಥಿತಿಯಲ್ಲಿರುವ (War) ಇರಾನ್, ಭಾರತದೊಂದಿಗಿನ ಸಂಬಂಧಗಳ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಪ್ರಪಂಚದಾದ್ಯಂತದ ಒತ್ತಡದ ಹೊರತಾಗಿಯೂ ಭಾರತವು ಇರಾನ್ (India Iran War) ಯುದ್ಧದಲ್ಲಿ ತಟಸ್ಥ ನಿಲುವನ್ನು ಕಾಯ್ದುಕೊಂಡಿತು. ಇರಾನ್ ಬಗ್ಗೆ ಯಾವುದೇ ನಕಾರಾತ್ಮಕ ಹೇಳಿಕೆಗಳನ್ನು ನೀಡಲಿಲ್ಲ. ಈಗ ಇರಾನ್ ಭಾರತದೊಂದಿಗಿನ ಸಂಬಂಧಗಳನ್ನು ಶ್ಲಾಘಿಸಿದೆ ಮತ್ತು ಅವುಗಳನ್ನು ಬಹಳ ಮುಖ್ಯವೆಂದು ಪರಿಗಣಿಸುತ್ತದೆ ಎಂದು ಹೇಳಿದೆ.














