Last Updated:
ಬಿಗ್ ಬಾಸ್ ಸೀಸನ್-13 ರಲ್ಲಿ ಬಳೆ ಸದ್ದು ಮಾಡುತ್ತಿದೆ. ಈ ಹಿಂದಿನ ಸೀಸನ್ ಅಲ್ಲಿ ವಿನಯ್ ಗೌಡ ಬಳೆ ಮಾತು ಹೇಳಿದ್ದರು. ಈ ಬಾರಿ ಕಿರಣ್ ಶಾಸ್ತ್ರಿ ಅದನ್ನ ಮಾಡಿದ್ದಾರೆ. “ನೀವೆಲ್ಲ ಬಳೆ ಹಾಕಿಕೊಂಡು ಕುಳಿತು ಬಿಡಿ” ಅಂತ ಹೇಳಿದ್ದಾರೆ. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ.
ಬಿಗ್ ಬಾಸ್ (Bigg Boss) ಮನೆಯಲ್ಲಿ ಮತ್ತೆ ಬಳೆ ಸದ್ದು ಮಾಡಿದೆ. ಕಳೆದ ಸಲ ವಿನಯ್ ಗೌಡ (Vinay Gowda) ಬಳೆ ಮಾತು ಹೇಳಿದ್ದರು. ಈ ಸಲ ಕಿರಣ್ ಶಾಸ್ತ್ರಿ ಆ ಮಾತು ಹೇಳಿದ್ದಾರೆ. “ನೀವೆಲ್ಲ ಬಳೆ ಹಾಕಿಕೊಂಡು ಕುಳಿತು ಬಿಡಿ” ಅಂತಲೆ ಹೇಳಿದ್ದಾರೆ. ಟಾಸ್ಕ್ ವಿಚಾರದಲ್ಲಿ ಮನೆಯಲ್ಲಿ ಜಗಳ ಆಗಿದೆ. ಈ ಹಿನ್ನೆಲೆಯಲ್ಲಿ ಕಿರಣ್ ಶಾಸ್ತ್ರಿ (Kiran Shastri) ಸಿಟ್ಟಾಗಿದ್ದಾರೆ. ನಿಮಗೆ ಟಾಸ್ಕ್ ಅರ್ಥ ಆಗೋದಿಲ್ಲ. ನೀವೆಲ್ಲ ನಾಲಾಯಕ್ ಆಗಿದ್ದೀರಾ ಅಂತಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ತಾಂಡವ್ ರಾಮ್ (Tandav Ram) ಹಾಗೂ ಗಗನ್ ಚಿನ್ನಪ್ಪ ಕೆಂಡಾಮಂಡಲ ಆಗಿದ್ದಾರೆ. ಮುಂದೆ ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ.














