Bigg Boss: ಮತ್ತೆ ಶುರುವಾಗ್ತಿದೆ ಬಿಗ್ ಬಾಸ್ ಕನ್ನಡ ಸೀಸನ್ 13! ಈ ಬಾರಿ ಯಾರೆಲ್ಲಾ ಬರ್ತಿದ್ದಾರೆ ಗೊತ್ತಾ? | | ACTPnews

ಬಿಗ್ ಬಾಸ್ ಕನ್ನಡ ಸೀಸನ್ 13


Last Updated:

ಐಪಿಎಲ್ ಸಂಭ್ರಮ ಮುಗಿದ ಬೆನ್ನಲ್ಲೇ ಇದೀಗ ಕನ್ನಡ ಮನರಂಜನಾ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಮನೆಮಾತಾಗಲು ಸಜ್ಜಾಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 13
ಬಿಗ್ ಬಾಸ್ ಕನ್ನಡ ಸೀಸನ್ 13

ಐಪಿಎಲ್ ಸಂಭ್ರಮ ಮುಗಿದ ಬೆನ್ನಲ್ಲೇ ಇದೀಗ ಕನ್ನಡ ಮನರಂಜನಾ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಮನೆಮಾತಾಗಲು ಸಜ್ಜಾಗಿದೆ. ಕಳೆದ ಹಲವು ವರ್ಷಗಳಿಂದ ಕನ್ನಡದ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿರುವ ಬಿಗ್ ಬಾಸ್ (Bigg Boss) ಇದೀಗ ತನ್ನ 13ನೇ ಸೀಸನ್ ನೊಂದಿಗೆ ಮರಳಲು ಸಿದ್ಧವಾಗಿದೆ. ಈ ಕುರಿತಾದ ಮೊದಲ ಪ್ರೋಮೋ ಬಿಡುಗಡೆಯಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಆರಂಭವಾಗಿದ್ದು, ಈ ಬಾರಿಯ ಸೀಸನ್ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12 ಯಶಸ್ವಿಯಾಗಿ ಮುಕ್ತಾಯಗೊಂಡ ಕೆಲವೇ ದಿನಗಳಲ್ಲಿ ಹೊಸ ಸೀಸನ್ ಘೋಷಣೆಯಾಗಿರುವುದು ಕಾರ್ಯಕ್ರಮದ ಜನಪ್ರಿಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಹೊಸ ಪ್ರೋಮೋದಲ್ಲಿರುವ ಕೆಲವು ವಿಶೇಷ ಸುಳಿವುಗಳು ಈ ಬಾರಿಯ ಸೀಸನ್ ಹಿಂದಿನ ಸೀಸನ್‌ಗಳಿಗಿಂತ ಭಿನ್ನವಾಗಿರಬಹುದು ಎಂಬ ಕುತೂಹಲ ಮೂಡಿಸಿವೆ.

ಬಿಗ್ ಬಾಸ್ ಕನ್ನಡ ಸೀಸನ್ 13ರ ಮೊದಲ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದ್ದು, “ಈ ವರ್ಷ ಬೇಗ ಶುರುವಾಗ್ತಿದೆ ಕನ್ನಡಿಗರ ಹಬ್ಬ… With Something Special” ಎಂಬ ಕ್ಯಾಪ್ಶನ್ ಜೊತೆ ಬಿಡುಗಡೆಯಾದ ಪ್ರೋಮೋ ಇದೀಗ ಎಲ್ಲರ ಗಮನ ಸೆಳೆದಿದೆ.

ಪ್ರೋಮೋದಲ್ಲಿ ನೀಡಲಾದ ಸುಳಿವುಗಳನ್ನು ಗಮನಿಸಿದರೆ, ಹಿಂದಿನ ಸೀಸನ್‌ಗಳ ಕೆಲವು ಜನಪ್ರಿಯ ಸ್ಪರ್ಧಿಗಳು ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಹಳೆಯ ಸ್ಪರ್ಧಿಗಳು ಹಾಗೂ ಹೊಸ ಸ್ಪರ್ಧಿಗಳನ್ನು ಒಟ್ಟಿಗೆ ಸೇರಿಸಿ ವಿಭಿನ್ನ ರೀತಿಯ ಸ್ಪರ್ಧೆ ನಡೆಸುವ ಯೋಚನೆಯೂ ಇರಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ಬಿಗ್ ಬಾಸ್ ಕೇವಲ ರಿಯಾಲಿಟಿ ಶೋ ಆಗಿ ಉಳಿದಿಲ್ಲ. ಕಳೆದ ಹಲವು ವರ್ಷಗಳಲ್ಲಿ ಇದು ಕನ್ನಡಿಗರ ಮನೆಯ ಭಾಗವಾಗಿ ಬೆಳೆದಿದೆ. ಪ್ರತಿದಿನದ ಸಂಚಿಕೆಗಳು, ವಾರಾಂತ್ಯದ ಎಪಿಸೋಡ್‌ಗಳು, ಟಾಸ್ಕ್‌ಗಳು ಮತ್ತು ಸ್ಪರ್ಧಿಗಳ ನಡುವಿನ ಸಂಬಂಧಗಳು ಪ್ರೇಕ್ಷಕರನ್ನು ನಿರಂತರವಾಗಿ ಸೆಳೆಯುತ್ತಿವೆ. ವಿಶೇಷವಾಗಿ ಕಾರ್ಯಕ್ರಮದ ನಿರೂಪಕರಾಗಿ ಕಿಚ್ಚ ಸುದೀಪ್ ನೀಡುತ್ತಿರುವ ನಿರೂಪಣೆ ಪ್ರತಿ ಸೀಸನ್‌ನ ಪ್ರಮುಖ ಆಕರ್ಷಣೆಯಾಗಿದೆ.

ಮೊದಲ ಪ್ರೋಮೋ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ಈ ಬಾರಿ ಯಾರು ಸ್ಪರ್ಧಿಗಳಾಗಬಹುದು ಎಂಬ ಚರ್ಚೆ ಬಲು ಜೋರಾಗಿಯೇ ನಡೆಯುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed