Bigg Boss: ಬಿಗ್ ಬಾಸ್ 20ರಲ್ಲಿ ಇಬ್ಬರು ಹೋಸ್ಟ್‌ಗಳಾ? ಸಲ್ಮಾನ್-ಶಾರುಖ್ ಜೋಡಿ ಬಗ್ಗೆ ಭಾರೀ ಚರ್ಚೆ | | ACTPnews

ಸಲ್ಮಾನ್ ಖಾನ್


Last Updated:

ಹಿಂದಿ ಬಿಗ್ ಬಾಸ್ 20ರ ಮೊದಲ ಪ್ರೋಮೋ ರಿಲೀಸ್ ಆಗಿದೆ. ಈ ಬಾರಿ ಕೂಡ ಸಲ್ಮಾನ್ ಖಾನ್ (Salman Khan) ನಿರೂಪಕರಾಗಿ ಕಾಣಿಸಿಕೊಂಡಿದ್ದು, ಪ್ರೋಮೋದಲ್ಲಿ ಅವರು ಹೇಳಿರುವ ಒಂದು ಡೈಲಾಗ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರೀ ಚರ್ಚೆಗೆ ಕಾರಣವಾಗಿದೆ.

ಸಲ್ಮಾನ್ ಖಾನ್
ಸಲ್ಮಾನ್ ಖಾನ್

ಹಿಂದಿ ಬಿಗ್ ಬಾಸ್ (Hindi Bigg Boss) 20ರ ಮೊದಲ ಪ್ರೋಮೋ ರಿಲೀಸ್ ಆಗಿದೆ. ಈ ಬಾರಿ ಕೂಡ ಸಲ್ಮಾನ್ ಖಾನ್ (Salman Khan) ನಿರೂಪಕರಾಗಿ ಕಾಣಿಸಿಕೊಂಡಿದ್ದು, ಪ್ರೋಮೋದಲ್ಲಿ ಅವರು ಹೇಳಿರುವ ಒಂದು ಡೈಲಾಗ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರೀ ಚರ್ಚೆಗೆ ಕಾರಣವಾಗಿದೆ. ಶಾರುಖ್ ಖಾನ್ ಬಿಗ್ ಬಾಸ್ ವೇದಿಕೆಗೆ ಎಂಟ್ರಿ ಕೊಡಲಿದ್ದಾರಾ ಎಂಬ ಪ್ರಶ್ನೆಯೂ ಅಭಿಮಾನಿಗಳಲ್ಲಿ ಮೂಡಿದೆ.

ಬಿಡುಗಡೆಯಾದ ಟೀಸರ್‌ನಲ್ಲಿ ಸಲ್ಮಾನ್ ಖಾನ್ ಕುದುರೆಯೊಂದಿಗೆ ಸ್ಟೈಲಿಷ್ ಆಗಿ ನಡೆದು ಬರುತ್ತಾರೆ. ಬಳಿಕ ಅವರು, ಕರಣ್ ಅರ್ಜುನ್ ಸಿನಿಮಾದಲ್ಲಿ ಆಗಿದ್ದು ಈಗ ಬಿಗ್ ಬಾಸ್‌ನಲ್ಲಿ ಮತ್ತೆ ನಡೆಯಲಿದೆ. ತಥಾಸ್ತು ಎಂದು ಹೇಳುತ್ತಾರೆ. ಈ ಒಂದು ಡೈಲಾಗ್ ಸಾಕು, ಸಾಮಾಜಿಕ ಜಾಲತಾಣಗಳಲ್ಲಿ ಹಲವು ಊಹಾಪೋಹಗಳು ಶುರುವಾಗಲು. ಸಲ್ಮಾನ್ ಅವರ ಮಾತಿನ ಹಿಂದಿನ ಅರ್ಥವೇನು ಎಂಬುದನ್ನು ಅಭಿಮಾನಿಗಳು ಹುಡುಕತೊಡಗಿದ್ದಾರೆ.

ಶಾರುಖ್ ಖಾನ್ ಎಂಟ್ರಿ ಬಗ್ಗೆ ಹೆಚ್ಚಿದ ನಿರೀಕ್ಷೆ

1995ರಲ್ಲಿ ಬಿಡುಗಡೆಯಾದ ಕರಣ್ ಅರ್ಜುನ್ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಮೊದಲ ಬಾರಿಗೆ ಪ್ರಮುಖ ಪಾತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು. ಹೀಗಾಗಿ, ಸಲ್ಮಾನ್ ಪ್ರೋಮೋದಲ್ಲಿ ಆ ಚಿತ್ರದ ಉಲ್ಲೇಖ ಮಾಡಿರುವುದು ಕಾಕತಾಳೀಯವಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಗ್ರ್ಯಾಂಡ್ ಪ್ರಿಮಿಯರ್ ಸಂಚಿಕೆಯಲ್ಲಿ ಶಾರುಖ್ ಖಾನ್ ಅತಿಥಿಯಾಗಿ ಕಾಣಿಸಿಕೊಳ್ಳಬಹುದು ಅಥವಾ ಈ ಬಾರಿ ಕೋ-ಹೋಸ್ಟ್ ಆಗಿ ವೇದಿಕೆ ಹಂಚಿಕೊಳ್ಳಬಹುದು ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ಈ ಕುರಿತು ಇನ್ನೂ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

ಇದನ್ನೂ ಓದಿ: Bigg Boss: ಬಿಗ್​ಬಾಸ್ ಚೆಲುವೆಗೆ ಮೆಡಿಕಲ್ ಎಮರ್ಜೆನ್ಸಿ, ರಿಯಾಲಿಟಿ ಶೋ ಮಧ್ಯೆಯೇ ಆಸ್ಪತ್ರೆಗೆ ದಾಖಲು

ಕಳೆದ ಕೆಲವು ವಾರಗಳಿಂದ ಸಲ್ಮಾನ್ ಖಾನ್ ಈ ಬಾರಿ ಸಂಪೂರ್ಣ ಸೀಸನ್ ನಿರೂಪಣೆ ಮಾಡುವುದಿಲ್ಲ ಎಂಬ ವದಂತಿಗಳು ಕೇಳಿಬಂದಿದ್ದವು. ಅಲ್ಲದೆ, ಅವರು ತಮ್ಮ ಸಂಭಾವನೆಯನ್ನು 120 ಕೋಟಿಯಿಂದ 70 ಕೋಟಿಗೆ ಇಳಿಸಿಕೊಂಡಿದ್ದಾರೆ ಎಂಬ ಸುದ್ದಿಯೂ ವೈರಲ್ ಆಗಿತ್ತು. ಆದರೆ ಈ ಎರಡೂ ವಿಚಾರಗಳಿಗೆ ಸಂಬಂಧಿಸಿದಂತೆ ವಾಹಿನಿ ಅಥವಾ ಸಲ್ಮಾನ್ ಖಾನ್ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಈಗ ಬಿಡುಗಡೆಯಾದ ಪ್ರೋಮೋದಲ್ಲಿ ಸಲ್ಮಾನ್ ಕಾಣಿಸಿಕೊಂಡಿರುವುದರಿಂದ ಅವರು ಮತ್ತೊಮ್ಮೆ ಬಿಗ್ ಬಾಸ್‌ನ ಪ್ರಮುಖ ಮುಖವಾಗಿ ಮುಂದುವರಿಯಲಿದ್ದಾರೆ ಎಂಬ ನಿರೀಕ್ಷೆ ಬಲಗೊಂಡಿದೆ.

ಬಿಗ್ ಬಾಸ್ ಹಿಂದಿ 20 ಸೆಪ್ಟೆಂಬರ್ 6ರಿಂದ ಆರಂಭವಾಗಲಿದೆ. ಪ್ರತಿದಿನ ರಾತ್ರಿ 9 ಗಂಟೆಗೆ ಜಿಯೋ ಹಾಟ್‌ಸ್ಟಾರ್ ಆ್ಯಪ್‌ನಲ್ಲಿ ಹಾಗೂ ರಾತ್ರಿ 10:30ಕ್ಕೆ ಕಲರ್ಸ್ ಟಿವಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ. ಹೊಸ ಟ್ವಿಸ್ಟ್‌ಗಳು, ಹೊಸ ಸ್ಪರ್ಧಿಗಳು ಮತ್ತು ಸಲ್ಮಾನ್ ಖಾನ್ ನೀಡಿರುವ ರಹಸ್ಯ ಸುಳಿವಿನೊಂದಿಗೆ ಈ ಸೀಸನ್ ಈಗಾಗಲೇ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಶಾರುಖ್ ಖಾನ್ ನಿಜವಾಗಿಯೂ ಬಿಗ್ ಬಾಸ್ ವೇದಿಕೆಗೆ ಬರಲಿದ್ದಾರೆಯೇ ಅಥವಾ ಇದು ಕೇವಲ ಪ್ರೋಮೋದಲ್ಲಿನ ಕುತೂಹಲ ಹೆಚ್ಚಿಸುವ ತಂತ್ರವೇ ಎಂಬುದಕ್ಕೆ ಉತ್ತರ ಸೀಸನ್ ಆರಂಭವಾದ ಬಳಿಕವೇ ಸಿಗಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed