Last Updated:
ಬಿಗ್ ಬಾಸ್ 20ರಲ್ಲಿ ಮೇರಿ ಕೋಮ್ ಹೆಸರು ಘೋಷಣೆಯಾಗುತ್ತಿದ್ದಂತೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವಿಶೇಷವಾಗಿ ಅಭಿನಂದಿಸಿದ್ದಾರೆ. ಮೇರಿ ಕೋಮ್ ಬಿಗ್ ಬಾಸ್ ಪ್ರಯಾಣವನ್ನು ನೋಡಲು ತಾವು ಬಹಳ ಉತ್ಸುಕರಾಗಿರುವುದಾಗಿ ಪ್ರಿಯಾಂಕಾ ಹೇಳಿದ್ದಾರೆ.
ಭಾರತದ ತ್ರಿವರ್ಣ ಧ್ವಜವನ್ನು ಬಾಕ್ಸಿಂಗ್ ರಿಂಗ್ನಲ್ಲಿ ವಿಶ್ವದಾದ್ಯಂತ ಹೆಮ್ಮೆಯಿಂದ ಹಾರಿಸಿದ ಒಲಿಂಪಿಕ್ ಪದಕ ವಿಜೇತೆ ಹಾಗೂ ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್ (Mary Kom) ಇದೀಗ ವಿಭಿನ್ನ ಅಖಾಡಕ್ಕೆ ಕಾಲಿಟ್ಟಿದ್ದಾರೆ. ಸಲ್ಮಾನ್ ಖಾನ್ (Salman Khan) ನಿರೂಪಣೆಯ ಬಿಗ್ ಬಾಸ್ 20 ರಿಯಾಲಿಟಿ ಶೋಗೆ ಮೇರಿ ಕೋಮ್ ಪ್ರವೇಶಿಸಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.














