Last Updated:
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಡಿತರ ಚೀಟಿ ತಿದ್ದುಪಡಿ ಮತ್ತು ಹೊಸ ಅರ್ಜಿ ಪ್ರಕ್ರಿಯೆ ಪುನರಾರಂಭ, DBT ಯೋಜನೆ ಸೌಲಭ್ಯ ತಪ್ಪದಂತೆ ನಾಗರಿಕರಿಗೆ ಎಚ್ಚರಿಕೆ
ಬೆಂಗಳೂರು: ಕರ್ನಾಟಕದ ನಾಗರಿಕರಿಗೆ ಮುಖ್ಯ ಸಿಹಿ ಸುದ್ದಿ! ಸರ್ವರ್ ಸಮಸ್ಯೆ (Server Problem) ಮತ್ತು ತಾಂತ್ರಿಕ ಕಾರಣಗಳಿಂದ ಹಲವು ದಿನಗಳಿಂದ ಸ್ಥಗಿತಗೊಂಡಿದ್ದ ಪಡಿತರ ಚೀಟಿ (Ration Card) ತಿದ್ದುಪಡಿ ಮತ್ತು ಹೊಸ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (Food And Public Supply Department) ಮತ್ತೆ ಹಸಿರು ನಿಶಾನೆ ತೋರಿಸಿದೆ! ಇದು ರಾಜ್ಯದ ಸಾವಿರಾರು ಕುಟುಂಬಗಳಿಗೆ ಸಿಕ್ಕ ಅಪೂರ್ವ ಅವಕಾಶ! ತಡ ಮಾಡಿದರೆ ಗೃಹಲಕ್ಷ್ಮಿ, ಅನ್ನಭಾಗ್ಯ ಸೇರಿದಂತೆ DBT ಯೋಜನೆಗಳ (Scheme) ಸೌಲಭ್ಯ ತಪ್ಪಬಹುದು!
ಈ ಪ್ರಕ್ರಿಯೆಯಲ್ಲಿ ಏನೆಲ್ಲ ಮಾಡಬಹುದು ಎಂದರೆ ಹೆಸರು ಸೇರ್ಪಡೆ/ತೆಗೆದುಹಾಕುವುದು/ತಿದ್ದುಪಡಿ, ವಿಳಾಸ ಬದಲಾವಣೆ, ಮದುವೆ-ಬೇರ್ಪಡಿಕೆ-ಹುಟ್ಟು-ಮರಣದಿಂದ ಕುಟುಂಬ ಸದಸ್ಯರ ಸಂಖ್ಯೆ ಬದಲಾವಣೆ, ಆಧಾರ್ ಲಿಂಕಿಂಗ್/ಮೊಬೈಲ್ ಸಂಖ್ಯೆ ಅಪ್ಡೇಟ್ ಮತ್ತು BPL/APL ಕಾರ್ಡ್ ವರ್ಗೀಕರಣ ಬದಲಾವಣೆ ಇವೆಲ್ಲ ಈಗ ಸಾಧ್ಯ.
ಅರ್ಜಿ ಸಲ್ಲಿಸಲು ಮೊದಲು ಈ ಸಿದ್ಧತೆ ಮಾಡಿಕೊಳ್ಳಿ ಎಲ್ಲಾ ಕುಟುಂಬ ಸದಸ್ಯರ ಆಧಾರ್ ಕಾರ್ಡ್ (5 ವರ್ಷದ ಒಳಗಿನ ಶಿಶುಗಳಿಗೆ Biometric ಅಗತ್ಯವಿಲ್ಲದಿದ್ದರೂ ಆಧಾರ್ ಕಡ್ಡಾಯ), ವಿಳಾಸ ಪುರಾವೆ (ವಿದ್ಯುತ್ ಬಿಲ್, ವೋಟರ್ ID ಅಥವಾ ರೇಷನ್ ಕಾರ್ಡ್), ಆದಾಯ ಪ್ರಮಾಣಪತ್ರ (BPL ಗೆ), ಜಾತಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ), ಹುಟ್ಟು/ಮರಣ ಪ್ರಮಾಣಪತ್ರ (ಸಂಬಂಧಪಟ್ಟ ತಿದ್ದುಪಡಿಗೆ), ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ಆಧಾರ್ಗೆ ಲಿಂಕ್ ಆದ ಮೊಬೈಲ್ ಸಂಖ್ಯೆ ಸಿದ್ಧವಿರಿಸಿ, OTP ಪರಿಶೀಲನೆ ಮತ್ತು ಬಯೋಮೆಟ್ರಿಕ್ ಅಥೆಂಟಿಕೇಶನ್ ಕಡ್ಡಾಯ.
ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಬೇಕಾದ ವಿಧಾನ
ಅರ್ಜಿ ಸಲ್ಲಿಸಲು ಎರಡು ದಾರಿಗಳಿವೆ. ಆಫ್ಲೈನ್ ಆಗಿ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ದಾಖಲೆಗಳೊಂದಿಗೆ ಭೇಟಿ ನೀಡಿ ರಶೀದಿ ಪಡೆಯಿರಿ. ಆನ್ಲೈನ್ನಲ್ಲಿ ahara.karnataka.gov.in ವೆಬ್ಸೈಟ್ನ E-Services ವಿಭಾಗದಲ್ಲಿ ಹೊಸ ಅರ್ಜಿ ಅಥವಾ ತಿದ್ದುಪಡಿ ಆಯ್ಕೆ ಮಾಡಿ, ಜಿಲ್ಲೆ ಆಯ್ಕೆ → ವಿವರಗಳು ಭರ್ತಿ → ದಾಖಲೆ ಅಪ್ಲೋಡ್ ಮಾಡಿ. ಅರ್ಜಿ ಸ್ಥಿತಿ ತಿಳಿಯಲು “New/Existing RC Request Status” ಆಯ್ಕೆ ಬಳಸಿ. ಖಾಸಗಿ ಮಧ್ಯಸ್ಥರನ್ನು ಸಂಪರ್ಕಿಸುವುದು ಸಂಪೂರ್ಣ ತಪ್ಪಿಸಿ. ಅಧಿಕೃತ ಕೇಂದ್ರಗಳ ಮೂಲಕ ಮಾತ್ರ ಅರ್ಜಿ ಸಲ್ಲಿಸಿ, ರಶೀದಿ ಪಡೆಯಲು ಮರೆಯಬೇಡಿ.
Bangalore [Bangalore],Bangalore,Karnataka
May 09, 2026 12:20 PM IST













