KKR vs DC,IPL 2026: ಅಬ್ಬರಿಸಿದ ರಾಹುಲ್! ಲೀಗ್​​ನ ಕೊನೆಯ ಪಂದ್ಯದಲ್ಲಿ ಕೆಕೆಆರ್​ಗೆ ಗೆಲ್ಲಲು ಬೇಕು 204 ರನ್​ | ಕ್ರೀಡಾ ಸುದ್ದಿ | ACTPnews

ಕೆಎಲ್ ರಾಹುಲ್- ಸಾಹಿಲ್ ಪರಕ್


Last Updated:

ಡೆಡ್​ ರಬ್ಬರ್ ಗೇಮ್​​ನಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವೂ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್​ಗಳ ಸವಾಲಿನ ಮೊತ್ತ ಪೇರಿಸಿದೆ.ಡೆಲ್ಲಿ ಪರ ಕನ್ನಡಿಗ ಕೆಎಲ್ ರಾಹುಲ್ 30 ಎಸೆತಗಳಲ್ಲಿ 60 ರನ್​ಗಳಿಸಿ ಟಾಪ್ ಸ್ಕೋರರ್ ಆದರು.

ಕೆಎಲ್ ರಾಹುಲ್- ಸಾಹಿಲ್ ಪರಕ್
ಕೆಎಲ್ ರಾಹುಲ್- ಸಾಹಿಲ್ ಪರಕ್

ಐಪಿಎಲ್ 2026 ರ 70ನೇ ಪಂದ್ಯವು ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವೂ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ. ಡೆಲ್ಲಿ ಪರ ಕನ್ನಡಿಗ ಕೆಎಲ್ ರಾಹುಲ್ 30 ಎಸೆತಗಳಲ್ಲಿ 60 ರನ್‌ಗಳಿಸಿ ಟಾಪ್ ಸ್ಕೋರರ್ ಆದರು. ನಾಯಕ ಅಕ್ಷರ್ ಪಟೇಲ್ 39 ಹಾಗೂ ಡೇವಿಡ್ ಮಿಲ್ಲರ್ ಅಜೇಯ 28 ರನ್‌ಗಳಿಸಿ ತಂಡದ ಮೊತ್ತವನ್ನ 200ರ ಗಡಿ ದಾಟಿಸಿದರು.

ಮೊದಲು ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ ಪಡೆಯಿತು. ಅಭಿಷೇಕ್ ಪೊರೆಲ್ ಮತ್ತು ಕೆಎಲ್ ರಾಹುಲ್ ಮೊದಲ ವಿಕೆಟ್‌ಗೆ 40 ರನ್ ಗಳ ಜೊತೆಯಾಟ ನೀಡಿದರು. ಅಭಿಷೇಕ್ 18 ಎಸೆತಗಳಲ್ಲಿ 22 ರನ್ ಗಳಿಸಿ ಸೌರಭ್ ದುಬೆಗೆ ಬೌಲಿಂಗ್‌ನಲ್ಲಿ ತೇಜಸ್ವಿ ದಹಿಯಾಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಸಾಹಿಲ್ ಪರಾಕ್ 17 ಎಸೆತಗಳಲ್ಲಿ 24 ರನ್ ಗಳಿಸಿ ನರೈನ್‌ಗೆ ವಿಕೆಟ್ ಒಪ್ಪಿಸಿದರು. ಪರಾಕ್ ಔಟ್ ಆಗುವ ಮುನ್ನ ರಾಹುಲ್ ಜೊತೆಗೆ 2ನೇ ವಿಕೆಟ್ ಜೊತೆಯಾಟದಲ್ಲಿ 47 ರನ್ ಸೇರಿಸಿದ್ದರು.

4ನೇ ಕ್ರಮಾಂಕದಲ್ಲಿ ಬಂದ ಅಕ್ಷರ್ ಪಟೇಲ್ ಜೊತೆಗೆ 38 ರನ್ ಸೇರಿಸಿದ್ದ ರಾಹುಲ್ ಅನುಕುಲ್ ರಾಯ್‌ಗೆ ಬೌಲಿಂಗ್‌ನಲ್ಲಿ ಪೊವೆಲ್‌ಗೆ ಕ್ಯಾಚ್ ನೀಡಿ ಔಟ್ ಆದರು. ರಾಹುಲ್ 30 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್‌ಗಳ ಸಹಿತ 60 ರನ್‌ಗಳಿಸಿದರು. ನಾಯಕ ಅಕ್ಷರ್ ಪಟೇಲ್ 25 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್‌ಗಳ ಸಹಿತ 35 ರನ್‌ಗಳಿಸಿ 17ನೇ ಓವರ್‌ನಲ್ಲಿ ಔಟ್ ಆದರು. 5ನೇ ಕ್ರಮಾಂಕದಲ್ಲಿ ಆಡಿದ ಡೇವಿಡ್ ಮಿಲ್ಲರ್ 19 ಎಸೆತಗಳಲ್ಲಿ 3 ಸಿಕ್ಸರ್‌ಗಳ ಸಹಿತ 28 ರನ್‌ಗಳಿಸಿ ಕೊನೆಯ ಓವರ್‌ನಲ್ಲಿ ಸೌರಭ್ ಸುಬೆಗೆ ವಿಕೆಟ್ ಒಪ್ಪಿಸಿದರು. ಅಶುತೋಷ್ ಶರ್ಮಾ 11 ಎಸೆತಗಳಲ್ಲಿ ಅಜೇಯ 18 ರನ್‌ಗಳಿಸಿದರು.

ಕೆಕೆಆರ್ ಪರ ಸೌರಭ್ ದುಬೆ 28ಕ್ಕೆ2, ಅನುಕುಲ್ ರಾಯ್ 23ಕ್ಕೆ1, ಸುನಿಲ್ ನರೈನ್ 38ಕ್ಕೆ1, ವರುಣ್ ಚಕ್ರವರ್ತಿ 35ಕ್ಕೆ1 ವಿಕೆಟ್ ಪಡೆದರು.

ರಾಜಸ್ಥಾನ್ ರಾಯಲ್ಸ್ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಐಪಿಎಲ್ ಪ್ಲೇಆಫ್ ಪ್ರವೇಶಿಸಿದೆ. ಹಾಗಾಗಿ ಈ ಪಂದ್ಯದಲ್ಲಿ ಗೆದ್ದರೂ, ಸೋತರೂ ಪ್ರಯೋಜನ ಏನಿಲ್ಲ. ರಾಜಸ್ಥಾನ 14 ಪಂದ್ಯಗಳಲ್ಲಿ 16 ಅಂಕಗಳನ್ನು ಹೊಂದಿದ್ದರೆ, ಪಂದ್ಯವನ್ನು ಗೆದ್ದ ನಂತರ ಕೋಲ್ಕತ್ತಾ ಇನ್ನೂ 15 ಅಂಕಗಳನ್ನು ಹೊಂದಿರಲಿದೆ. ಕೋಲ್ಕತ್ತಾ ತಂಡ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಈ ಪಂದ್ಯ ಗೆದ್ದರೂ ಅಷ್ಟರಲ್ಲೇ ಉಳಿಯಲಿದೆ.

ಕೋಲ್ಕತ್ತಾ ವಿರುದ್ಧ ದೆಹಲಿ ಪ್ಲೇಯಿಂಗ್ ಇಲೆವೆನ್

ಕೋಲ್ಕತ್ತಾ ನೈಟ್ ರೈಡರ್ಸ್: ಅಜಿಂಕ್ಯ ರಹಾನೆ (ನಾಯಕ), ಮನೀಶ್ ಪಾಂಡೆ, ಕ್ಯಾಮರೂನ್ ಗ್ರೀನ್, ರೋವ್ಮನ್ ಪೊವೆಲ್, ರಿಂಕು ಸಿಂಗ್, ತೇಜಸ್ವಿ ದಹಿಯಾ (ವಿಕೆಟ್ ಕೀಪರ್), ಅನುಕುಲ್ ರಾಯ್, ಸುನಿಲ್ ನರೈನ್, ಸೌರಭ್ ದುಬೆ, ವರುಣ್ ಚಕ್ರವರ್ತಿ, ಕಾರ್ತಿಕ್ ತ್ಯಾಗಿ.

ಡೆಲ್ಲಿ ಕ್ಯಾಪಿಟಲ್ಸ್: ಅಭಿಷೇಕ್ ಪೊರೆಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸಾಹಿಲ್ ಪರಕ್, ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ಅಕ್ಷರ್ ಪಟೇಲ್ (ನಾಯಕ), ಅಶುತೋಷ್ ಶರ್ಮಾ, ಮಾಧವ್ ತಿವಾರಿ, ಔಕಿಬ್ ನಬಿ ಡಾರ್, ಮಿಚೆಲ್ ಸ್ಟಾರ್ಕ್, ಲುಂಗಿ ಎನ್ಗಿಡಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed