Big Update: ಇದೇ ಜೂನ್‌ 15 ರಿಂದ 128 ದಿನದವರೆಗೆ ರೈಲುಗಳ ಓಡಾಟದಲ್ಲಿ ಭಾರೀ ಬದಲಾವಣೆ, ಪ್ರಮುಖ ಟ್ರೈನ್‌ಗಳೇ 2 ತಾಸು ತಡ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

Big Update: ಇದೇ ಜೂನ್‌ 15 ರಿಂದ 128 ದಿನದವರೆಗೆ ರೈಲುಗಳ ಓಡಾಟದಲ್ಲಿ ಭಾರೀ ಬದಲಾವಣೆ, ಪ್ರಮುಖ ಟ್ರೈನ್‌ಗಳೇ 2 ತಾಸು ತಡ! | ಬೆಂಗಳೂರು ನಗರ ನ್ಯೂಸ್ (Bengaluru Urban News)


ಹೊಸ ಮುಂಗಾರು ವೇಳಾಪಟ್ಟಿ ಬಿಡುಗಡೆ

ಹೌದು, ಮುಂಗಾರು ಮಳೆಯ ಅಬ್ಬರ ಶುರುವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ನೈರುತ್ಯ ರೈಲ್ವೆ (SWR) ಕೊಂಕಣ ಮಾರ್ಗದಲ್ಲಿ ಸಂಚರಿಸುವ ರೈಲುಗಳ ವೇಳಾಪಟ್ಟಿಯಲ್ಲಿ ಭಾರೀ ಬದಲಾವಣೆ ಮಾಡಿದೆ. ಮಳೆಗಾಲದಲ್ಲಿ ರೈಲುಗಳು ನಿಧಾನಗತಿಯಲ್ಲಿ ಚಲಿಸಬೇಕಾದ ಅನಿವಾರ್ಯತೆ ಇರುವುದರಿಂದ ಈ ಹೊಸ ‘ಮುಂಗಾರು ವೇಳಾಪಟ್ಟಿ’ಯನ್ನು (Monsoon Time Table) ಜಾರಿಗೆ ತರಲಾಗಿದೆ.

ಯಾವಾಗಿನಿಂದ ಈ ಹೊಸ ರೂಲ್ಸ್ ಜಾರಿ?

ರೈಲ್ವೆ ಇಲಾಖೆಯ ಪ್ರಕಟಣೆಯ ಪ್ರಕಾರ, ಜೂನ್ 15, 2026 ರಿಂದ ಅಕ್ಟೋಬರ್ 20, 2026 ರವರೆಗೆ ಈ ಹೊಸ ಮುಂಗಾರು ವೇಳಾಪಟ್ಟಿ ಚಾಲ್ತಿಯಲ್ಲಿರಲಿದೆ. ಜೂನ್ 15ರಂದು ಮತ್ತು ಆ ನಂತರ ಹೊರಡುವ ರೈಲುಗಳಿಗೆ ಈ ಹೊಸ ಸಮಯ ಅನ್ವಯವಾಗಲಿದೆ.

ಸಮಯ ಬದಲಾಗಿರುವ ಆ 5 ಪ್ರಮುಖ ರೈಲುಗಳು ಯಾವುವು? ಇಲ್ಲಿದೆ ಲಿಸ್ಟ್!

ಕರಾವಳಿ ಮತ್ತು ಕೊಂಕಣ ಮಾರ್ಗವಾಗಿ ಸಂಚರಿಸುವ ಈ ಕೆಳಗಿನ ಪ್ರಮುಖ ರೈಲುಗಳ ಸಮಯ ಬದಲಾಗಿದೆ

ರೈಲು ಸಂಖ್ಯೆ 16595/16596: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR) ಬೆಂಗಳೂರು – ಕಾರವಾರ – KSR ಬೆಂಗಳೂರು ಪ್ರತಿದಿನದ ಎಕ್ಸ್‌ಪ್ರೆಸ್ (ಪಂಚಗಂಗಾ ಎಕ್ಸ್‌ಪ್ರೆಸ್). ರೈಲು ಸಂಖ್ಯೆ 16585/16586: ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರು – ಮುರುಡೇಶ್ವರ – SMVT ಬೆಂಗಳೂರು ಪ್ರತಿದಿನದ ಎಕ್ಸ್‌ಪ್ರೆಸ್. ರೈಲು ಸಂಖ್ಯೆ 16515/16516: ಯಶವಂತಪುರ – ಕಾರವಾರ – ಯಶವಂತಪುರ ವಾರಕ್ಕೆ ಮೂರು ದಿನದ ಎಕ್ಸ್‌ಪ್ರೆಸ್. ರೈಲು ಸಂಖ್ಯೆ 12741/12742: ವಾಸ್ಕೋ ಡಾ ಗಾಮ – ಪಾಟ್ನಾ – ವಾಸ್ಕೋ ಡಾ ಗಾಮ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್. ರೈಲು ಸಂಖ್ಯೆ 11097/11098: ಪುಣೆ – ಎರ್ನಾಕುಲಂ – ಪುಣೆ ಸಾಪ್ತಾಹಿಕ ಎಕ್ಸ್‌ಪ್ರೆಸ್.

ಪ್ರಯಾಣಿಕರೇ ಗಮನಿಸಿ

ಮಳೆಗಾಲದಲ್ಲಿ ಹಳಿಗಳ ಮೇಲೆ ನೀರು ನಿಲ್ಲುವ ಹಾಗೂ ಗುಡ್ಡ ಕುಸಿಯುವ ಭೀತಿ ಇರುವುದರಿಂದ ರೈಲುಗಳ ವೇಗವನ್ನು ಮಿತಿಗೊಳಿಸಲಾಗುತ್ತದೆ. ಹಾಗಾಗಿ ನಿಮ್ಮ ನೆಚ್ಚಿನ ಪಂಚಗಂಗಾ ಅಥವಾ ಮುರುಡೇಶ್ವರ ಎಕ್ಸ್‌ಪ್ರೆಸ್ ತಲುಪುವ ಸಮಯದಲ್ಲಿ ಕೊಂಚ ವ್ಯತ್ಯಾಸವಾಗಲಿದೆ. ಈಗಾಗಲೇ ಟಿಕೆಟ್ ಬುಕ್ ಮಾಡಿರುವವರು ಹಾಗೂ ಇನ್ಮುಂದೆ ಬುಕ್ ಮಾಡುವವರು IRCTC ವೆಬ್‌ಸೈಟ್ ಅಥವಾ NTES ಆ್ಯಪ್ ಮೂಲಕ ರೈಲುಗಳ ಪರಿಷ್ಕೃತ ಆಗಮನ ಮತ್ತು ನಿರ್ಗಮನದ ನಿಖರ ಸಮಯವನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ.
ಎಷ್ಟು ನಿಮಿಷ/ಗಂಟೆಯ ತಡ?

ಪಾಟ್ನಾದಿಂದ ವಾಸ್ಕೋಡಗಾಮಾ ಗೆ ಆಗಮಿಸುವ ರೈಲು ಸಾಮಾನ್ಯವಾಗಿ ತಲುಪುವುದಕ್ಕಿಂತ 30-45 ನಿಮಿಷ ತಡ ಮಾಡಲಿದೆ. ಇದು ಪನ್ವೇಲ್, ಚಿಪ್ಲುನ್, ರತ್ನಗಿರಿ, ಸಾವಂತವಾಡಿ, ಟಿವಿನ್, ಮಡಗಾಂವ್‌ನಲ್ಲಿ ನಿಧಾನ ಸಂಚಾರ ಮಾಡಲಿದೆ.

ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಈ ಸಮಯದಲ್ಲಿ 30 ನಿಮಿಷದಿಂದ 2 ತಾಸು ತಡವಾಗಲಿದೆ. ಅದರಲ್ಲೂ ಮುಖ್ಯವಾಗಿ ಅಂಕೋಲಾ, ಗೋಕರ್ಣ, ಕುಮಟಾ, ಹೊನ್ನಾವರ, ಮುರ್ಡೇಶ್ವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಸೂರತ್ಕಲ್ ವಿಭಾಗದಲ್ಲಿ ರೈಲು ಆಮೆಗತಿಯಲ್ಲಿ ಸಾಗಲಿದೆ!

ಕರಾವಳಿ ಜನರ ಜೀವನಾಡಿಯಾಗಿರುವ ‘ಪಂಚಗಂಗಾ’ ಕೂಡ ಸಾಮಾನ್ಯ ವೇಳಾಪಟ್ಟಿಗಿಂತ 2 ತಾಸು ತಡವಾಗಲಿದೆ. ಅದರಲ್ಲೂ ಮುಖ್ಯವಾಗಿ ಅಂಕೋಲಾ, ಗೋಕರ್ಣ, ಕುಮಟಾ, ಹೊನ್ನಾವರ, ಮುರ್ಡೇಶ್ವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಸೂರತ್ಕಲ್ ಭಾಗದಲ್ಲಿ ತಲಾ 20-45 ನಿಮಿಷ ತಡವಾಗಲಿದೆ.

ಪುಣೆ-ಎರ್ನಾಕುಲಂ ರೈಲು ಸಂಚಾರದಲ್ಲಿ 2 ತಾಸು ತಡ ಉಂಟಾಗಲಿದ್ದು, ಮಡಗಾಂವ್, ಕಾರವಾರ, ಗೋಕರ್ಣ ಪ್ರದೇಶದ ಪ್ರಯಾಣವೇ ಹೆಚ್ಚು ಪ್ರಭಾವಿತವಾಗಲಿದೆ.  ಕೊನೆಗೆ ಎಲ್ಲರ ಫೇವರೇಟ್ ಮತ್ಸ್ಯಗಂಧ ಕೂಡ ಸಾಮಾನ್ಯಕ್ಕಿಂತ 2 ತಾಸು ತಡವಾಗಲಿದ್ದು, ಉಡುಪಿ ಮಾರ್ಗದಲ್ಲಿ ಅತ್ಯಂತ ನಿಧಾನವಾಗಿ ಕ್ರಮಿಸಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed