Last Updated:
ಭುವಿ ತಮ್ಮ ಕೊನೆಯ ಓವರ್ನಲ್ಲಿ 5 ರನ್ ಸೇರಿ ಒಟ್ಟಾರೆ 4 ಓವರ್‌ಗಳಲ್ಲಿ 10 ರನ್ ನೀಡಿ 4 ವಿಕೆಟ್ ಪಡೆದರು. ಕೇವಲ 2.50 ಎಕಾನಮಿಯಲ್ಲಿ 18 ಡಾಟ್ ಬಾಲ್‌ಗಳನ್ನು ಎಸೆಯುವ ಮೂಲಕ ಅವರು ಮೀರತ್ ಬ್ಯಾಟರ್‌ಗಳನ್ನು ಸಂಪೂರ್ಣವಾಗಿ ನಡುಗಿಸಿದರು.
ಟೀಮ್ ಇಂಡಿಯಾ ಅನುಭವಿ ವೇಗಿ ಭುವನೇಶ್ವರ್ ಕುಮಾರ್ (Bhuvneshwar Kumar) ತಮ್ಮ ಸ್ವಿಂಗ್ ಬೌಲಿಂಗ್ ಹಾಗೂ ಅದ್ಭುತ ಲಯದ ಮೂಲಕ ಮತ್ತೊಮ್ಮೆ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಉತ್ತರ ಪ್ರದೇಶ ಟಿ20 (UP T20) ಲೀಗ್‌ನ ಹೈ-ಪ್ರೆಶರ್ ಕ್ವಾಲಿಫೈಯರ್ 1 ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿ ಎದುರಾಳಿ ತಂಡವನ್ನ ಧ್ವಂಸ ಮಾಡಿದ್ದಾರೆ. ಲಖನೌ ಫಾಲ್ಕನ್ಸ್ ತಂಡದ ನಾಯಕರಾಗಿರುವ ಭುವಿ, ಮೀರತ್ ಮೇವರಿಕ್ಸ್ ತಂಡದ ವಿರುದ್ಧ 4 ಓವರ್‌ಗಳಲ್ಲಿ ಕೇವಲ 10 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ತಮ್ಮ ತಂಡಕ್ಕೆ ಅಲ್ಪಮೊತ್ತದ ಗುರಿಯನ್ನ ಡಿಫೆಂಡ್ ಮಾಡಿಕೊಳ್ಳಲು ನೆರವಾಗಿದ್ದಾರೆ.














