Last Updated:
ನಟ ನಿವಿನ್ ಪೌಲಿ ಅಭಿನಯದ ಬೆಥ್ಲೆಹೆಮ್ ಕುಡುಂಬ ಯೂನಿಟ್ (Bethlehem Kudumba Unit) ಸಿನಿಮಾ ಇದೇ ರೀತಿಯ ಸಾಧನೆ ಮಾಡಿದೆ. ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು, ಮಲಯಾಳಂನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿ ಹೊಸ ದಾಖಲೆ ನಿರ್ಮಿಸಿದೆ ಎನ್ನಲಾಗಿದೆ.
ಮಲಯಾಳಂ ಚಿತ್ರರಂಗದಲ್ಲಿ (Malayalam Film Industry) ಸಣ್ಣ ಬಜೆಟ್‌ನ ಸಿನಿಮಾಗಳು ದೊಡ್ಡ ಮಟ್ಟದ ಯಶಸ್ಸು ಸಾಧಿಸುವುದು ಹೊಸದೇನಲ್ಲ. ಆದರೆ ಕೆಲವೊಮ್ಮೆ ಒಂದು ಸಿನಿಮಾ ನಿರೀಕ್ಷೆಗೂ ಮೀರಿ ಪ್ರೇಕ್ಷಕರನ್ನು ಸೆಳೆಯುವುದರ ಜೊತೆಗೆ ಬಾಕ್ಸ್ ಆಫೀಸ್ ದಾಖಲೆಗಳನ್ನೇ ಬದಲಾಯಿಸುತ್ತದೆ. ಇದೀಗ ನಟ ನಿವಿನ್ ಪೌಲಿ ಅಭಿನಯದ ಬೆತ್ಲಹೇಮ್ ಕುಟುಂಬ ಯುನಿಟ್ (Bethlehem Kudumba Unit) ಸಿನಿಮಾ ಇದೇ ರೀತಿಯ ಸಾಧನೆ ಮಾಡಿದೆ. ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು, ಮಲಯಾಳಂನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿ ಹೊಸ ದಾಖಲೆ ನಿರ್ಮಿಸಿದೆ ಎನ್ನಲಾಗಿದೆ.














