Last Updated:
ಬೆಂಗಳೂರಿನಲ್ಲಿ ಜುಲೈ 10ರಿಂದ ರಸ್ತೆ ಬದಿ ನಿಲ್ಲಿಸಿದ ಗುರುತು ಇಲ್ಲದ ವಾಹನಗಳ ತೆರವಿಗೆ ಜಿಬಿಎ ಮುಂದಾಗಿದೆ. ಸಚಿವ ಕೃಷ್ಣಬೈರೇಗೌಡ ಸೂಚನೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಆಪರೇಷನ್ ಫುಟ್ಪಾತ್ (Bengaluru) ತೆರವು ಬೆನ್ನಲ್ಲೇ ಮತ್ತೊಂದು ಕಾರ್ಯಾಚರಣೆಗೆ ಜಿಬಿಎ ಮುಹೂರ್ತ (GBA) ನಿಗದಿ ಮಾಡಿದೆ. ಜುಲೈ 10ರಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿದ ಮಾಲೀಕರ ಗುರುತು ಇಲ್ಲದ ವಾಹನಗಳ ತೆರವಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಸಚಿವ ಕೃಷ್ಣಬೈರೇಗೌಡ (Minister Krishna Byre Gowda) ಸೂಚನೆಯಂತೆ ವಾಹನಗಳ ತೆರವಿಗೆ ನಿರ್ಧಾರ ಮಾಡಲಾಗಿದೆ. ತೆರವಾದ ವಾಹನಗಳನ್ನು ಇಂತಿಷ್ಟು ಕಾಲಮಿತಿಯಲ್ಲಿ ಮಾಲೀಕರಿಗೆ ಬಿಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆ ಬಳಿಕ ತೆರವಾದ ವಾಹನಗಳನ್ನು ಜಿಬಿಎ ಹರಾಜು ಹಾಕಲಿದೆ.
ಇನ್ನು, ಆಪರೇಷನ್ ಫುಟ್ಪಾತ್ ತೆರವು ಕಾರ್ಯಾಚರಣೆ ಕುರಿತು ಸಚಿವ ಕೃಷ್ಣ ಭೈರೇಗೌಡ ಪ್ರತಿಕ್ರಿಯೆ ನೀಡಿ, ಸುಪ್ರೀಂಕೋರ್ಟ್ ಆದೇಶದ ಮೇರೆಗೆ ತೆರವು ಕಾರ್ಯ ಮಾಡ್ತಾ ಇದ್ದೇವೆ. ವ್ಯಾಪಾರಿಗಳು ಸಹಕಾರ ಕೊಡಬೇಕು. ನಾವು 2,000 ಕಿಲೋ ಮೀಟರ್ ತೆರವುಗೊಳಿಸಿ ಅಂತಾ ಮಾತ್ರ ಹೇಳಿದ್ದೇವೆ. ಹೆಚ್ಚು ಜನರು ಓಡಾಡುವ ಕಡೆ ಮಾತ್ರ ತೆರವು ಮಾಡುತ್ತಿದ್ದೇವೆ ಎಂದು ಹೇಳಿದ್ದರು.
Bangalore [Bangalore],Bangalore,Karnataka













