Bengaluru Power Cut: ಬೆಂಗಳೂರಿಗರ ಗಮನಕ್ಕೆ, ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲ; ನಿಮ್ಮ ಮನೆ ಇದೆಯಾ ಚೆಕ್ ಮಾಡಿಕೊಳ್ಳಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಪವರ್‌ ಕಟ್


Last Updated:

ಬೆಂಗಳೂರಿನಲ್ಲಿ ಇಂದು KPTCL ನಿರ್ವಹಣಾ ಕಾಮಗಾರಿಯಿಂದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ. ಬೆಸ್ಕಾಂ ಗ್ರಾಹಕರಿಗೆ ತೊಂದರೆ.

ಪವರ್‌ ಕಟ್
ಪವರ್‌ ಕಟ್

ಬೆಂಗಳೂರು: ನೀವು ಬೆಂಗಳೂರಿನ ನಿವಾಸಿಗಳೇ? ಹಾಗಿದ್ದರೆ ಈ ಸುದ್ದಿ ನಿಮ್ಮ ಗಮನಕ್ಕೆ ಇರಲಿ. ಇಂದು ನಗರದ ಹಲವು ಪ್ರಮುಖ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಬೆಸ್ಕಾಂ (BESCOM) ಗ್ರಾಹಕರು ಭಾರಿ ಪರದಾಟ ನಡೆಸುವ ಸಾಧ್ಯತೆಯಿದೆ.ಕೆಪಿಟಿಸಿಎಲ್ (KPTCL) ತುರ್ತು ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ, ನಗರದ ಪ್ರಮುಖ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಕೆಲಸದ ಒತ್ತಡದಲ್ಲಿರುವ ಮಂದಿ ಮತ್ತು ಮನೆಯಲ್ಲೇ ಕುಳಿತು ಕೆಲಸ ಮಾಡುವವರಿಗೆ (WFH) ಇದು ದೊಡ್ಡ ತಲೆನೋವಾಗಿ ಪರಿಣಮಿಸಲಿದೆ.

ವಿದ್ಯುತ್ ವ್ಯತ್ಯಯದ ಸಮಯ ಮತ್ತು ಸ್ಥಳಗಳು

ವೆಲ್‍ಕಾಸ್ಟ್ ಉಪಕೇಂದ್ರ: ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಇರುವುದಿಲ್ಲ. ರವೀಂದ್ರನಗರ, ಜಾಲಹಳ್ಳಿ ವೆಸ್ಟ್, ತ್ರಿವೇಣಿ ಮುಖ್ಯ ರಸ್ತೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ಪವರ್ ಕಟ್ ಬಿಸಿ ತಟ್ಟಲಿದೆ.

ಬ್ಯಾಟರಾಯನಪುರ ಉಪಕೇಂದ್ರ: ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಕಡಿತವಾಗಲಿದೆ. ಅಮೃತಹಳ್ಳಿ, ಸಹಕಾರನಗರ, ಜಕ್ಕೂರು, ತಿಂದ್ಲು ಮತ್ತು ಸುತ್ತಮುತ್ತಲಿನ ಬಡಾವಣೆಗಳಲ್ಲಿ ಕತ್ತಲೆ ಆವರಿಸಲಿದೆ.

ಕೈಗಾರಿಕಾ ಪ್ರದೇಶಗಳಿಗೂ ಕುತ್ತು

ಕೇವಲ ಜನವಸತಿ ಪ್ರದೇಶಗಳು ಮಾತ್ರವಲ್ಲದೆ, ವೋಲ್ವೋ, ಐಟಿಸಿ, ವಿಪ್ರೋ ವೆಲ್‍ಕಾಸ್ಟ್ ಸೇರಿದಂತೆ ಹಲವು ಪ್ರಮುಖ ಕೈಗಾರಿಕಾ ಪ್ರದೇಶಗಳಿಗೂ ವಿದ್ಯುತ್ ವ್ಯತ್ಯಯದ ಬಿಸಿ ತಟ್ಟಿದ್ದು, ಉತ್ಪಾದನೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಸಾರ್ವಜನಿಕರಿಗೆ ಬೆಸ್ಕಾಂ ಮನವಿ

ನಿರ್ವಹಣಾ ಕಾಮಗಾರಿ ಪೂರ್ಣಗೊಳ್ಳುವವರೆಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಿರುತ್ತದೆ. ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಿ, ಸಹಕರಿಸಬೇಕು ಎಂದು ಬೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed