Bengaluru Police: ಠಾಣೆ ಗಡಿರೇಖೆ ಅಡ್ಡಿಯಿಲ್ಲ, 112 ಗೆ ಕರೆ ಮಾಡಿದರೆ ಸಾಕು, ನಿಮ್ಮ ರಕ್ಷಣೆಗೆ ತಕ್ಷಣ ಧಾವಿಸಲಿದ್ದಾರೆ ಪೊಲೀಸರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಸಾರ್ವಜನಿಕ ಸುರಕ್ಷತೆ


Last Updated:

ಬೆಂಗಳೂರಿನಲ್ಲಿ 112ಗೆ ಕರೆ ಮಾಡಿದರೆ, ಪೊಲೀಸ್ ಠಾಣೆಯ ಗಡಿ ನೋಡದೆ ತಕ್ಷಣ ಸ್ಪಂದಿಸಲು ಜಂಟಿ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಆದೇಶಿಸಿದ್ದಾರೆ. ಇದರಿಂದ 70ಕ್ಕೂ ಹೆಚ್ಚು ಜನರ ಪ್ರಾಣ ರಕ್ಷಿಸಲಾಗಿದೆ.

ಸಾರ್ವಜನಿಕ ಸುರಕ್ಷತೆ
ಸಾರ್ವಜನಿಕ ಸುರಕ್ಷತೆ

ಬೆಂಗಳೂರು (Bengaluru) ನಗರದ ಜನಸಾಮಾನ್ಯರಿಗೆ ಅತ್ಯಂತ ಮಹತ್ವದ ಹಾಗೂ ನಿರಾಳ ತರುವಂತಹ ಸುದ್ದಿಯಿದು. ಇಲ್ಲಿಯವರೆಗೆ ‘ಇದು ನಮ್ಮ ಠಾಣೆ ಗಡಿ ಬರುವುದಿಲ್ಲ, ಬೇರೆ ಪೊಲೀಸ್ (Police) ಠಾಣೆಗೆ ಹೋಗಿ’ ಎಂದು ಸಬೂಬು ಹೇಳಿ ಸಾರ್ವಜನಿಕರ (Public) ಸಂಕಷ್ಟವನ್ನು ನಿರ್ಲಕ್ಷಿಸುತ್ತಿದ್ದ ಪೊಲೀಸರ ಧೋರಣೆಗೆ ಕೊನೆಗೂ ಬ್ರೇಕ್ (Break) ಬೀಳಲಿದೆ. ಇನ್ಮುಂದೆ 112ಗೆ ಕರೆ ಮಾಡಿದರೆ ಸಾಕು, ಠಾಣೆಯ ಗಡಿ ಸರಹದ್ದು ನೋಡದೆ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಬೇಕು ಎಂದು ಜಂಟಿ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಗಡಿ ಮಿತಿ ತೆರವಿನಿಂದ ನೂರಾರು ಜೀವಗಳು ರಕ್ಷಣೆ

ರಾಜಧಾನಿಯಲ್ಲಿ ಪೊಲೀಸರ ‘ಗಡಿ’ ಮಿತಿ ತೆರವುಗೊಳಿಸಿದ ಪರಿಣಾಮ ನೂರಾರು ಜೀವಗಳ ರಕ್ಷಣೆಗೆ ಇದು ಅಕ್ಷರಶಃ ಜೀವಾನಂದವಾಗಿದೆ. ಸಂಕಷ್ಟದಲ್ಲಿ ದೂರು ನೀಡಿದವರಿಗೆ ‘ಸೀಮಿತೆ’ರಾಗಿ ಖಾಕಿ ಪಡೆ ಸಹಾಯ ಹಸ್ತ ಚಾಚುತ್ತಿದ್ದು, ಕಳೆದ ಮೂರು ತಿಂಗಳಲ್ಲಿ ಆತ್ಮಹತ್ಯೆಗೆ ಯತ್ನಿಸಿದ 20 ಮತ್ತು ಮನೆ ತೊರೆದಿದ್ದ ಅಜ್ಞಾತವ್ಯಕ್ತಿ ಸೇರಿದಂತೆ ಒಟ್ಟು 70ಕ್ಕೂ ಅಧಿಕ ಜನರ ಪ್ರಾಣವನ್ನು ಪೊಲೀಸರು ರಕ್ಷಿಸಿದ್ದಾರೆ ಎಂದು ಕನ್ನಡಪ್ರಭ ವರದಿ ಮಾಡಿದೆ.
ಹಿಂದಿನ ಸಮಸ್ಯೆಗಳು ಹಾಗೂ ಹೊಸ ನಿಯಮ

ಹಿಂದೆ ಠಾಣೆಗಳ ನಡುವೆ ಗಡಿರೇಖೆ ಇದ್ದ ಕಾರಣ ತುರ್ತು ಸಂದರ್ಭದಲ್ಲಿ ನೆರವು ಕೋರಿದ ನಾಗರಿಕರಿಗೆ ಸಕಾಲದಲ್ಲಿ ಸ್ಪಂದನೆ ಸಿಗುತ್ತಿರಲಿಲ್ಲ. ಸಾರ್ವಜನಿಕರ ಈ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಜಂಟಿ ಪೊಲೀಸ್ ಆಯುಕ್ತರು ಈ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದಾರೆ.

112 ಗೆ ಕರೆ , ತಕ್ಷಣ ಸ್ಪಂದನೆ

ಇನ್ಮುಂದೆ ಯಾವುದೇ ಠಾಣೆಯಾಗಲಿ, ಕರೆ ಬಂದ ಕೂಡಲೇ ಆಯಾ ವ್ಯಾಪ್ತಿಯನ್ನು ಲೆಕ್ಕಿಸದೆ ಹತ್ತಿರವಿರುವ ಹೊಯ್ಸಳ ಸಿಬ್ಬಂದಿ ಅಥವಾ ಚೀತಾ ಬೈಕ್ ಸವಾರರು ತಕ್ಷಣವೇ ಸ್ಥಳಕ್ಕೆ ತೆರಳಿ ನೆರವು ನೀಡಲಿದ್ದಾರೆ.

ಚೀತಾ ಬೈಕ್‍ಗಳ ಬಳಕೆ

ತುರ್ತು ಪರಿಸ್ಥಿತಿಯಲ್ಲಿ ಜನರಿಗೆ ತಕ್ಷಣ ಸ್ಪಂದಿಸಲು 65 ಚೀತಾ ಬೈಕ್‍ಗಳನ್ನು ರಕ್ಷಣಾ ಕಾರ್ಯಚರಣೆಗೆ ಬಳಸಲಾಗುತ್ತಿದ್ದು, ಇದು ಸಂಚಾರ ದಟ್ಟಣೆಯಲ್ಲೂ 6.5 ನಿಮಿಷಗಳಲ್ಲಿ ಸ್ಥಳ ತಲುಪಲು ನೆರವಾಗುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed