Last Updated:
ಆರ್ಡರ್ ಡೆಲಿವರಿ ಮಾಡಲು ಹೋಗಿ ಠಾಣೆಯಲ್ಲಿ 4 ಗಂಟೆ ಕಾಯ್ತೀರಾ? ಟ್ರಾಫಿಕ್ ರೂಲ್ಸ್ ಮುರಿಯುವವರಿಗೆ ಬಿತ್ತು ಬಿಗ್ ಶಾಕ್.
ಬೆಂಗಳೂರು: ನೀವು ಆ್ಯಪ್-ಆಧಾರಿತ ಡೆಲಿವರಿ ಬಾಯ್ಸ್ (Delivery Boy) ಆಗಿದ್ದೀರಾ? ಕಸ್ಟಮರ್ ಗೆ ಫಾಸ್ಟ್ ಆಗಿ ಆರ್ಡರ್ ತಲುಪಿಸುವ ಧಾವಂತದಲ್ಲಿ ಟ್ರಾಫಿಕ್ ರೂಲ್ಸ್ (Traffic Rules) ಬ್ರೇಕ್ (Break) ಮಾಡ್ತಿದ್ದೀರಾ? ಹಾಗಿದ್ರೆ ಇನ್ಮುಂದೆ ಎಚ್ಚರ. ನಿಮ್ಮ ಒಂದು ಸಣ್ಣ ತಪ್ಪು, ನಿಮ್ಮ ಸಂಪೂರ್ಣ ಕೆಲಸದ (Work) ದಿನವನ್ನೇ ಹಾಳು ಮಾಡಬಹುದು.
ನಗರದಲ್ಲಿ ಕಡಿಮೆ ವೇಗದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಇವುಗಳ ಸವಾರಿಯಲ್ಲಿನ ಅಸುರಕ್ಷಿತ ಚಾಲನೆ ಮತ್ತು ನಿಯಮಗಳ ಉಲ್ಲಂಘನೆಯು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಟೈಮ್ಗೆ ಆರ್ಡರ್ ತಲುಪಿಸುವ ಆತುರದಲ್ಲಿ ಬೈಕ್ ರೇಸಿಂಗ್ ಮಾಡುವುದು, ಸಿಗ್ನಲ್ ಜಂಪ್ ಮಾಡುವುದು ಅಥವಾ ಫುಟ್ಪಾತ್ ಮೇಲೆ ಸವಾರಿ ಮಾಡುವುದು ಈಗ ನಿಮಗೆ ದುಬಾರಿಯಾಗಿ ಪರಿಣಮಿಸಲಿದೆ.
ಡೆಲಿವರಿ ಸಿಬ್ಬಂದಿ ಜೀವದ ರಕ್ಷಣೆ ಮತ್ತು ರಸ್ತೆಯ ಇತರೆ ವಾಹನ ಸವಾರರ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪೊಲೀಸರು ಈ ಕಠಿಣ ಜಾಗೃತಿ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. “ಕೇವಲ ವೇಗಕ್ಕಿಂತ ಪ್ರಾಣ ಮುಖ್ಯ” ಎಂಬ ಸಂದೇಶವನ್ನು ಪ್ರತಿ ಸವಾರನಿಗೆ ಮನವರಿಕೆ ಮಾಡಿಕೊಡುವುದೇ ಈ ಕೌನ್ಸೆಲಿಂಗ್ನ ಉದ್ದೇಶ.
ಡೆಲಿವರಿ ಸಿಬ್ಬಂದಿ ಇನ್ಮುಂದೆ ತಮ್ಮ ಆರ್ಡರ್ ತಲುಪಿಸುವಾಗ ಸಂಚಾರ ನಿಯಮಗಳನ್ನು ಪಾಲಿಸುವುದು ಅನಿವಾರ್ಯ. ಇಲ್ಲದಿದ್ದರೆ, ದಂಡದ ಜೊತೆಗೆ ಸಮಯದ ನಷ್ಟವನ್ನೂ ಅನುಭವಿಸಬೇಕಾಗುತ್ತದೆ.
ಆತುರದಲ್ಲಿ ಅರ್ಧಗಂಟೆ ಬೇಗ ಆರ್ಡರ್ ತಲುಪಿಸುವುದಕ್ಕಿಂತ, ಸುರಕ್ಷಿತವಾಗಿ ನಿಯಮ ಪಾಲಿಸಿ ಸಂಚರಿಸುವುದು ನಿಮ್ಮ ಜೇಬಿಗೂ ಒಳ್ಳೆಯದು, ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಬೆಂಗಳೂರಿನ ಟ್ರಾಫಿಕ್ ರೂಲ್ಸ್ ಪಾಲಿಸಿ, ದಂಡದಿಂದ ಪಾರಾಗಿ.
Bangalore [Bangalore],Bangalore,Karnataka














