Bengaluru Hotel: ದಶಮಾನೋತ್ಸವದ ಸಂಭ್ರಮ, ಬೆಂಗಳೂರಿಗರ ಅಚ್ಚುಮೆಚ್ಚಿನ ‘ತಾಜಾ ತಿಂಡಿ’ಯಲ್ಲಿ ನಾಳೆ ಎಲ್ಲಾ ತಿನಿಸುಗಳ ಮೇಲೆ ಬರೋಬ್ಬರಿ 25% ಡಿಸ್ಕೌಂಟ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ತಾಜಾ ತಿಂಡಿ ದಶಮಾನೋತ್ಸವ


Last Updated:

ತಾಜಾ ತಿಂಡಿ ಕತ್ರಿಗುಪ್ಪೆ ಶಾಖೆಗೆ 10 ವರ್ಷ. ಜುಲೈ 30 ರಂದು ಎಲ್ಲಾ ತಿಂಡಿಗಳಿಗೆ 25% ರಿಯಾಯಿತಿ. ಬೆಳಿಗ್ಗೆ 7-11, ಸಂಜೆ 4-8. ಹೋಟೆಲ್‌ನಲ್ಲಿ ಕುಳಿತು ತಿನ್ನುವವರಿಗೆ ಮಾತ್ರ.

ತಾಜಾ ತಿಂಡಿ ದಶಮಾನೋತ್ಸವ
ತಾಜಾ ತಿಂಡಿ ದಶಮಾನೋತ್ಸವ

ಬೆಂಗಳೂರಿಗರ (Bengaluru) ಬಾಯಲ್ಲಿ ನೀರೂರಿಸುವ ಪ್ರಸಿದ್ಧ ತಿಂಡಿ ತಾಣವಾದ ‘ತಾಜಾ ತಿಂಡಿ’ಯ ಕತ್ರಿಗುಪ್ಪೆ (ಬನಶಂಕರಿ) ಶಾಖೆಯು ಯಶಸ್ವಿ 10 ವರ್ಷಗಳನ್ನು ಪೂರೈಸಿ ದಶಮಾನೋತ್ಸವದ (Decennial) ಸಂಭ್ರಮದಲ್ಲಿದೆ. ಕಳೆದ ಒಂದು ದಶಕದಿಂದಲೂ ಗ್ರಾಹಕರಿಗೆ ಶುಚಿಯಾದ, ರುಚಿಯಾದ (Taste) ಹಾಗೂ ಉತ್ತಮ ಗುಣಮಟ್ಟದ ತಿಂಡಿಗಳನ್ನು ಒದಗಿಸುತ್ತಾ ಬಂದಿರುವ ಸಂಸ್ಥೆಯು, ಈ ವಿಶೇಷ  (Special)ಮೈಲಿಗಲ್ಲನ್ನು ತನ್ನ ಗ್ರಾಹಕರೊಂದಿಗೆ (Customer) ಆಚರಿಸಿಕೊಳ್ಳಲು ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದೆ.

ನಾಳೆ ಒಂದೇ ದಿನ ವಿಶೇಷ ರಿಯಾಯಿತಿ

ದಶಮಾನೋತ್ಸವದ ಸಂಭ್ರಮವನ್ನು ಇನ್ನುಳಿದಷ್ಟು ಮಧುರವಾಗಿಸಲು, ಜುಲೈ 30 (ಗುರುವಾರ) ರಂದು ಒಂದು ದಿನ ಮಾತ್ರ ಎಲ್ಲಾ ತಿಂಡಿ-ತಿನಿಸುಗಳ ಮೇಲೆ 25% ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತಿದೆ.

ಸಮಯ: ಬೆಳಗ್ಗೆ 7.00 ರಿಂದ 11.00 ಗಂಟೆಯವರೆಗೆ ಹಾಗೂ ಸಂಜೆ 4.00 ರಿಂದ 8.00 ಗಂಟೆಯವರೆಗೆ ಮಾತ್ರ.

ವಿಶೇಷ ಸೂಚನೆ

ಈ ಭರ್ಜರಿ ರಿಯಾಯಿತಿಯು ಹೋಟೆಲ್‍ನಲ್ಲಿ ಕುಳಿತು ಸವಿಯುವ ಗ್ರಾಹಕರಿಗೆ ಮಾತ್ರ ಸೀಮಿತವಾಗಿದ್ದು, ಪಾರ್ಸೆಲ್ ಹಾಗೂ ಬಲ್ಕ್ ಆರ್ಡರ್ ಗಳಿಗೆ ಅನ್ವಯಿಸುವುದಿಲ್ಲ. ಅಲ್ಲದೆ, ‘ಮೊದಲು ಬಂದವರಿಗೆ ಆದ್ಯತೆ’ ನೀಡಲಾಗುತ್ತದೆ.
ಸಂಸ್ಥೆಯ ಸಂದೇಶ

“ಕಳೆದ ಹತ್ತು ವರ್ಷಗಳಲ್ಲಿ ಬೆಂಗಳೂರಿನ ಜನತೆ ನಮ್ಮ ಮೇಲೆ ತೋರಿದ ಅಮೋಘ ಪ್ರೀತಿ, ವಿಶ್ವಾಸ ಮತ್ತು ನಿರಂತರ ಬೆಂಬಲವೇ ನಮ್ಮ ಯಶಸ್ಸಿನ ಅತಿ ದೊಡ್ಡ ಶಕ್ತಿ. ನಿಮ್ಮ ಈ ಪ್ರೀತಿಗೆ ಕೃತಜ್ಞತೆಯಾಗಿ ಈ ಸಣ್ಣ ಕೊಡುಗೆಯನ್ನು ನೀಡುತ್ತಿದ್ದೇವೆ,” ಎಂದು ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed