Last Updated:
ಬೆಂಗಳೂರು ಸಿಸಿಬಿ ಪೊಲೀಸರಿಂದ ಕಂಟ್ರಿ ಮೇಡ್ ಪಿಸ್ತೂಲ್ ತಯಾರಿಸಿ ಮಾರಾಟ ಮಾಡುತ್ತಿದ್ದ ಮಧ್ಯಪ್ರದೇಶದ ಜಂಜೀರ್ ಅಲಿಯಾಸ್ ದಿನೇಶ್ ಪಾಟಿದಾರ್ ಬಂಧನ.
ಬೆಂಗಳೂರು: ಕಂಟ್ರಿ ಮೇಡ್ ಪಿಸ್ತೂಲ್ ತಯಾರಿಸಿ (Pistol Factory) ಮಾರಾಟ ಮಾಡುತ್ತಿದ್ದ 30 ವರ್ಷ ವಯಸ್ಸಿನ ಮಧ್ಯಪ್ರದೇಶದ ಮೂಲದ ಆರೋಪಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು (Bengaluru CCB Police) ಬಂಧಿಸಿದ್ದರು. ಬಂಧಿತ ಆರೋಪಿಯನ್ನು ಜಂಜೀರ್ ಅಲಿಯಾಸ್ ದಿನೇಶ್ ಪಾಟಿದಾರ್ ಎಂದು ಗುರುತಿಸಲಾಗಿದೆ. ಸಿಸಿಬಿ ಪೊಲೀಸರು ಸ್ಥಳೀಯ ನ್ಯಾಯಾಲಯದಿಂದ ಅರೆಸ್ಟ್ ವಾರೆಂಟ್ ಪಡೆದು, ಆರೋಪಿಯನ್ನು ಬಂಧಿಸಿದ್ದೇವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ (Bengaluru Police Commissioner) ತಿಳಿಸಿದ್ದರು.
ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದರು. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತರು, ಡಿಸಿಪಿ ರಾಜಾ ಇಮಾಮ್ ಕಾಸಿಮ್ ಅವರ ನೇತೃತ್ವದಲ್ಲಿ ನಮ್ಮ ಸಿಸಿಬಿ ತಂಡ ಮಾರ್ಚ್ ನಿಂದಲೇ ಆರೋಪಿಗಾಗಿ ಹುಡುಕುತ್ತಿದ್ದರು. ಫೆಬ್ರವರಿಯಲ್ಲಿ ನಾಡ ಪಿಸ್ತೂಲ್ ಖರೀದಿಸಿದ್ದ ಉದ್ಯಮಿಯನ್ನು ಬಂಧಿಸಿದ್ದರು. ಆತ ಇಬ್ಬರು ಏಜೆಂಟರ ಮೂಲಕ ಮಧ್ಯಪ್ರದೇಶದ ವ್ಯಕ್ತಿಯಿಂದ ಪಿಸ್ತೂಲ್ ಖರೀದಿ ಮಾಡಿದ್ದಾಗಿ ಉದ್ಯಮಿ ಒಪ್ಪಿಕೊಂಡಿದ್ದರು. ಕೆಲವು ದಿನಗಳ ಬಳಿಕ ಏಜೆಂಟರನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೇ, ಅವರಿಂದ ಎರಡು ಪಿಸ್ತೂಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಬಂಧಿತರು ಮಧ್ಯಪ್ರದೇಶ ವ್ಯಕ್ತಿ ಪಿಸ್ತೂಲ್ ತಯಾರಿಸಿ ಮಾರಾಟ ಮಾಡೋದನ್ನು ತಿಳಿಸಿದ್ದರು ಎಂದು ಸಿಂಗ್ ಹೇಳಿದ್ದರು.
ಸಿಸಿಬಿ ಪೊಲೀಸರು ಫೆಬ್ರವರಿಯಲ್ಲಿ 26 ವರ್ಷದ ಸೈಯದ್ ಮಸೂದ್ ಅವರನ್ನು ಬಂಧಿಸಿದ್ದರು. ಈ ವೇಳೆ ಒಂದು ಪಿಸ್ತೂಲ್ ಮತ್ತು 50 ಜೀವಂತ ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಬಂಧಿತ ಮಸೂದ್, ಯುವತಿಯೊಬ್ಬಳನ್ನು ಪ್ರೀತಿ ಮಾಡಿದ್ದನಂತೆ. ಆದರೆ ಇದಕ್ಕೆ ಅವರ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರಂತೆ. ಇದರಿಂದ ಅವರ ಮನೆಯವರು ದಾಳಿ ಮಾಡಬಹುದು ಅಂತ ಹೇಳಿ, ಪಿಸ್ತೂಲ್ ಖರೀದಿ ಮಾಡಲು ಮುಂದಾಗಿದ್ದನಂತೆ. ಇದರಂತೆ ಫೆಬ್ರವರಿ 25ರಂದು ಮಧ್ಯ ಪ್ರದೇಶದ ಜಾವೇದ್ ಆಲಂ ಅವರು ಭೋಪಾಲ್ ನಿಂದ ಯಶವಂತಪುರ ರೈಲು ನಿಲ್ದಾಣಕ್ಕೆ ಆಗಮಿಸಿ ಪಿಸ್ತೂಲ್ ಡೀಲ್ ಮಾಡಲು ಮುಂದಾಗಿದ್ದ. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಇಬ್ಬರನ್ನು ಬಂಧಿಸಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸಿಸಿಬಿ ಪೊಲೀಸರ ರೋಚಕ ಕಾರ್ಯಾಚರಣೆ
ಆದರೆ, ಈ ಸಂದರ್ಭದಲ್ಲಿ ಪಿಸ್ತೂಲ್ ತಯಾರಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ಏಕೆಂದರೆ ಆ ವೇಳೆಗೆ ಮತ್ತೊಬ್ಬ ಏಜೆಂಟ್ ತಲೆಮರೆಸಿಕೊಂಡಿದ್ದನಂತೆ. ಆದರೆ ಇತ್ತೀಚೆಗೆ ಏಜೆಂಟ್ ಪಾಟಿದಾರ್ ಎಂಬಾತ ಮತ್ತೆ ತನ್ನ ಕೃತ್ಯವನ್ನು ಮುಂದುವರಿಸಿದ್ದನಂತೆ. ಇದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.
Bangalore [Bangalore],Bangalore,Karnataka
Jul 23, 2026 12:39 PM IST
Bengaluru CCB Police: ಬೆಂಗಳೂರು ಪೊಲೀಸರ ರೋಚಕ ಕಾರ್ಯಾಚರಣೆ; ‘ಲವ್ ಅಫೇರ್’ ಕೊಟ್ಟ ಸುಳಿವು, ಅಕ್ರಮ ಪಿಸ್ತೂಲ್ ದಂಧೆಕೋರ ಅರೆಸ್ಟ್!














