Bengaluru: ಸಿಲಿಕಾನ್ ಸಿಟಿ ಮಂದಿಗೆ ಗುಡ್​ ನ್ಯೂಸ್​; ನಗರದ 8 ಕಡೆ ಮಾವು ಮೇಳ, ರೈತರಿಂದ ನೇರ ಮಾರಾಟ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಮಾವು ಮೇಳ (ಸಂಗ್ರಹ ಚಿತ್ರ)


Last Updated:

ಬೆಂಗಳೂರುದಲ್ಲಿ ಮೇ 8 ರಿಂದ 17 ರವರೆಗೆ ಕಬ್ಬನ್ ಪಾರ್ಕ್ ನಲ್ಲಿ ಮಾವು ಹಲಸು ಮೇಳ ಆಯೋಜನೆ, 50 ಮಾವು, 7 ಹಲಸು ಮಳಿಗೆ, ರೈತರಿಂದ ನೇರ ಮಾರಾಟ, ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.

ಮಾವು ಮೇಳ (ಸಂಗ್ರಹ ಚಿತ್ರ)
ಮಾವು ಮೇಳ (ಸಂಗ್ರಹ ಚಿತ್ರ)

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru News) ಮೇ 8 ರಿಂದ 17 ರವರೆಗೆ ಮಾವು ಮೇಳ (Mango and Jackfruit Mela) ನಡೆಯಲಿದೆ. ಕಬ್ಬನ್ ಪಾರ್ಕ್​ ಬ್ಯಾಂಡ್ (Cubbon Park) ಸ್ಟ್ಯಾಂಡ್ ಬಳಿ ಕರ್ನಾಟಕ ಮಾವು ಅಭಿವೃದ್ಧಿ ನಿಗಮದ ವತಿಯಿಂದ ಮಾವು ಮೇಳ ನಡೆಯಲಿದೆ. ಇದೇ ಮೊದಲ‌ ಬಾರಿಗೆ ನಗರದ 8 ಕಡೆಗಳಲ್ಲಿ ಮಾವು ಮೇಳ ಆಯೋಜಿಸಲಾಗಿದೆ.

ಸಿಟಿಯ 8 ಕಡೆಗಳಲ್ಲಿ ಮೇಳ ಆಯೋಜನೆ

ಕಬ್ಬನ್ ಪಾರ್ಕ್ ಹೊರತು ಪಡಿಸಿದರೆ, ಉತ್ತರ ಬೆಂಗಳೂರು – ಸಹಕಾರ ನಗರ ಗಣೇಶ ಗ್ರೌಂಡ್ಸ್, ಪೂರ್ವ ಬೆಂಗಳೂರು – ವೈಟ್ ಫೀಲ್ಡ್ ಗ್ರೌಂಡ್, ದಕ್ಷಿಣ ಬೆಂಗಳೂರು – ಬಸವನಗುಡಿ ನ್ಯಾಷನಲ್ ಕಾಲೇಜು ಗ್ರೌಂಡ್, ಪಶ್ಚಿಮ ಬೆಂಗಳೂರು – ಜಿಬಿಎ ಮೈದಾನ, ನಮ್ಮ ಮೆಟ್ರೋ ನಿಲ್ದಾಣದಲ್ಲೂ ಈ ಬಾರಿಯ ಮಾವು ಮೇಳ ನಡೆಯಲಿದೆ. ಈ ಬಾರಿ ಕೂಡ ರಾಷ್ಟ್ರೀಯ, ಅಂತರಾಷ್ಟ್ರೀಯ ಮಾವುಗಳ ಪ್ರದರ್ಶನ, ಖರೀದಿಗೆ ಅವಕಾಶ ನೀಡಲಾಗಿದೆ. 50 ಮಾವು ಮಳಿಗೆ ಹಾಗೂ 7 ಹಲಸು ಮಳಿಗೆ ಇರಲಿದೆ. ಖುದ್ದು ರೈತರೇ ನೇರವಾಗಿ ಮೇಳದಲ್ಲಿ ಮಾವು ಮಾರಾಟ ಮಾಡಲಿದ್ದಾರೆ.
ನಮ್ಮ ಮೆಟ್ರೋ ನಿಲ್ದಾಣದಲ್ಲೂ ಮಾವು ಮೇಳ

ಒಂದೇ ಜಾಗದಲ್ಲಿ ಮೇಳ‌ ಮಾಡಿದರೆ ಜನರಿಗೆ ಬರುವುದು ಕಷ್ಟ ಆಗಲಿದೆ. ಹೀಗಾಗಿ ಈ ಬಾರಿ ನಗರದ ಹಲವು ಭಾಗದಲ್ಲಿ ಮಾವು ಮೇಳ ನಡೆಯಲಿದ್ದು, ಇಳುವರಿ ಬಂದಂತೆ ಒಂದೊಂದು ಕಡೆಗಳಲ್ಲಿ ಮಾವು ಮೇಳ ನಡೆಸಲಾಗುತ್ತದೆ. ಈ ಬಗ್ಗೆ ಮಾತನಾಡಿರುವ ಮಾವು ನಿಗಮ ಅಧ್ಯಕ್ಷ ಮುದ್ದುಗೌಡ, ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ಮಾವು ಬೆಳೆ ಬಂದಿದೆ. ಈ ಬಾರಿ ನಮ್ಮಲ್ಲಿ ಇಳುವರಿ ಕಡಿಮೆ‌ ಆಗುವ ಆತಂಕ ಇತ್ತು, ಆದರೆ ಈ ಬಾರಿ ನಿರೀಕ್ಷೆಗೂ ಮೀರಿದ ಬೆಳೆ ಬಂದಿದೆ. 1.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಬೆಳೆಯಲಾಗಿದೆ. ಮಾವು ಮೇಳದಲ್ಲಿ 50 ಮಾವು ಮಳಿಗೆ ಹಾಗೂ 7 ಹಲಸು ಮಳಿಗೆ ಇರಲಿದೆ. ಖುದ್ದು ರೈತರೇ ನೇರವಾಗಿ ಮೇಳದಲ್ಲಿ ಮಾವು ಮಾರಾಟ ಮಾಡುವುದರಿಂದ ರೈತರಿಗೂ ಅನುಕೂಲ ಆಗಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Inspirational Story: 500 ರೂಪಾಯಿ ಟ್ರಿಕ್;‌ ಅಳಿವಿನಂಚಲ್ಲಿದ್ದ ಶಾಲೆಗೆ ಈಗ ದಿನವೂ ಜನವೋ ಜನ! ಹಾಗಾದ್ರೆ ಶಿಕ್ಷಕರು ಮಾಡಿದ್ದೇನು?

ಈ ಮೇಳದಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಉತ್ತರ ಕನ್ನಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಮಾವು ಬೆಳೆಗಾರರು ಭಾಗಿಯಾಗಲಿದ್ದಾರೆ. ಒಂದೇ ಸ್ಥಳದಲ್ಲಿ ನಿಮಗೆ ಸುಮಾರು 40 ರಿಂದ 50 ತಳಿಯ ಮಾವು ಖರೀದಿಗೆ ಲಭ್ಯವಾಗಲಿದೆ. ವಿಶೇಷ ಎಂದರೇ, 10 ರಿಂದ 12 ತಳಿಯ ಹಲಸು ಕೂಡ ಲಭ್ಯವಿರಲಿದೆ. ವಿಶೇಷವಾಗಿ ಉತ್ತರ ಕನ್ನಡದಲ್ಲಿ ಜಿಐ ಟ್ಯಾಗ್ ಪಡೆದುಕೊಂಡಿರುವ ಕರಿ ಇಶಾಡ್ ಮಾವು ಕೂಡ ಮೇಳದಲ್ಲಿ ಲಭ್ಯ ಇರಲಿದೆ. ಉಳಿದಂತೆ ರಸಪುರಿ, ಮಲ್ಲಿಕಾ, ಸಿಂಧೂರ, ತೋತಾಪುರಿ ಸೇರಿದಂತೆ ವಿವಿಧ ತಳಿಗಳ ಮಾವು ಸಿಗಲಿದೆ. ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಿಯಾಯಿತಿ ದರದಲ್ಲಿ ಇಲ್ಲಿ ಮಾವು ಮಾರಾಟ ಮಾಡಲಾಗುತ್ತದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed