Bengaluru: ಪ್ರಾಯಕ್ಕೆ ಬರೋ ಮೊದಲೇ ಶುರುವಾದ ಪ್ರೀತಿ; ಮದುವೆ ವಿಚಾರಕ್ಕೆ ಕಿರಿಕ್, ಅಟ್ಟಹಾಸ ಮೆರೆದ ಲವರ್‌! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಬಂಧಿತ ಆರೋಪಿ ವನಾಜ್


Last Updated:

ಅವರಿಬ್ಬರು ಒಟ್ಟೊಟ್ಟಿಗೆ ಬೆಳೆದವರು. ಚಿಕ್ಕವಯಸ್ಸಿನಿಂದಲೇ ಪ್ರೀತಿಗೆ ಬಿದ್ದವರು. ಆದರೆ, ಹೆಣ್ಣಿನ ಮನೆಯವರು ಪರ ಪುರುಷನ ಜೊತೆ ಮದುವೆ ಮಾಡಿದರು. ಈ ವಿಷ್ಯ ಪ್ರಿಯಕರನಿಗೆ ಗೊತ್ತಾಗ್ತಿದ್ದಂತೆ ನೆತ್ತರೋಕುಳಿ ಹರಿಸಿದ್ದಾನೆ.

ಬಂಧಿತ ಆರೋಪಿ ವನಾಜ್
ಬಂಧಿತ ಆರೋಪಿ ವನಾಜ್

ಬೆಂಗಳೂರು: ಮನೆ ತುಂಬಾ ಚೆಲ್ಲಿದ ರಕ್ತ (Home). ಗೋಡೆ ಮೇಲೆಲ್ಲಾ ರಕ್ತದ ಕಲೆ (Blood Marks). ಎತ್ತ ಕಣ್ಣಾಯಿಸಿದರೂ ನೆತ್ತರೋಕುಳಿ. ಹೆಜ್ಜೆ ಇಡೋದಕ್ಕೂ ಜಾಗವಿಲ್ಲ. ಹೆಣ್ಣುಮಗಳ (women) ಎದೆ ಬಗೆದವ ಇಡೀ ಮನೆಯನ್ನೇ ರಕ್ತದಲ್ಲಿ ಮುಳುಗಿಸಿದ್ದಾನೆ. ತನಗೆ ಕೈಕೊಟ್ಟು ಇನ್ನೊಬ್ಬನ ಜೊತೆ ಮದುವೆ (Marriage) ಆಗಿದ್ದಾಳೆ ಅನ್ನೋ ಸುದ್ದಿ ಕಿವಿಗೆ ಬೀಳ್ತಿದ್ದಂತೆ ರಣಕೇಕೆ ಹಾಕಿದ್ದಾನೆ. ಹುಡುಗಿ ಮನೆಗೇ ನುಗ್ಗಿ ನೆತ್ತರೋಕುಳಿ ಹರಿಸಿದ್ದಾನೆ.

ಮದುವೆ ವಿಚಾರಕ್ಕೆ ಕಿರಿಕ್, ಅಟ್ಟಹಾಸ ಮೆರೆದ ಲವರ್‌!

ಇವರಿಬ್ಬರದ್ದು ಪ್ರಾಯಕ್ಕೆ ಬರೋ ಮೊದಲೇ ಶುರುವಾದ ಪ್ರೀತಿ. ಇಬ್ಬರೂ ಜೊತೆ ಜೊತೆಯಾಗಿ ಬೆಳೆದಿದ್ದರು. ಒಟ್ಟೊಟ್ಟಿಗೇ ಓದಿದ್ದರು. ಹೀಗಾಗಿ ಚೈಲ್ಡ್‌ವುಡ್‌ನಲ್ಲೇ ಪ್ರೀತಿ ಪ್ರೇಮ ಅನ್ನೋ ಮೋಹಕ್ಕೆ ಬಿದ್ದಿದ್ದರು. ಆದರೆ, ವಯಸ್ಸು 18 ದಾಟ್ತಿದ್ದಂತೆ ಮಕ್ಕಳ ಪ್ರೀತಿಗೆ ಹೆತ್ತವರೇ ಬ್ರೇಕ್‌ ಹಾಕಿದ್ದರು. ಇದೇ ಈಗ ರಕ್ತಚರಿತ್ರೆ ಸೃಷ್ಟಿಸುವಂತೆ ಮಾಡಿದೆ.

ಈತನ ಹೆಸರು ವನಾಜ್ ಅಂತಾ. ಈಕೆ ನಂದಿನಿ ದಾಸ್. ಇಬ್ಬರೂ ಕೂಡಾ ಮೂಲತಃ ಪಶ್ಚಿಮ ಬಂಗಾಳದವರು. 18 ವರ್ಷ ತುಂಬ್ತಿದ್ದಂತೆ ಹಸೆಮಣೆ ಏರೋ ನಿರ್ಧಾರ ಮಾಡ್ಕೊಂಡಿದ್ದರು. ಆದರೆ, ಹುಡುಗಿ ಮನೆಯವರು ಮಗಳ ಪ್ರೀತಿಗೆ ಸಮ್ಮತಿ ಸೂಚಿಸಿರ್ಲಿಲ್ಲ. ಹೀಗಾಗಿ ಪ್ರೀತಿಸಿದವನನ್ನ ಮರೆತವಳು, ಹೆತ್ತವರು ತೋರಿಸಿದವ್ನ ಜೊತೆ ಹಸೆಮಣೆ ಏರಿದ್ದಳು. ಇದೇ ನೋಡಿ ಪ್ರಿಯಕರನ ಪಿತ್ತ ನೆತ್ತಿಗೇರಿಸಿದ್ದು.

ಯಾವಾಗ ಪ್ರೀತಿಸಿದವಳು ಇನ್ನೊಬ್ಬನ ಪಾಲಾದ್ಲೋ ಪಾಗಲ್‌‌ ಪ್ರಿಯಕರ ನಕಶಿಕಾಂತ ಉರಿದು ಹೋಗಿದ್ದಾನೆ. ನನಗೆ ಸಿಗದವ್ಳು ಇನ್ಯಾರಿಗೂ ಸಿಗಬಾರದು ಅನ್ನೋ ನಿರ್ಧಾರಕ್ಕೆ ಬಂದಿದ್ದಾಳೆ. ಬೆಳಗ್ಗೆ 9:30ರ ಸುಮಾರಿಗೆ ಹುಡುಗಿ ಮನೆಗೆ ನುಗ್ಗಿದ್ದವ, ನಂದಿನಿ ಸಹೋದರಿಯರನ್ನ ರೂಮ್‌ನಲ್ಲಿ ಕೂಡಿ ಹಾಕಿದ್ದಾನೆ. ನಂತರ ಸಿಲಿಂಡರ್‌ ಬ್ಲಾಸ್ಟ್‌ ಮಾಡಿ ಯುವತಿಯನ್ನ ಕೊಲ್ಲೋದಕ್ಕೆ ನೋಡಿದ್ದ. ಆದರೆ ಇದು ಸಾಧ್ಯವಾಗದಿದ್ದಾಗ ಮನಸೋ ಇಚ್ಛೆ ಚಾಕು ಚುಚ್ಚಿದ್ದಾನೆ. ಕೊನೆಗೆ ತಾನೂ ಕೂಡಾ ಚಾಕು ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಯುವತಿ ಕೂಗಾಡ್ತಿದ್ದಂತೆ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಕೂಡಲೇ ಎಂಟ್ರಿಕೊಟ್ಟ ಖಾಕಿ ಪಡೆ ಯುವತಿಯನ್ನ ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ನಾವು ಕೆಲಸಕ್ಕೆ ಹೋದ ಕೂಡಲೇ ಆತ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಇಬ್ಬರೂ ಎಷ್ಟೇ ಪ್ರಯತ್ನಿಸಿದರೂ ಅವರನ್ನು ತಡೆಯಲು ಆಗಲಿಲ್ಲ. ಮಗಳಿಗೆ ತೀವ್ರ ಗಾಯಗಳಾಗಿದೆ ಎಂದು ಗಾಯಾಳು ಯುವತಿ ಎಂದೆ ಜಾದವ್ ದಾಸ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed