Last Updated:
ಆ ಜೋಡಿ ಮದುವೆಯಾಗಿ 8 ತಿಂಗಳಷ್ಟೆ ಆಗಿತ್ತು. ಒಂದಷ್ಟು ದಿನ ಇಬ್ಬರು ಖುಷಿ ಖುಷಿಯಾಗಿ ಒಟ್ಟಿಗೆ ಸಂಸಾರ ಕೂಡ ನಡೆಸಿದ್ದರು. ಬಳಿಕ ಆದೇನಾಯ್ತೊ ಏನೋ ದಂಪತಿಗಳ ನಡುವೆ ವೈಮನಸ್ಸು ಉಂಟಾಗಿತ್ತು. ಇದೆ ವಿಚಾರಕ್ಕೆ ಬೇಸತ್ತ ಮಹಿಳೆ ಇಹಲೋಕ ತ್ಯಜಿಸಿದ್ದಾಳೆ.
ಬೆಂಗಳೂರು: ಸಂಸಾರ (Family) ಅನ್ನೋದೂ ಹಳಿ ಮೇಲಿನ ರೈಲು (Train) ಇದ್ದಂತೆ. ಒಂದೇ ಒಂದು ಹಳಿ ತಪ್ಪಿದ್ರೂ ಅಲ್ಲಿ ಆಗೋದು ದುರಂತ. ಹಾಗೆಯೇ, ಪತಿ-ಪತ್ನಿ (Wife and Husband) ಅನ್ನೋ ಹಳಿ ಮಧ್ಯೆ ಒಬ್ಬರು ಎಡವಿದರೂ ಆಗಬಾರದ್ದು ಆಗೋಗುತ್ತೆ. ಈಕೆಯ ಬಾಳಲ್ಲಿ ಇದೇ ಆಗಿದೆ. ತನ್ನ ವೈವಾಹಿಕ ಬದುಕಿನ (Marriage Life) ಬಗ್ಗೆ ನೂರಾರು ಕನಸು ಕಟ್ಕೊಂಡಿದ್ದಳು. ಮದ್ವೆಯಾದ 8 ತಿಂಗಳಲ್ಲೇ ಪಡಬಾರದ ಕಷ್ಟಪಟ್ಟಿದ್ದಾಳೆ. ಗಂಡನ ಮನೆಯಲ್ಲಿ ಒಂದೊಂದು ದಿನವೂ, ನರಳಿ ನರಳೀ ಈಗ ದುರಂತ (Bengaluru News) ಅಂತ್ಯಕಂಡಿದ್ದಾಳೆ.
ಶಾರದಾ ಆತ್ಮಹತ್ಯೆ ವೇಳೆ ಗಂಡ ಮಹೇಶನಿಗೆ ವಿಡಿಯೋ ಕರೆ ಮಾಡಿದ್ಲಂತೆ. ಹಾಲ್ನಲ್ಲೇ ಕುಳಿತಿದ್ದ ಮಹೇಶನಿಗೆ ಕರೆಮಾಡಿ ನಾನು ನಾನು ಆತ್ಮಹತ್ಯೆ ಮಾಡಿಕೊಳ್ತೆದ್ದೇನೆ ಅಂದಿದ್ಲಂತೆ. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದ ಮಹೇಶ್ ಹಾಲ್ನಲ್ಲೇ ಕುಳಿತು ಸುಮ್ಮನಾಗಿದ್ದಾನೆ. ಈ ವೇಳೆ ಶಾರದಾ ನೇಣಿಗೆ ಶರಣಾಗಿದ್ದಾಳೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮೃತಳ ಸಂಬಂಧಿ ಸುನೀತಾ, ಸ್ನೇಹಿತೆ ಕವಿತಾ, ದುಡ್ಡಿಗಾಗಿಯೇ ಆತನ ಈ ಕೆಲಸ ಮಾಡಿದ್ದಾನೆ. ಆಕೆಯ ಬಳಿ ಸುಮಾರು 120 ಗ್ರಾಂ ಚಿನ್ನಾಭರಣ ಇತ್ತು. ಕೆಲಸಕ್ಕೆ ಹೋಗುವ ವೇಳೆಯೂ ಟಾರ್ಚರ್ ಕೊಟ್ಟಿದ್ದಾನೆ. ಯಾರ ಜೊತೆಯೇ ಮಾತನಾಡುತ್ತಿದೆಯಾ? ಯಾರ ಜೊತೆಗೋ ಹೋಗುತ್ತಿದ್ದೀಯಾ ಅಂತ ಕಿರುಕುಳ ನೀಡುತ್ತಿದ್ದನಂತೆ. ರಾತ್ರಿ ಒಂದು ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ಆ ವೇಳೆಯೇ ವಿಡಿಯೋ ಕಾಲ್ ಮಾಡಿದ್ದಾಳೆ. ಆದರೂ ಏನು ಆಗಿಲ್ಲ ಅನ್ನೋ ರೀತಿ ನಡೆದುಕೊಂಡಿದ್ದಾರೆ. ಶಾರದಾ ನೇಣು ಬಿಗಿದುಕೊಳ್ಳುವ ಫೋಟೋಗಳನ್ನು ವಾಟ್ಸಾಪ್ ಗೂ ಸೇಂಡ್ ಮಾಡಿದ್ದಳಂತೆ. ಆದರೂ ಪತಿ ಪ್ರತಿಕ್ರಿಯೆ ನೀಡಿರಲಿಲ್ಲವಂತೆ ಎಂದು ಆರೋಪಿಸಿದ್ದಾರೆ.
ಒಟ್ನಲ್ಲಿ ಕೋಪಕ್ಕೆ ಬುದ್ದಿ ಕೊಟ್ಟ ಯುವತಿ ಈಗ ಸಾವಿನ ಮನೆ ಸೇರಿದ್ದಾಳೆ. ಮದ್ವೆಯಾದ 8 ತಿಂಗಳಿಗೇ ದುರಂತ ಅಂತ್ಯಕಂಡಿದ್ದಾಳೆ. (ವರದಿ: ಮುನಿರಾಜು, ಕ್ರೈಮ್ ಬ್ಯೂರೋ, ನ್ಯೂಸ್ 18, ಬೆಂಗಳೂರು)
Bangalore [Bangalore],Bangalore,Karnataka
May 09, 2026 12:35 PM IST













