Last Updated:
ಎಸ್ಬಿಐ 1576 ಜೂನಿಯರ್ ಅಸೋಸಿಯೇಟ್ ಮತ್ತು ಎಸ್‌ಸಿಒ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪದವಿ, ಬಿಇ/ಬಿ.ಟೆಕ್, ಎಂ.ಎಸ್ಸಿ, ಎಂಸಿಎ, ಎಂಇ/ಎಂ.ಟೆಕ್ ವಿದ್ಯಾರ್ಹತೆ. ಆಗಸ್ಟ್ 7 ರಿಂದ 27, 2026 ರವರೆಗೆ ಅರ್ಜಿ ಸಲ್ಲಿಸಿ.
ಬೆಂಗಳೂರು: ದೇಶದ ಅತ್ಯಂತ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ (Bank) ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬೃಹತ್ ಉದ್ಯೋಗದ ಗುರಿಯೊಂದಿಗೆ ಮುಂಚೂಣಿಗೆ ಬಂದಿದೆ. ಎಸ್‍ಬಿಐ ತನ್ನ 2026ರ ನೇಮಕಾತಿ ಅಧಿಸೂಚನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ದೇಶಾದ್ಯಂತ ಒಟ್ಟು 1576 ಜೂನಿಯರ್ ಅಸೋಸಿಯೇಟ್ ಹಾಗೂ ಸ್ಪೆಷಲಿಸ್ಟ್ ಕೇಡರ್ ಆಫೀಸರ್ (SCO) ಹುದ್ದೆಗಳನ್ನು (Jobs) ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‍ಲೈನ್ (Online) ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭದ್ರವಾದ ಭವಿಷ್ಯ ಹಾಗೂ ಆಕರ್ಷಕ ವೇತನದ ಕನಸು ಕಾಣುತ್ತಿರುವ ಯುವಕ-ಯುವತಿಯರಿಗೆ ಇದು ಸುವರ್ಣಾವಕಾಶವಾಗಿದೆ.














