Last Updated:
ಕೈಗೆ ಅಂಟಿಕೊಂಡ ರಕ್ತ ತೊಳೆದುಕೊಂಡ್ರೆ ಹೋಗಿ ಬಿಡುತ್ತದೆ. ಆದರೆ, ಹೆಸರಿಗೆ ಅಂಟಿಕೊಂಡ ರಕ್ತ ಉಸಿರು ನಿಂತ್ಮೇಲೂ ಇರುತ್ತದೆ. ಈ ಡೈಲಾಗ್ ಚಿತ್ರದ ಟ್ರೈಲರ್ ಕೊನೆಯಲ್ಲಿ ಬರುತ್ತದೆ. ಆದರೆ, ಇಡೀ ಟ್ರೈಲರ್ ನಿಮ್ಮನ್ನ ಆ ದಿನಗಳಿಗೆ ಕರೆದುಕೊಂಡು ಹೋಗುತ್ತದೆ. ಅದರ ವಿವರ ಇಲ್ಲಿದೆ ಓದಿ.
ಡೈರೆಕ್ಟರ್ ಕೆ.ಎಂ.ಚೈತನ್ಯ (K M Chaitanya) ಅವರ ಆ ದಿನಗಳು ಬಂದು18 ವರ್ಷ ಆಗಿದೆ. ಇಷ್ಟು ವರ್ಷಗಳಲ್ಲಿ ಇವರು ಬೇರೆ ಸಿನಿಮಾಗಳನ್ನು(Movies) ಮಾಡಿದ್ದಾರೆ. ಆದರೂ ಇವರು ಆ ದಿನಗಳು ಚೈತನ್ಯ ಅಂತಲೇ ಗುರುತಿಸಿಕೊಳ್ಳುತ್ತಾರೆ. ಆ ರೀತಿಯ ಚಿತ್ರ ಕೊಟ್ಟಿದ್ದ ಇವರು ಇದೀಗ ಬಲರಾಮನ ದಿನಗಳು (Balaramana Dinagalu) ಹೇಳುತ್ತಿದ್ದಾರೆ. ಇದು ಆ ದಿನಗಳು ಚಿತ್ರದ ಮತ್ತೊಂದು ಅಧ್ಯಾಯ ಅಂತಲೂ ಹೇಳಿಕೊಂಡಿದ್ದಾರೆ. ಆ ದಿನಗಳು ಚಿತ್ರವನ್ನ ಇಂದಿಗೂ ನೆನಪಿಸಿಕೊಳ್ಳುವ ಅಭಿಮಾನಿಗಳಿಗೆ ಬಲರಾಮನ ದಿನಗಳು ಚಿತ್ರವೂ (Balaramana Dinagalu Movie) ಅದೇ ಅನುಭವ ಕೊಡುವಂತೆ ಇದೆ. ಅದರ ಝಲಕ್ ಟ್ರೈಲರ್ ಅಲ್ಲಿಯೇ ಇದೆ. ಅದರ ವಿವರ ವಿಶ್ಲೇಷಣೆ ಇಲ್ಲಿದೆ ಓದಿ.
ಕೈಗೆ ಅಂಟಿಕೊಂಡ ರಕ್ತ ತೊಳೆದುಕೊಂಡ್ರೆ ಹೋಗಿ ಬಿಡುತ್ತದೆ. ಆದರೆ, ಹೆಸರಿಗೆ ಅಂಟಿಕೊಂಡ ರಕ್ತ ಉಸಿರು ನಿಂತ್ಮೇಲೂ ಇರುತ್ತದೆ. ಈ ಒಂದು ಡೈಲಾಗ್ ಟ್ರೈಲರ್ ಆರಂಭದಲ್ಲಿನೂ ಇಲ್ಲ. ಇದನ್ನ ಕೇಳೋಕೆ ನೀವು ಇಡೀ ಟ್ರೈಲರ್ ನೋಡ್ಬೇಕು. ಆ ರೀತಿನೇ ಇಡೀ ಟ್ರೈರಲ್ ಇದೆ.
ವ್ಹಾವ್ ಎಂದ ಆ್ಯಕ್ಷನ್ ಪ್ರಿನ್ಸ್
(ಚಿತ್ರ ಕೃಪೆ: ಕೆ.ಎಂ.ಚೈತನ್ಯ ಇನ್ಸ್ಟಾಗ್ರಾಮ್)
ಬೆಂಗಳೂರಿನ ಮತ್ತೊಂದು ಅಧ್ಯಾಯದ ಕತೆಯನ್ನ ಈ ಟ್ರೈಲರ್ ಸಂಕ್ಷಿಪ್ತವಾಗಿಯೇ ಹೇಳುತ್ತಿದೆ. ಆ ದಿನಗಳು ಚಿತ್ರವನ್ನ ಇಂದಿಗೂ ನೆನಪಿಸಿಕೊಳ್ಳುವ ಜನರಿಗೆ ಡೈರೆಕ್ಟರ್ ಕೆ.ಎಂ.ಚೈತನ್ಯ 18 ವರ್ಷದ ಬಳಿಕ ಮತ್ತೊಮ್ಮೆ ಬೆಂಗಳೂರಿನ ಆ ದಿನಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ.
ಈ ಚಿತ್ರದಲ್ಲಿ ಯಾರದ್ದೂ ಲೈಫ್ ಸ್ಟೋರಿ ಇಲ್ವೇ ಇಲ್ಲ. ಎಲ್ಲವೂ ಇಲ್ಲಿ ಕಾಲ್ಪನಿಕವಾಗಿಯೇ ಇವೆ. ಅದನ್ನೆ ಇಲ್ಲಿ ಮತ್ತೊಮ್ಮೆ ತೆರೆ ಮೇಲೆ ತರುವ ಕೆಲಸ ಆಗಿದೆ.
ಬಲರಾಮನ ದಿನಗಳು ಚಿತ್ರ ಇದೇ ತಿಂಗಳು ಜೂನ್-26 ರಂದು ರಾಜ್ಯದೆಲ್ಲೆಡೆ ರಿಲೀಸ್ ಆಗುತ್ತಿದೆ. ಮಲ್ಟಿಪ್ಲೆಕ್ಸ್ ಮತ್ತು ಸಿಂಗಲ್ ಥಿಯೇಟರ್ ಸೇರಿದಂತೆ 100 ಕ್ಕೂ ಹೆಚ್ಚು ಥಿಯೇಟರ್ ಅಲ್ಲಿ ಈ ಸಿನಿಮಾ ತೆರೆ ಕಾಣುತ್ತಿದೆ.
ಪ್ರಿಯಾ ಆನಂದ್ ಜೋಡಿ
(ಚಿತ್ರ ಕೃಪೆ: ಕೆ.ಎಂ.ಚೈತನ್ಯ ಇನ್ಸ್ಟಾಗ್ರಾಮ್)
ಈ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ಕೊಟ್ಟಿದ್ದಾರೆ. ಇವರ ಸಂಗೀತದಲ್ಲಿ ಇಡೀ ಸಿನಿಮಾ ನಿಮ್ಮನ್ನ ಆ ದಿನಗಳಿಗೆ ಕರೆದುಕೊಂಡು ಹೋಗುತ್ತದೆ. ಆ ರೀತಿನೇ ಇವರ ಸಂಗೀತ ಇದೆ. ಅದರ ಝಲಕ್ ಟ್ರೈಲರ್ ನೋಡಿದಾಗಲೇ ತಿಳಿಯುತ್ತದೆ.
ಈ ಚಿತ್ರದಲ್ಲಿ ಒಂದು ಲವ್ ಸ್ಟೋರಿ ಕೂಡ ಇದೆ. ಬಲರಾಮನಿಗೆ ಇಲ್ಲಿ ನಟಿ ಪ್ರಿಯಾ ಆನಂದ್ ಜೊತೆ ಆಗಿದ್ದಾರೆ. ಇವರ ಪಾತ್ರಕ್ಕೆ ಸಂಬಂಧಿಸಿದಂತೆ ಒಂದು ಡೈಲಾಗ್ ಇಲ್ಲಿದೆ. ಅದು ಟ್ರೈಲರ್ ಅಲ್ಲೂ ರಿವೀಲ್ ಆಗಿದೆ.
“ನೀನು ಸೀರೆ ಉಟ್ಟುಕೊಂಡು ಬಂದಿದ್ದರೆ ಚೆನ್ನಾಗಿ ಇರ್ತಾ ಇತ್ತು” ಅಂತ ಬಲರಾಮ ಇಲ್ಲಿ ಹೇಳ್ತಾರೆ. ಇದು ಬಲರಾಮನ ಮನಸ್ಥಿತಿಯನ್ನು ಬಿಂಬಿಸುತ್ತದೆ ಅಂತಲೂ ಹೇಳಬಹುದು.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದಾರೆ. ಇದನ್ನ ನೋಡಿದ್ಮೇಲೆ ವ್ಹಾವ್ ಅಂತ ಹೇಳಿದ್ದಾರೆ. ಈ ಚಿತ್ರದ ವಿಷ್ಯೂಲಿ ತುಂಬಾನೆ ಚೆನ್ನಾಗಿ ಬಂದಿದೆ ಅಂತ ಹೇಳಿದ್ದಾರೆ.
ಈ ಸಿನಿಮಾದ ಮ್ಯೂಸಿಕ್ ಕೂಡ ಸೂಪರ್ ಆಗಿದೆ. ಆ ದಿನಗಳು ಆದ್ಮೇಲೆ ಈ ಚಿತ್ರದಲ್ಲಿ ಅದನ್ನ ನೋಡಿದೆ ಅನ್ನುವ ಅರ್ಥದಲ್ಲೂ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಈ ಮೂಲಕ ಚಿತ್ರಕ್ಕೆ ಸಪೋರ್ಟ್ ಮಾಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka













