Last Updated:
ಮೈಸೂರಿನ ಪೈಲ್ವಾನ್ ಅಲಿ ಶೇರ್ 20 ವರ್ಷಗಳಲ್ಲಿ 100ಕ್ಕೂ ಹೆಚ್ಚು ಪ್ರಶಸ್ತಿ ಗೆದ್ದಿದ್ದಾರೆ. ಅವರು ಕುಸ್ತಿ ಹಾಗೂ ಸಾಂಪ್ರದಾಯಿಕ ಮೂಳೆ ಚಿಕಿತ್ಸೆ ಎರಡರಲ್ಲೂ ಪರಿಣತರು.
ಮೈಸೂರಿನ (Mysuru) ಐತಿಹಾಸಿಕ ಮಂಡಿ ಮೊಹಲ್ಲಾ ಎಂದರೆ ಅಲ್ಲಿನ ಕುಸ್ತಿ (Wrestling) ಪರಂಪರೆ, ಪೈಲ್ವಾನ್‍ಗಳ (Pailwaan) ಸಾಹಸ ಹಾಗೂ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿ ಎಲ್ಲರಿಗೂ ನೆನಪಾಗುತ್ತದೆ. ಇದೇ ಪುರಾತನ ನೆಲದಲ್ಲಿ ಕಳೆದ 20 ವರ್ಷಗಳಿಂದ ಕುಸ್ತಿ ಅಖಾಡದಲ್ಲಿ ನಿರಂತರ ಸಾಧನೆ ಮಾಡಿಕೊಂಡು ಬರುತ್ತಿರುವ ಖ್ಯಾತ ಪೈಲ್ವಾನ್ ಅಲಿ ಶೇರ್, ಬರೋಬ್ಬರಿ 100ಕ್ಕೂ ಹೆಚ್ಚು ಪ್ರಶಸ್ತಿಗಳನ್ನು (Award) ತಮ್ಮ ಮುಡಿಗೇರಿಸಿಕೊಳ್ಳುವ ಮೂಲಕ ಮೈಸೂರಿನ ಕ್ರೀಡಾ ಕ್ಷೇತ್ರದ ಗಮನವನ್ನು ಸಂಪೂರ್ಣವಾಗಿ ಸೆಳೆದಿದ್ದಾರೆ.













