Last Updated:
ಅಯೋಗ್ಯ-2 ಸಿನಿಮಾ ಫಸ್ಟ್ ಡೇ ರೆಸ್ಪಾನ್ಸ್ ಸಖತ್ ಆಗಿಯೇ ಇದೆ. ಚಿತ್ರ ನೋಡಿದವರು ರಚಿತಾ ಅಭಿನಯವನ್ನ ಕೊಂಡಾಡಿದ್ದಾರೆ. ಸತೀಶ್ ನೀನಾಸಂ ಕೊಟ್ಟ ಸಂದೇಶವನ್ನು ಮೆಚ್ಚಿಕೊಂಡಿದ್ದಾರೆ. ಸಾಧು ಕೋಕಿಲ, ಗಿರಿ, ಶಿವರಾಜ್ ಕೆ.ಆರ್.ಪೇಟೆ ಹಾಸ್ಯಕ್ಕೂ ನಕ್ಕು ನಲಿದಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಅಯೋಗ್ಯ-2 ಚಿತ್ರ (Ayogya-2 Movie) ಜನಕ್ಕೆ ಮೆಚ್ಚುಗೆ ಆಗಿದೆ. ಚಿತ್ರದಲ್ಲಿರೋ ಟ್ವಿಸ್ಟ್‌ಗಳು ಜನರ ಮನಸ್ಸನ್ನು ಗೆದ್ದಿವೆ. ಕೊನೆಯಲ್ಲಿ ಬರುವ ಸ್ಟಾರ್ ಕೂಡ ಜನಕ್ಕೆ ಆಶ್ಚರ್ಯ ಮೂಡಿಸಿದ್ದಾರೆ. ರಚಿತಾ ರಾಮ್ (Rachita Ram) ಅಂತಲೂ ಎಲ್ಲರ ದಿಲ್ ಕದ್ದು ಬಿಟ್ಟಿದ್ದಾರೆ. ಮೊದಲ ದಿನವೇ ಇಡೀ ಅಯೋಗ್ಯ-2 ಚಿತ್ರ (Ayogya-2 Movie) ಪ್ರೇಕ್ಷಕರಿಗೆ ಇಷ್ಟ ಆಗಿದೆ. ರಚಿತಾ ಫ್ಯಾನ್ಸ್ (Rachita Fans) ಕೂಡ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಮೊದಲ ದಿನವೇ ಚಿತ್ರ ನೋಡಿದ ಫ್ಯಾನ್ಸ್ ಇನ್ನು ಏನು ಹೇಳಿದರು ಅನ್ನೋದು ಇಲ್ಲಿದೆ ಓದಿ.














