Luke Williams: ಆರ್‌ಸಿಬಿಗೆ ಚೊಚ್ಚಲ ಟ್ರೋಫಿ ಗೆದ್ದುಕೊಟ್ಟಿದ್ದ ಕೋಚ್ ಈಗ ಮುಂಬೈ ಇಂಡಿಯನ್ಸ್ ಹೊಸ ಹೆಡ್​ ಕೋಚ್! | ಕ್ರೀಡಾ ಸುದ್ದಿ | ACTPnews

ಮುಂಬೈ ಇಂಡಿಯನ್ಸ್  (PTI Photo)


Last Updated:

2027ರ ಮಹಿಳಾ ಪ್ರೀಮಿಯರ್ ಲೀಗ್ (WPL 2027) ಸೀಸನ್ ಅನ್ನು ಗಮನದಲ್ಲಿಟ್ಟುಕೊಂಡು ಮುಂಬೈ ಇಂಡಿಯನ್ಸ್ ಗುರುವಾರ ಈ ನೇಮಕಾತಿಯನ್ನು ಘೋಷಿಸಿದೆ. ಕಳೆದ ಸೀಸನ್ ವರೆಗೆ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ್ದ ಲಿಸಾ ಕೈಟ್ಲಿ ಅವರ ಸ್ಥಾನವನ್ನು ವಿಲಿಯಮ್ಸ್ ವಹಿಸಿಕೊಳ್ಳಲಿದ್ದಾರೆ.

ಮುಂಬೈ ಇಂಡಿಯನ್ಸ್  (PTI Photo)
ಮುಂಬೈ ಇಂಡಿಯನ್ಸ್ (PTI Photo)

ಮುಂಬೈ ಇಂಡಿಯನ್ಸ್ (Mumbai Indians) ಮಹಿಳಾ ತಂಡದ ಕೋಚ್ ಆಗಿ 2024ರಲ್ಲಿ ಆರ್​ಸಿಬಿಗೆ (RCB) ಚೊಚ್ಚಲ ಟ್ರೋಫಿ ತಂದುಕೊಟ್ಟಿದ್ದ ಲ್ಯೂಕ್ ವಿಲಿಯಮ್ಸ್ (Luke Williams) ಅವರನ್ನು ನೇಮಿಸಲಾಗಿದೆ. 2027ರ ಮಹಿಳಾ ಪ್ರೀಮಿಯರ್ ಲೀಗ್ (WPL 2027) ಸೀಸನ್ ಅನ್ನು ಗಮನದಲ್ಲಿಟ್ಟುಕೊಂಡು ಮುಂಬೈ ಇಂಡಿಯನ್ಸ್ ಗುರುವಾರ ಈ ನೇಮಕಾತಿಯನ್ನು ಘೋಷಿಸಿದೆ. ಕಳೆದ ಸೀಸನ್ ವರೆಗೆ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ್ದ ಲಿಸಾ ಕೈಟ್ಲಿ ಅವರ ಸ್ಥಾನವನ್ನು ವಿಲಿಯಮ್ಸ್ ವಹಿಸಿಕೊಳ್ಳಲಿದ್ದಾರೆ.

2 ಆವೃತ್ತಿಗಳಲ್ಲಿ ಆರ್​ಸಿಬಿ ತಂಡದ ಹೆಡ್​ ಕೋಚ್ ಆಗಿದ್ದ ಲ್ಯೂಕ್

ಇಲ್ಲಿಯವರೆಗೆ ನಡೆದಿರುವ ನಾಲ್ಕು ಸೀಸನ್‌ಗಳಲ್ಲಿ, ಮುಂಬೈ ಇಂಡಿಯನ್ಸ್ ಎರಡು ಬಾರಿ ವಿಜೇತರಾಗಿ ಹೊರಹೊಮ್ಮಿದೆ. ಉದ್ಘಾಟನಾ WPL 2023 ಸೀಸನ್ ಮತ್ತು 2025ರ ಪ್ರಶಸ್ತಿಯನ್ನು ತಂಡ ಗೆದ್ದುಕೊಂಡಿದೆ. ತಂಡವು ಈಗ ಮುಂಬರುವ WPL 2027 ಸೀಸನ್‌ನತ್ತ ಗಮನಹರಿಸುತ್ತಿದೆ. ಲ್ಯೂಕ್ ವಿಲಿಯಮ್ಸ್ ಅವರು 2024 ಮತ್ತು 2025ರ ಸೀಸನ್‌ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ್ದರು ಮತ್ತು ತಂಡವನ್ನು ಅದರ ಚೊಚ್ಚಲ ಪ್ರಶಸ್ತಿಗೆ ಮುನ್ನಡೆಸಿದ್ದರು. ಈ ಹೊಸ ಕೋಚಿಂಗ್ ನೇಮಕಾತಿಯೊಂದಿಗೆ, ಮುಂಬೈ ಇಂಡಿಯನ್ಸ್ ಮಹಿಳಾ ತಂಡವು ಮುಂದಿನ ಸೀಸನ್‌ಗಾಗಿ ಹೊಸ ತಂತ್ರದೊಂದಿಗೆ ಮುನ್ನಡೆಯಲು ಸಜ್ಜಾಗಿದೆ.

ಕಳೆದ ಸೀಸನ್​ನಲ್ಲಿ ಕಳಪೆ ಸಾಧನೆ ಕೋಚ್ ಬದಲಿಸಲು ಕಾರಣ

ಲಿಸಾ ಕೈಟ್ಲಿ ಕೇವಲ ಒಂದು ಸೀಸನ್‌ಗೆ ಮುಂಬೈ ತಂಡದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ಕಳೆದ ಸೀಸನ್‌ನಲ್ಲಿ ಮುಂಬೈ ಮಹಿಳಾ ತಂಡದ ಕಳಪೆ ಪ್ರದರ್ಶನದ ನಂತರ ಫ್ರಾಂಚೈಸಿ ಅವರೊಂದಿಗಿನ ಒಪ್ಪಂದವನ್ನು ಕೊನೆಗೊಳಿಸಿತು. ಹಿಂದಿನ ಕೋಚ್ ಎಡ್ವರ್ಡ್ಸ್, ಇಂಗ್ಲೆಂಡ್ ಮಹಿಳಾ ತಂಡದ ಮುಖ್ಯ ಕೋಚ್ ಹುದ್ದೆಯನ್ನು ವಹಿಸಿಕೊಳ್ಳಲು ತೆರಳಿದ್ದರು. ಹಾಗಾಗಿ ಕಳೆದ ಸೀಸನ್‌ನಲ್ಲಿ ಕೈಟ್ಲಿ ಅವರ ಮಾರ್ಗದರ್ಶನದಲ್ಲಿ ಮುಂಬೈ ಇಂಡಿಯನ್ಸ್ ಎಂಟು ಪಂದ್ಯಗಳಲ್ಲಿ ಮೂರು ಗೆಲುವು ಮತ್ತು ಐದು ಸೋಲುಗಳನ್ನು ಕಂಡಿತ್ತು.

ವೆಲ್​ಕಮ್ ಮಾಡಿದ ನೀತಾ ಅಂಬಾನಿ

ಮುಂಬೈ ಇಂಡಿಯನ್ಸ್ ಮಾಲೀಕರಾದ ನೀತಾ ಅಂಬಾನಿ ಅವರು ಲಿಸಾ ಕೈಟ್ಲಿ ಅವರ ಸೇವೆಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಮತ್ತು ಹೊಸ ಕೋಚ್ ಲ್ಯೂಕ್ ವಿಲಿಯಮ್ಸ್ ಅವರನ್ನು ಸ್ವಾಗತಿಸಿದರು. ವಿಲಿಯಮ್ಸ್ ಅವರಿಗೆ ಮಹಿಳಾ ಕ್ರಿಕೆಟ್ ಬಗ್ಗೆ ಉತ್ತಮ ತಿಳುವಳಿಕೆ ಮತ್ತು ಆಟಗಾರರ ಅಭಿವೃದ್ಧಿಯಲ್ಲಿ ಅನುಭವವಿದೆ ಎಂದು ಅವರು ಹೇಳಿದರು. ವಿಲಿಯಮ್ಸ್ ಅವರ ಮಾರ್ಗದರ್ಶನ ಮತ್ತು ಹರ್ಮನ್‌ಪ್ರೀತ್ ಅವರ ನಾಯಕತ್ವದಲ್ಲಿ ತಂಡವು ಮತ್ತಷ್ಟು ಪ್ರಗತಿ ಸಾಧಿಸಲಿದೆ ಎಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದರು.

ಜನವರಿ 14 ರಿಂದ ಫೆಬ್ರವರಿ 27 ರವರೆಗೆ WPL

WPL 2027 ಸೀಸನ್ ಜನವರಿ 14 ರಿಂದ ಫೆಬ್ರವರಿ 27 ರವರೆಗೆ ನಡೆಯಲಿದೆ. WPL 2027ರ ಹರಾಜು ಅಕ್ಟೋಬರ್ 29 ರಂದು ಕೊಚ್ಚಿಯಲ್ಲಿ ನಡೆಯುವ ಸಾಧ್ಯತೆಯಿದೆ. ಐದು ಫ್ರಾಂಚೈಸಿಗಳು ತಮ್ಮಲ್ಲಿ ಉಳಿಸಿಕೊಳ್ಳುವ (Retained) ಮತ್ತು ಬಿಡುಗಡೆ ಮಾಡುವ (Released) ಆಟಗಾರರ ಪಟ್ಟಿಯನ್ನು ಘೋಷಿಸಲು ಸೆಪ್ಟೆಂಬರ್ 28 ಅನ್ನು ಅಂತಿಮ ದಿನಾಂಕವನ್ನಾಗಿ ನಿಗದಿಪಡಿಸಲಾಗಿದೆ. ವಾರಣಾಸಿಯ ಹೊಸ ಕ್ರೀಡಾಂಗಣದಲ್ಲಿ WPL 2027 ಸೀಸನ್‌ನ ಪಂದ್ಯಗಳು ನಡೆಯುವ ಸಾಧ್ಯತೆಯಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed