Last Updated:
ಅಯೋಗ್ಯ-2 ಚಿತ್ರದ ಮುದ್ದು ಪುಟ್ಟಲಕ್ಷ್ಮಿ ಹಾಡಿಗೆ ಚಿತ್ರದ ಡೈರೆಕ್ಟರ್ ಮಹೇಶ್ ರೀಲ್ಸ್ ಮಾಡಿದ್ದಾರೆ. ವಿಶೇಷವೆಂದ್ರೆ ಪತ್ನಿ ಚೈತ್ರಾ ಒಂದು ರೀಲ್ಸ್ ಅಲ್ಲಿ ಸಾಥ್ ಕೊಟ್ಟಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಅಯೋಗ್ಯ-2 ಚಿತ್ರದ (Ayogya-2 Movie) ಪ್ರಚಾರ ಜೋರಾಗಿದೆ. ಮುದ್ದುಲಕ್ಷ್ಮಿ ಹಾಡಿನ ರೀಲ್ಸ್ ಕೂಡ ಅಷ್ಟೆ ಚೆನ್ನಾಗಿಯೇ ಆಗುತ್ತಿವೆ. ವಿಶೇಷವೆಂದ್ರೆ ಇದೀಗ ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ (Mahesh Kumar) ತಮ್ಮ ಪತ್ನಿ ಚೈತ್ರಾ (Chaitra) ಅವರೊಟ್ಟಿಗೆ ರೀಲ್ಸ್ ಮಾಡಿದ್ದಾರೆ. ಇದು ಇವರ ಚಿತ್ರದ ಹಾಡಿನ ಮೊದಲ ರೀಲ್ಸ್ (Reels) ಕೂಡ ಆಗಿದೆ. ಇದನ್ನ ಸ್ವತಃ ಮಹೇಶ್ ತಮ್ಮ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಹಂಚಿಕೊಂಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಡೈರೆಕ್ಟರ್ ಮಹೇಶ್ ಕುಮಾರ್ ರೀಲ್ಸ್ ಮಾಡಿದ್ದಾರೆ. ತಮ್ಮ ಚಿತ್ರದ ಮುದ್ದು ಮುದ್ದು ಪುಟ್ಟಲಕ್ಷ್ಮಿ ಹಾಡಿಗೇನೆ ರೀಲ್ಸ್ ಮಾಡಿದ್ದಾರೆ. ವಿಶೇಷವೆಂದರೆ ಈ ರೀಲ್ಸ್ ಅಲ್ಲಿ ಮಹೇಶ್ ಕುಮಾರ್ ಪತ್ನಿ ಕೂಡ ಇದ್ದಾರೆ.
ಮಹೇಶ್-ಚೈತ್ರಾ ರೀಲ್ಸ್ (ಚಿತ್ರ ಕೃಪೆ: ಮಹೇಶ್ ಕುಮಾರ್ ಇನ್ಸ್ಟಾಗ್ರಾಮ್)
ಈ ಬಗ್ಗೆ ಮಹೇಶ್ ಕುಮಾರ್ ಹೀಗೆ ಬರೆದುಕೊಂಡಿದ್ದಾರೆ. “ನನ್ನ ಜೀವನದ ಮುದ್ದು ಪುಟ್ಲಕ್ಷ್ಮಿ ಜೊತೆ ನನ್ನ ಚಿತ್ರದ ಮೊದಲ ರೀಲ್ಸ್ ವಿಡಿಯೋ” ಅಂತಲೇ ಬರೆದಿದ್ದಾರೆ.
ಡೈರೆಕ್ಟರ್ ಮಹೇಶ್ ಕುಮಾರ್ ಇಲ್ಲಿ ಸಿಂಪಲ್ ಆಗಿಯೇ ಡ್ಯಾನ್ಸ್ ಮಾಡಿದ್ದಾರೆ. ಆದರೆ, ಮಹೇಶ್ ಪತ್ನಿ ಚೈತ್ರಾ ಅವರು ನಿಂತಲ್ಲಿಯೇ ತುಂಬಾನೆ ಚೆನ್ನಾಗಿಯೇ ಡ್ಯಾನ್ಸ್ ಮಾಡಿದ್ದಾರೆ.
ಈ ಒಂದು ರೀಲ್ಸ್ನ ವಿಷ್ಯೂಲ್ ಕ್ವಾಲಿಟಿ ಕೂಡ ಚೆನ್ನಾಗಿದೆ. ಸಿನಿಮಾದ ಕ್ವಾಲಿಟಿನೇ ಈ ರೀಲ್ಸ್ಗೆ ಇದೆ. ಇದನ್ನ ಸ್ವತಃ ಮಹೇಶ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್ನ ಪೇಜ್ ಅಲ್ಲಿಯೇ ಹಂಚಿಕೊಂಡಿದ್ದಾರೆ.
ಮುದ್ದು ಪುಟ್ಟಲಕ್ಷ್ಮಿ ಹಾಡಿಗೆ ಡೈರೆಕ್ಟರ್ ರೀಲ್ಸ್; ಪತ್ನಿ ಸಾಥ್ (ಚಿತ್ರ ಕೃಪೆ: ಮಹೇಶ್ ಕುಮಾರ್ ಇನ್ಸ್ಟಾಗ್ರಾಮ್)
ವಿವಿಧ ರೀತಿಯ ರೀಲ್ಸ್ ಕೂಡ ಮಾಡುತ್ತಿದ್ದಾರೆ. ಯುಟ್ಯೂಬ್ ಚಾನೆಲ್ ಸೇರಿದಂತೆ ಇತರ ಚಾನೆಲ್ಗಳಿಗೆ ಸಂದರ್ಶನ ಕೂಡ ಕೊಡುತ್ತಿದ್ದಾರೆ. ಇಲ್ಲಿ ಅಷ್ಟೆ ಎಂಟರಟೈನಿಂಗ್ ಕಂಟೆಂಟ್ ಅನ್ನೆ ಜನರೇಟ್ ಮಾಡ್ತಿದ್ದಾರೆ.
ಅಯೋಗ್ಯ-2 ಚಿತ್ರದ ಕತೆ ಕೂಡ ಹಳ್ಳಿ ಹಿನ್ನೆಲೆಯ ಕತೇನೆ ಆಗಿದೆ. ಹಾಗಾಗಿಯೇ ಚಿತ್ರದ ಕಾರ್ಯಕ್ರಮಗಳು ಹಳ್ಳಿ ಕಾನ್ಸೆಪ್ಟ್ ಹೊಂದಿವೆ. ಚಿತ್ರದ ಶೂಟಿಂಗ್ ಎಲ್ಲಿ ಮಾಡಿದ್ದರೋ ಅಲ್ಲಿಯೇ ಈ ಸಿನಿಮಾದ ಪ್ರಚಾರ ಕಾರ್ಯಕ್ರಮ ಶುರು ಆಗಿದೆ.
ಅಯೋಗ್ಯ-7 ರಂದು ಈ ಚಿತ್ರ ರಾಜ್ಯದೆಲ್ಲೆಡೆ ರಿಲೀಸ್ ಆಗುತ್ತಿದೆ. ಮಹೇಶ್ ಕುಮಾರ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ವಿಶ್ವಜೀತ್ ರಾವ್ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ. ಎಂ.ಮುನೇ ಗೌಡ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.
ಸ್ಟಾರ್ ಕಾಸ್ಟ್ ವಿಚಾರಕ್ಕೆ ಬಂದ್ರೆ, ಸತೀಶ್ ನೀನಾಸಂ, ಬುಲ್ ಬುಲ್ ರಚಿತಾ ರಾಮ್, ಶಿವರಾಜ್ ಕೆ.ಆರ್.ಪೇಟೆ, ದಡಿಯಾ ಗಿರಿ ಹಾಗೂ ರವಿಶಂಕರ್ ಸೇರಿದಂತೆ ಇನ್ನು ಅನೇಕರು ಈ ಚಿತ್ರದಲ್ಲಿದ್ದಾರೆ.
ಅರ್ಜುನ್ ಜನ್ಯ ಅವರ ಸಂಗೀತ ಈ ಚಿತ್ರಕ್ಕಿದೆ. ಇದರೊಟ್ಟಿಗೆ ಈ ಚಿತ್ರದ ಮೊದಲ ಭಾಗ ಅಯೋಗ್ಯ ಒನ್ ಹಿಟ್ ಆಗಿದೆ. ಅದೇ ಕತೆನೇ ಅಯೋಗ್ಯ-2 ಚಿತ್ರದಲ್ಲಿ ಮುಂದುವರೆದಿದೆ. ಈ ಕತೆಯನ್ನ ಜನ ಹೇಗೆಲ್ಲ ಇಷ್ಟಪಡ್ತಾರೆ ಅನ್ನುವ ಕುತೂಹಲ ಜಾಸ್ತಿನೇ ಆಗಿದೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka














