Last Updated:
ಅಯೋಗ್ಯ-2 ಸಿನಿಮಾದ ಹೊಸ ಮಾಹಿತಿ ಹೊರ ಬಂದಿದೆ. ಚಿತ್ರದ ಹಾಡುಗಳ ರೆಕಾರ್ಡಿಂಗ್ ವಿಷಯವೇ ಇದಾಗಿದೆ. ಇದರ ವಿವರ ಇಲ್ಲಿದೆ ಓದಿ.
ಅಯೋಗ್ಯ ಚಿತ್ರದಲ್ಲಿ (Ayogya-2 Movie) ಒಳ್ಳೆ ಹಾಡುಗಳು ಇದ್ದವು. ಏನಮ್ಮಿ ಏನಮ್ಮಿ ಹಾಡು ಹಿಟ್ ಆಗಿತ್ತು. ಇಂದಿಗೂ ಈ ಹಾಡಿನ ಮೋಡಿ ಇದೆ. ಅಯೋಗ್ಯ-2 ಚಿತ್ರದಲ್ಲೂ(Ayogya-2 Film) ಇಂತಹ ಚಮತ್ಕಾರದ ನಿರೀಕ್ಷೆ ಇದೆ. ಅರ್ಜುನ್ ಜನ್ಯ ಈ ಹಿಂದಿನ ಅಯೋಗ್ಯ ಚಿತ್ರಕ್ಕೂ ಮ್ಯೂಸಿಕ್ ಮಾಡಿದ್ದರು. ಈ ಚಿತ್ರದ ಎರಡನೇ ಭಾಗಕ್ಕೂ ಇದೇ ಅರ್ಜುನ್ ಜನ್ಯ (Arjun Janya) ಸಂಗೀತ ಮಾಡ್ತಿದ್ದಾರೆ. ಸಾಂಗ್ ರೆಕಾರ್ಡಿಂಗ್ (Song Recording) ಕೆಲಸ ಈಗ ಶುರು ಆಗಿದೆ. ಇದರ ಒಂದು ವಿಡಿಯೋ ಕೂಡ ಹೊರ ಬಂದಿದೆ. ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ಇದನ್ನ ಹಂಚಿಕೊಂಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಅಯೋಗ್ಯ-2 ಸಂಗೀತದ ಕೆಲಸ ಶುರು
ಈ ಒಂದು ಸಂಗೀತದ ಕೆಲಸಕ್ಕೂ ಮುಂಚೆ ಎಂದಿನಂತೆ ಪೂಜೆ ಮಾಡಲಾಗಿದೆ. ಚಿತ್ರದ ನಾಯಕ ಸತೀಶ್ ನೀನಾಸಂ, ಸಿನಿಮಾ ಡೈರೆಕ್ಟರ್ ಮಹೇಶ್ ಕುಮಾರ್, ನಿರ್ಮಾಪಕರು ಹೀಗೆ ಎಲ್ಲರೂ ದುಬಾರಿ ಕಾರು ಹತ್ತಿ ಅರ್ಜುನ್ ಜನ್ಯ ಅವರ ರೆಕಾರ್ಡಿಂಗ್ ಸ್ಟುಡಿಯೋಗೆ ಬಂದು ಇಳಿದಿದ್ದಾರೆ.
ಈ ಒಂದು ಸಾಂಗ್ ರೆಕಾರ್ಡಿಂಗ್ ಕೆಲಸವನ್ನ ಅಷ್ಟೆ ಅದ್ದೂರಿ ಆಗಿಯೇ ಮಾಡಿದ್ದಾರೆ. ಚಿತ್ರದ ನಾಯಕ ಸತೀಶ್, ನಿರ್ದೇಶಕ ಮಹೇಶ್ ಕುಮಾರ್, ನಿರ್ಮಾಪಕರು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಲಿರಿಕ್ ರೈಟರ್ ಚೇತನ್ ಕುಮಾರ್, ಹೀಗೆ ಇವರೆಲ್ಲ ಪಂಚೆ ಮತ್ತು ಶರ್ಟ್ ತೊಟ್ಟಿದ್ದಾರೆ. ಒಂದೇ ಬಣ್ಣದ ಡ್ರೆಸ್ ತೊಟ್ಟು ಎಲ್ಲರ ಗಮನ ಸೆಳೆದಿದ್ದಾರೆ. ಈ ಒಂದು ಪೂಜಾ ಕಾರ್ಯಕ್ರಮದ ವಿಡಿಯೋ ಕೂಡ ಮಾಡಲಾಗಿದೆ.
ಡೈರೆಕ್ಟರ್ ಮಹೇಶ್ ಕುಮಾರ್ ತಮ್ಮ ಈ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಮಾಧ್ಯಮಗಳೊಟ್ಟಿಗನೂ ಶೇರ್ ಮಾಡಿದ್ದಾರೆ. ಈ ಒಂದು ವಿಡಿಯೋದ ಕೊನೆಯಲ್ಲಿ ಇನ್ನೂ ಒಂದು ವಿಷಯವೂ ಇದೆ.
ಅದೇನೆಂದ್ರೆ ಚಿತ್ರ ಯಾವಾಗ ರಿಲೀಸ್ ಆಗುತ್ತದೆ ಅನ್ನೋದೇ ಆಗಿದೆ. ಅಂದ್ಹಾಗೆ ಈ ಚಿತ್ರ ಮಳೆಗಾಲದಲ್ಲಿಯೇ ಬರ್ತಿದೆ. ಈ ಮಳೆಗಾದಲ್ಲಿ ಯಾವ ದಿನ ಅನ್ನೋದು ಇನ್ನಷ್ಟೆ ರಿವೀಲ್ ಆಗಬೇಕಿದೆ.
ಒಂದೇ ಬಣ್ಣದ ಡ್ರೆಸ್
ಅಯೋಗ್ಯ-2 ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಈ ವಿಷಯವನ್ನು ಡೈರೆಕ್ಟರ್ ಮಹೇಶ್ ಹಂಚಿಕೊಂಡಿದ್ದಾರೆ. ಹಾಗೆ ಚಿತ್ರದ ಕೊನೆಯ ಹಂತದ ಚಿತ್ರೀಕರಣದಲ್ಲಿ ಸಾಂಗ್ ಶೂಟಿಂಗ್ ಕೂಡ ಮಾಡಿದ್ದಾರೆ.
ಈ ಒಂದು ಹಾಡನ್ನ ಅಷ್ಟೆ ಅದ್ದೂರಿ ಆಗಿಯೇ ತೆಗೆದಿದ್ದಾರೆ. ರಚಿತಾ ರಾಮ್ ಹಾಗೂ ನೀನಾಸಂ ಸತೀಶ್ ಜೋಡಿಯ ಈ ಹಾಡು ಅಷ್ಟೆ ರೋಮ್ಯಾಂಟಿಕ್ ಆಗಿಯೇ ಇದೆ. ಈ ಹಾಡಿನ ಮೇಕಿಂಗ್ ವಿಡಿಯೋ ಕೂಡ ಹೊರ ಬಂದಿತ್ತು.
ಡೈರೆಕ್ಟರ್ ಮಹೇಶ್ ಕುಮಾರ್ ಚಿತ್ರ ಜೀವನದಲ್ಲಿ ಅಯೋಗ್ಯ ಮೊದಲ ಚಿತ್ರವೇ ಆಗಿದೆ. ಈ ಚಿತ್ರ ಹಿಟ್ ಆದ್ಮೇಲೆ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಜೊತೆಗೆ ಮದಗಜ ಮಾಡಿದರು.
ಈ ಚಿತ್ರ ಆದ್ಮೇಲೆ ಅಯೋಗ್ಯ-2 ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಬಗ್ಗೆನೂ ಅಷ್ಟೆ ನಿರೀಕ್ಷೆ ಇದೆ. ಕಾರಣ, ಅಯೋಗ್ಯ ಚಿತ್ರ ಹಿಟ್ ಆಗಿತ್ತು. ಅದರ ಮುಂದುವರೆದ ಭಾಗವೇ ಈ ಅಯೋಗ್ಯ-2 ಚಿತ್ರವಾಗಿದೆ.
ಹಾಗೆ ಈ ಎರಡನೇ ಭಾಗದ ಕಥೆಯನ್ನ ಮಹೇಶ್ ಅದ್ದೂರಿಯಾಗಿಯೇ ಹೇಳುತ್ತಿದ್ದಾರೆ. ದೊಡ್ಡಮಟ್ಟದಲ್ಲಿಯೇ ಈ ಚಿತ್ರ ರಿಲೀಸ್ ಮಾಡುವ ಪ್ಲಾನ್ ಕೂಡ ಮಾಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka













