Last Updated:
Ayatollah Ali Khamenei: ಖಮೇನಿ ಅಂತ್ಯಕ್ರಿಯೆಗೆ ಕೋಟ್ಯಾಂತರ ಜನ ಭಾಗಿಯಾಗೋ ಸಾಧ್ಯತೆ ಇದೆ. ಈ ವೇಳೆ ಸುಮಾರು 3 ಸಾವಿರ ಮಂದಿ ಸಾವನ್ನಪ್ಪೋ ಸಾಧ್ಯತೆ ಇದೆಯಂತೆ. ಹೀಗಾಗಿ ಈಗಾಗಲೇ ಇರಾನ್ ಮುಂಚಿತವಾಗಿ 3 ಸಾವಿರ ಸಮಾಧಿಗಳನ್ನು ತಯಾರು ಮಾಡಿ ಇಟ್ಟಿದ್ದಾಗಿ ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.
ತೆಹ್ರಾನ್: ಇರಾನಿನ ಮಾಜಿ ಸರ್ವೋಚ್ಚ ನಾಯಕ (former Iranian Supreme Leader) ಅಯತುಲ್ಲಾ ಅಲಿ ಖಮೇನಿ (Ayatollah Ali Khamenei) ಅಂತ್ಯಕ್ರಿಯೆಗೆ (funeral) ಇರಾನ್ (Iran) ಸಜ್ಜಾಗಿದೆ. ಇಡೀ ವಾರ ಶೋಕಾಚರಣೆ (mourning) ನಡೆಯುತ್ತಿದ್ದು, ಜುಲೈ 9ರಂದು ಖಮೇನಿ ಅಂತ್ಯಕ್ರಿಯೆ ನಡೆಸಲಿದೆ. 125ಕ್ಕಿಂತಲೂ ಹೆಚ್ಚು ದಿನಗಳ ಕಾಲ ಖಮೇನಿ ಮೃತದೇಹ ಸಂರಕ್ಷಿಸಿ ಇಡಲಾಗಿದ್ದು, ಇದೀಗ ಖಮೇನಿ ಅಂತ್ಯಕ್ರಿಯೆಯಲ್ಲಿ ಕೋಟ್ಯಾಂತರ ಜನ ಭಾಗಿಯಾಗೋ ಸಾಧ್ಯತೆ ಇದೆ. ಈ ವೇಳೆ ಸುಮಾರು 3 ಸಾವಿರ ಮಂದಿ ಸಾವನ್ನಪ್ಪೋ ಸಾಧ್ಯತೆ ಇದೆಯಂತೆ. ಹೀಗಾಗಿ ಈಗಾಗಲೇ ಇರಾನ್ ಮುಂಚಿತವಾಗಿ 3 ಸಾವಿರ ಸಮಾಧಿಗಳನ್ನು (graves) ತಯಾರು ಮಾಡಿ ಇಟ್ಟಿದ್ದಾಗಿ ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.
ಖಮೇನಿ ಅವರ ಅಂತ್ಯಕ್ರಿಯೆ ಮತ್ತು ವಾರಪೂರ್ತಿ ನಡೆಯುವ ಶೋಕಾಚರಣೆಯ ಮೆರವಣಿಗೆಗಳ ಸಮಯದಲ್ಲಿ ಸಂಭವಿಸಬಹುದಾದ ಬೃಹತ್ ಜನಸಂದಣಿ ಮತ್ತು ಅಪಘಾತಗಳು ನಡೆಯಲಿವೆ. ಇದನ್ನು ಎದುರಿಸಲು ಇರಾನ್ ಅಧಿಕಾರಿಗಳು ತುರ್ತು ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ವರದಿಯಾಗಿದೆ. ಜನದಟ್ಟಣೆ ಮತ್ತು ಶಾಖದ ಅಲೆಯಿಂದಾಗಿ 1,500 ರಿಂದ 3,000 ಜನರು ಸಾಯಬಹುದು ಎಂಬ ತೀರ್ಮಾನದ ಆಧಾರದ ಮೇಲೆ ಅಧಿಕಾರಿಗಳು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ವೆಲ್ಟ್ ವರದಿ ಮಾಡಿದೆ.
ಖಮೇನಿ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಇಡಿ ಇರಾನ್ನಾದ್ಯಂತ ತೀವ್ರ ಬಿಗಿ ಭದ್ರತೆ ಕೈಗೊಳ್ಳಲಾಗಿಗೆ. ತೆಹ್ರಾನ್ನಲ್ಲಿ ಸಂಚಾರ ನಿರ್ಬಂಧಗಳು, ವಿಮಾನ ಪ್ರಯಾಣಕ್ಕೂ ಸ್ಟ್ರಿಕ್ಟ್ ರೂಲ್ಸ್ ಹೇರಲಾಗಿದೆ. ಸುಮಾರು 20 ಪೊಲೀಸರು ಸೇರಿದಂತೆ ಮಿಲಿಯನ್ ಮಿಲಿಯನ್ ಜನರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಖಮೇನಿ ಮೃತದೇಹದ ಮೆರವಣಿಗೆ ಸ್ಥಳಕ್ಕೆ ಸಾವಿರಾರು ಬಸ್ಗಳನ್ನು ನಿಯೋಜನೆ ಮಾಡಲಾಗಿದೆ. ತಾತ್ಕಾಲಿಕ ಅಡುಗೆಮನೆಗಳು ಮತ್ತು ದುಃಖಿತರಿಗೆ ಸ್ಥಳಾವಕಾಶ ಕಲ್ಪಿಸಲು ಶಾಲೆಗಳು ಮತ್ತು ಮಸೀದಿಗಳ ಬಳಕೆ ಯೋಜನೆಗಳಲ್ಲಿ ಸೇರಿವೆ. ಮೇಯರ್ ಅಲಿರೆಜಾ ಜಕಾನಿ ನೇತೃತ್ವದ ಟೆಹ್ರಾನ್ ಪುರಸಭೆಯು ಸುಮಾರು 11,000 ಬಸ್ಗಳನ್ನು ನಿಯೋಜಿಸಿದ್ದು, ಮೆಟ್ರೋ ಮತ್ತು ಬಸ್ ಕ್ಷಿಪ್ರ ಸಾರಿಗೆ ಸೇವೆಗಳು ಸಮಾರಂಭಗಳ ಸಮಯದಲ್ಲಿ 24/7 ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಈಗಾಗಲೇ ಶನಿವಾರದಿಂದಲೇ ತೆಹ್ರಾನ್ನಲ್ಲಿ ಖಮೇನಿ ಅಂತ್ಯಕ್ರಿಯೆ ಸಮಾರಂಭಗಳು ಪ್ರಾರಂಭವಾಗಿವೆ. ಇರಾಕಿನ ನಜಾಫ್ ಮತ್ತು ಕರ್ಬಲಾ ನಗರಗಳಿಗೆ ತೆರಳುವ ಮೊದಲು ಕೋಮ್ ಮೂಲಕ ಖಮೇನಿ ಮೃತದೇಹದ ಮೆರವಣಿಗೆ ಮುಂದುವರಿಯುವ ನಿರೀಕ್ಷೆಯಿದೆ. ಖಮೇನಿಯವರ ಅಂತ್ಯಕ್ರಿಯೆಯನ್ನು ಗುರುವಾರ ಅಂದರೆ ಜುಲೈ 9ರಂದು ಮಶಾದ್ನಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಮೂರು ದಿನಗಳ ಈ ಕಾರ್ಯಕ್ರಮಗಳಿಗಾಗಿ ತೆಹ್ರಾನ್ನ ಪ್ರತಿಯೊಂದು ಜಿಲ್ಲೆಗೆ ಸರಿಸುಮಾರು 5 ಕೋಟಿಯಿಂದ 6.5 ಕೋಟಿ ರೂಪಾಯಿವರೆಗೆ ಹಂಚಿಕೆ ಮಾಡಲಾಗಿದೆ ಎಂದು ಪುರಸಭೆಯ ನೌಕರರು WELT ಗೆ ತಿಳಿಸಿದ್ದಾರೆ. ಇದು ಅಗ್ನಿಶಾಮಕ ಇಲಾಖೆ, ಸಾರಿಗೆ ಅಧಿಕಾರಿಗಳು, ಉದ್ಯಾನವನಗಳ ಸಂಘಟನೆ ಮತ್ತು ನಿರ್ಮಾಣ ಘಟಕಗಳಂತಹ ಸಂಸ್ಥೆಗಳಿಗೆ ಹಣವನ್ನು ಹೊರತುಪಡಿಸಿ ಇಷ್ಟು ಹಣ ನೀಡಲಾಗಿದ್ಯಂತೆ. ಇನ್ನು ತೆಹ್ರಾನ್ಗೆ ಸುಮಾರು ₹ 150 ಕೋಟಿ ನೀಡಲಾಗಿದೆ ಅಂತ ವರದಿಗಳು ತಿಳಿಸಿವೆ.













