Arjun Janya: ಅರ್ಜುನ್ ಜನ್ಯ ಜೀವನದ ಆ ವಿಶೇಷ ವ್ಯಕ್ತಿ ಯಾರು? ಇವರ ಜೊತೆ ನೋಡಿದ ಕೊನೆ ಚಿತ್ರ ಯಾವುದು? | | ACTPnews

ಅರ್ಜುನ್ ಜನ್ಯ ಜೀವನದ ಆ ವಿಶೇಷ ವ್ಯಕ್ತಿ ಯಾರು?


Last Updated:

ಅರ್ಜುನ್ ಜನ್ಯ ಅವರಿಗೆ ಎ.ಆರ್.ರೆಹಮಾನ್ ಸಂಗೀತ ಪರಿಚಯ ಮಾಡಿಸಿದ್ದು ಯಾರು? ಇವರ ಜೀವನದಲ್ಲಿ ಆ ವ್ಯಕ್ತಿಗೆ ಅದೆಷ್ಟು ಮಹತ್ವ ಇದೆ? ರೋಜಾ ಚಿತ್ರ ನೋಡಿದ್ಮೇಲೆ ಏನ್ ಆಯಿತು? ಅದು ಮುಂದೆ ಇದೆ ಓದಿ.

ಅರ್ಜುನ್ ಜನ್ಯ ಜೀವನದ ಆ ವಿಶೇಷ ವ್ಯಕ್ತಿ ಯಾರು?
ಅರ್ಜುನ್ ಜನ್ಯ ಜೀವನದ ಆ ವಿಶೇಷ ವ್ಯಕ್ತಿ ಯಾರು?

ಅರ್ಜುನ್ ಜನ್ಯ (Arjun Janya) ಅವರ ಸಿನಿಮಾ ಜರ್ನಿಯಲ್ಲಿ (Film Journy) ಎ.ಆರ್.ರೆಹಮಾನ್ (A. R. Rahman) ತುಂಬಾನೆ ಸ್ಪೂರ್ತಿ ನೀಡಿದ್ದಾರೆ. ಇವರು ಸಂಗೀತ ಲೋಕಕ್ಕೆ ಬರೋಕೆ ಎ.ಆರ್.ರೆಹಮಾನ್ ಸಂಗೀವೆ ಕಾರಣ ಅಂದ್ರು ತಪ್ಪಿಲ್ಲ. ಸ್ವತಃ ಅರ್ಜುನ್ ಜನ್ಯ ಇದನ್ನ ಹೇಳಿಕೊಳ್ಳುವುದು ಇದೆ. ಆದರೆ, ಎ.ಆರ್.ರೆಹಮಾನ್ ಅವರ ಸಂಗೀತವನ್ನ ಇವರಿಗೆ ಪರಿಚಯಿಸಿದ ಒಬ್ವ ವಿಶೇಷ ವ್ಯಕ್ತಿ ಇದ್ದಾರೆ. ಅವರ ಬಗ್ಗೆ ಅರ್ಜುನ್ ಜನ್ಯ (Arjun Janya) ಹೇಳ್ತಾನೇ ಇರ್ತಾರೆ. ಅವರು ಯಾರು? ಮತ್ತು ಸಂಗೀತವನ್ನ ಇವರು ಹೇಗೆ ಕಲಿತರು? ಯಾರ ಜೊತೆಗೆ ಇವರು ಕೆಲಸ ಮಾಡಿದರು. ಈ ಎಲ್ಲ ಮಾಹಿತಿ ಇಲ್ಲಿದೆ ಓದಿ.

ಅಪ್ಪ ಐ ಲವ್ ಯು ಪಾ..

ಅರ್ಜುನ್ ಜನ್ಯ ಒಳ್ಳೆ ಹಾಡುಗಳನ್ನ ಕೊಟ್ಟಿದ್ದಾರೆ. ಇವರ ಸಂಗೀತದಲ್ಲಿ ಉತ್ತಮ ಹಾಡುಗಳೇ ಬಂದಿವೆ. ಅದರಲ್ಲಿ ಚೌಕ ಚಿತ್ರದ ‘ಅಪ್ಪ ಐ ಲವ್ ಯು’ ಕೂಡ ಒಂದಾಗಿದೆ.
magical composer arjun janya unknown facts of musical journey

ಅಪ್ಪ ಐ ಲವ್ ಯು ಪಾ..

ಈ ಒಂದು ಹಾಡು ಇಂದಿಗೂ ಬಹುತೇಕ ಶೋಗಳಲ್ಲಿ ಪ್ಲೇ ಆಗುತ್ತದೆ. ಸಂಗೀತ ಕಾರ್ಯಕ್ರಮದಲ್ಲೂ ಇದು ಇದ್ದೇ ಇರುತ್ತದೆ. ಅಪ್ಪನ ಬಗ್ಗೆ ಇರೋ ಒಂದು ಅದ್ಭುತ ಹಾಡು ಇದಾಗಿದೆ. ಅರ್ಜುನ್ ಜನ್ಯ ಅವರೇ ಕಂಪೋಸ್ ಮಾಡಿದ್ದಾರೆ. ವಿ.ನಾಗೇಂದ್ರ ಪ್ರಸಾದ್ ಇದನ್ನ ಬರೆದಿದ್ದಾರೆ.

ಏನಿದು..?

ಅರ್ಜುನ್ ಜನ್ಯ ಅವರಿಗೆ ಎ.ಆರ್.ರೆಹಮಾನ್ ಸಂಗೀತ ಪರಿಚಯಿಸಿರೋದು ಯಾರು ಅಂತ ಕುತೂಹಲ ಹುಟ್ಟುಹಾಕಿದ್ದಾಯಿತು. ಆದರೆ, ಅಪ್ಪನ ಬಗ್ಗೆ ಕತೆ ಹೇಳ್ತಾ ಇದ್ದೀರಲ್ಲ ಅಂತ ನಿಮಗೆ ಅನಿಸಿರಬಹುದು.

ಆದರೆ, ಇಲ್ಲಿಯೇ ಒಂದು ವಿಚಾರ ಇದೆ. ಅರ್ಜುನ್ ಜನ್ಯ ಅವರು ಸಂಗೀತ ಲೋಕಕ್ಕೆ ಬರೋ ಮೊದಲು ಇವರು ತಂದೆ ಅಶ್ವತ್ಥ್ ಕುಮಾರ್ ಜೊತೆಗೆ ನೋಡಿದ ಚಿತ್ರ ಯಾವುದು ಗೊತ್ತಾ? ಹೌದು, ರೋಜಾ ಚಿತ್ರವನ್ನೆ ಇವರು ನೋಡಿದ್ದಾರೆ.

ರೋಜಾ ಸಿನಿಮಾ

ರೋಜಾ ಸಿನಿಮಾದಲ್ಲಿ ಒಳ್ಳೆ ಹಾಡುಗಳು ಇವೆ. ಈ ಹಾಡುಗಳನ್ನ ಕೇಳಿದ ಅರ್ಜುನ್ ಜನ್ಯ ತಂದೆ ತುಂಬಾನೆ ಖುಷಿ ಪಟ್ಟಿದ್ದಾರೆ. ಅರ್ಜುನ್ ಜನ್ಯ ಕೂಡ ಅಪ್ಪನ ಜೊತೆಗೆ ಈ ಚಿತ್ರ ನೋಡಿ ಸಂತೋಷ ಪಟ್ಟಿದ್ದಾರೆ.

ಆಗಲೇ ಅರ್ಜುನ್ ಜನ್ಯ ಅವರ ತಂದೆ ಒಂದು ಮಾತು ಹೇಳಿದ್ದಾರೆ. ಲೋಕೇಶ್ ಕುಮಾರ್ (ಅರ್ಜುನ್ ಜನ್ಯ ಮೂಲ ಹೆಸರು) ನೋಡು ಈ ಚಿತ್ರದ ಸಂಗೀತ ಎಷ್ಟು ಚೆನ್ನಾಗಿದೆ ಅಂತಲೇ ಹೇಳಿದ್ದಾರೆ. ಅಷ್ಟೆ ನೋಡಿ.

magical composer arjun janya unknown facts of musical journey

ರೋಜಾ ಸಿನಿಮಾ
ಮುಂದೆ ಏನ್ ಆಯ್ತು

ರೋಜಾ ಚಿತ್ರ ನೋಡಿ ಖುಷಿ ಪಟ್ಟಿದ್ದು ಆಯಿತು. ಆದರೆ, ಮುಂದಿನ ಮೂರು ತಿಂಗಳಲ್ಲಿಯೇ ಅರ್ಜುನ್ ಜನ್ಯ ಅವರ ತಂದೆ ತೀರಿ ಹೋದ್ರು. ಇವರ ಅಗಲಿಕೆಯಲ್ಲಿಯೇ ಅರ್ಜುನ್ ಜನ್ಯ ಅದೆಷ್ಟೋ ಸಲ ರೋಜಾ ಚಿತ್ರದ ಹಾಡುಗಳನ್ನ ಕೇಳಿದ್ದಾರೆ.

ಆದರೆ, ಹೀಗೆ ಕೇಳಿದ ಹಾಡುಗಳು ಇವರ ಮನಸ್ಸಿನಲ್ಲಿ ಮ್ಯಾಜಿಕ್ ಕ್ರಿಯೇಟ್ ಮಾಡಿವೆ. ಸಂಗೀತದ ಬಗ್ಗೆ ಆಸಕ್ತಿ ಮೂಡಿಸಿವೆ. ಸಂಗೀತ ಸಾಧನಗಳ ಬಗ್ಗೆ ತಿಳಿದುಕೊಳ್ಳುವಂತೆ ಮಾಡಿವೆ.

ಜೇಮ್ಸ್ ಮಾಸ್ಟರ್

ಅರ್ಜುನ್ ಜನ್ಯ ಮುಂದೆ ಒಂದು ಕೆಲಸ ಮಾಡಿದರು. ಪಿಯಾನೋ ಕಲಿಯೋದು ಹೇಗೆ? ಅಂತೆಲ್ಲ ಯೋಚನೆ ಮಾಡಿದ್ದಾರೆ. ಜೇಮ್ಸ್ ಅನ್ನುವ ಪಿಯಾನೋ ಟೀಚರ್ ಅವರನ್ನು ಭೇಟಿ ಆಗಿದ್ದಾರೆ.

ಮುಂದೆ ಅವರಿಂದಲೇ ಅರ್ಜುನ್ ಜನ್ಯ ಪಿಯಾನೋ ಕಲಿತುಕೊಂಡಿದ್ದಾರೆ. ಕೆ.ಕಲ್ಯಾಣ್ ಮತ್ತು ವಿ.ಮನೋಹರ್ ಅವರ ಜೊತೆಗೂ ಕೆಲಸ ಮಾಡಿದ್ದಾರೆ. ಹಾಗೆ ಈ ಎಲ್ಲ ವಿಷಯವನ್ನ Anand Audio Celebrity Podcast ಅಲ್ಲಿಯೇ ಅರ್ಜುನ್ ಜನ್ಯ ಅವರು ಶೇರ್ ಮಾಡಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports